WhatsApp ಬಳಕೆದಾರರಿಗೆ ಮತ್ತೊಂದು ಅಪಾಯ ಎದುರಾಗಿದೆ. ಸೈಬರ್ ಸಿಕ್ಯೋರೀಟಿ ಸಂಸ್ಥೆಯಾಗಿರುವ Kaspersky ಹೊಸದೊಂದು ವಾಟ್ಸ್ ಆಪ್ ಮಾಡ್ ಅನ್ನು ಪತ್ತೆಹಚ್ಚಿದ್ದು, ಇದು ಬಳಕೆದಾರರ ಡಿವೈಸ್ ನಲ್ಲಿ ಮಾಲ್ವೇಯರ್ ತಲುಪಿಸುವ ಕೆಲಸ ಮಾಡುತ್ತದೆ. ಈ ಮಾಡ್ ನ ಹೆಸರು FMWhatsApp ಆಗಿದ್ದು, ಇದರಲ್ಲಿನ Triada Trojan ಮಾಲ್ವೇಯರ್ ಬಳಕೆದಾರರ ಡಿವೈಸ್ ನಿಂದ ದತಾಂಶ ಕಳ್ಳತನ ಮಾಡುತ್ತದೆ. ಮಾಡ್ಸ್ ಗಳು ಯಾವುದೇ ಒಂದು ಆಪ್ ನ ಯುಸರ್ ಕ್ರಿಯೇಟೆಡ್ ವರ್ಶನ್ ಗಳಾಗಿವೆ. ಈ ವರ್ಶನ್ ಗಳಿಗೆ ಕಂಪನಿಗಳು ಅನುಮೊದಿಸುವುದಿಲ್ಲ. ಈ ಆಪ್ ಗಳಲ್ಲಿ ಮೂಲ ಆಪ್ ಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳು ಸಿಗುವ ಕಾರಣ ಬಳಕೆದಾರರು ಇವುಗಳತ್ತ ಆಕರ್ಷಿತರಾಗುತ್ತಾರೆ.
ಹ್ಯಾಕರ್ ಗಳು ದತ್ತಾಂಶ ಕದಿಯುವ ಸಾದ್ಯತೆ
ಕ್ಯಾಸ್ಪರ್ಸ್ಕಿಯ ಪ್ರಕಾರ, ಈ ಮೋಡ್ಗಳು ಬಳಕೆದಾರರ ಸಾಧನದಲ್ಲಿ ವೈರಸ್ ಹೊಂದಿರುವ ಜಾಹೀರಾತುಗಳನ್ನು ಬಿತ್ತರಿಸುತ್ತವೆ ಮತ್ತು ಇವುಗಳಲ್ಲಿ ಕೆಲವು ಆಡ್-ಆನ್ಗಳು ಬಳಕೆದಾರರಿಗೆ ಅರಿವಿಲ್ಲದೆ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುತ್ತವೆ. ಕಳವಳಕಾರಿ ಸಂಗತಿಯೆಂದರೆ, ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಆಡ್-ಆನ್ಗಳು ಬಳಕೆದಾರರ ಫೋನ್ನಲ್ಲಿರುವ ಡೇಟಾವನ್ನು ಪ್ರವೇಶಿಸಬಹುದು ಮತ್ತು ಅದನ್ನು ಕದಿಯಬಹುದು.
ಇದನ್ನೂ ಓದಿ-Joker Virus : ನಿಮ್ಮ ಫೋನಿನಲ್ಲಿ ಈ 8 ಆಪ್ಗಳಿದ್ದರೆ ಈಗಲೇ ಡಿಲೀಟ್ ಮಾಡಿ : ಇಲ್ಲದಿದ್ದರೆ ತಪ್ಪಿದ್ದಲ್ಲ ಅಪಾಯ!
SMS ಓದಲು ಅನುಮತಿ ಕೇಳುತ್ತವೆ ಈ ಮಾಡ್ ಆಪ್ ಗಳು
FMWhatsApp ಬಳಕೆದಾರರ ಡಿವೈಸ್ ಆಕ್ಸಸ್ ಗಾಗಿ SMS ಓದಲು ಅನುಮತಿ ಕೇಳುತ್ತದೆ ಹಾಗೂ ಬಳಕೆದಾರರು ಈ ಫೇಕ್ ಆಪ್ ಗೆ ಅನುಮತಿ ನೀಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ನಕಲಿ ಆಪ್ನಲ್ಲಿರುವ ಎಲ್ಲಾ ಮಾಲ್ವೇರ್ಗಳು ಎಸ್ಎಂಎಸ್ಗೆ ಪ್ರವೇಶವನ್ನು ಪಡೆಯುತ್ತವೆ. ಇದರ ಲಾಭವನ್ನು ಪಡೆದುಕೊಂಡು, ಬಳಕೆದಾರರ ಪಠ್ಯ ಸಂದೇಶ ಪೆಟ್ಟಿಗೆಯಲ್ಲಿ ಬರುವ ವೆರಿಫಿಕೇಶನ್ ಕೋಡ್ ಅನ್ನು ಬಳಸಿಕೊಂಡು ಹ್ಯಾಕರ್ಗಳು ಮಾಲ್ವೇರ್ ಸಹಾಯದಿಂದ ಪ್ರೀಮಿಯಂ ಚಂದಾದಾರಿಕೆಯನ್ನು ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ-YouTube ವಿಡಿಯೋ ಮೂಲಕ ನೀವು ಮಿಲಿಯನೇರ್ ಆಗಬಹುದು : ಹೇಗೆ? ಇಲ್ಲಿ ನೋಡಿ
ತಜ್ಞರು ಬಳಕೆದಾರರಿಗೆ ಈ ಆಪ್ ಗಳಿಂದ ದೂರವಿರಲು ಸಲಹೆ ನೀಡಿದ್ದಾರೆ
ಈ ಕುರಿತು ಹೇಳಿಕೆ ನೀಡುವ ಕ್ಯಾಸ್ಪರ್ಸ್ಕಿಯ ಭದ್ರತಾ ತಜ್ಞರು ಈ ಆಪ್ನ ಬಳಕೆದಾರರಿಗೆ ಅದರ ಅಪಾಯಗಳ ಬಗ್ಗೆ ತಿಳಿದಿಲ್ಲ ಮತ್ತು ಇದಕ್ಕೆ ಕಾರಣ ಆಪ್ನಲ್ಲಿ ಕಂಡುಬರುವ ಹೆಚ್ಚುವರಿ ವೈಶಿಷ್ಟ್ಯಗಳು ಎನ್ನುತ್ತಾರೆ . ಇಂತಹ ಆ್ಯಪ್ಗಳಿಂದ ದೂರವಿರಲು ತಜ್ಞರು ಬಳಕೆದಾರರನ್ನು ಸಲಹೆ ನೀಡಿದ್ದಾರೆ. ಬಳಕೆದಾರರಿಗೆ ಸಲಹೆ ನೀಡುವಾಗ, ಆಪ್ಗಳನ್ನು ಯಾವಾಗಲೂ ಅಧಿಕೃತ ಪ್ಲೇ ಸ್ಟೋರ್ನಿಂದ ಮಾತ್ರ ಡೌನ್ಲೋಡ್ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ. ಪ್ಲೇ ಸ್ಟೋರ್ (Google Play Store) ನಿಂದ ಡೌನ್ಲೋಡ್ ಮಾಡುವ ಆಪ್ಗಳಲ್ಲಿ ಬಳಕೆದಾರರು ಕಡಿಮೆ ವೈಶಿಷ್ಟ್ಯಗಳನ್ನು ಪಡೆಯಬಹುದು, ಆದರೆ ಅವುಗಳಲ್ಲಿ ಮಾಲ್ವೇರ್ ಮತ್ತು ಇತರ ಯಾವುದೇ ಅಪಾಯಗಳಿರುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ