ಬೆಂಗಳೂರು: ಮುಂಬರುವ 2023ರ ವಿಧಾನಸಭಾ ಚುನಾವಣೆ(2023 Vidhan Sabha Election)ಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ನೀಡುತ್ತೇವೆಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಕರ್ನಾಟಕ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಡಿ.ಕೆ.ಶಿವಕುಮಾರ್ ಕಾಸು-ಸಿದ್ದರಾಮಯ್ಯ ಬಾಸು ಎಂಬಂತಾಗಿದೆ’ ಅಂತಾ ವ್ಯಂಗ್ಯವಾಡಿದೆ.
ಮಾನ್ಯ @DKShivakumar ಅವರೇ,
ಸಿದ್ದರಾಮಯ್ಯ ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ.
ನೀವು ಎಷ್ಟೇ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಿಲ್ಲ. ನಿಮ್ಮ ಮುಖ್ಯಮಂತ್ರಿ ಕನಸಿಗೆ ಎಳ್ಳು ನೀರು ಬಿಡಲು @siddaramaiah ಸಿದ್ದರಾಗಿದ್ದಾರೆ.
ನಿಮ್ಮದೀಗ "ಬಗಲ್ ಮೆ ದುಷ್ಮನ್" ಪರಿಸ್ಥಿತಿ!#ಅಸಹಾಯಕಡಿಕೆಶಿ
— BJP Karnataka (@BJP4Karnataka) October 26, 2021
‘ಡಿ.ಕೆ.ಶಿವಕುಮಾರ್(DK Shivakumar) ಅವರೇ ಸಿದ್ದರಾಮಯ್ಯ ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ನೀವು ಎಷ್ಟೇ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಿಲ್ಲ. ನಿಮ್ಮ ಮುಖ್ಯಮಂತ್ರಿ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ. ನಿಮ್ಮದೀಗ ‘ಬಗಲ್ ಮೆ ದುಷ್ಮನ್’ ಪರಿಸ್ಥಿತಿ!. ‘ಡಿಕೆಶಿ ಕಾಸು - ಸಿದ್ದರಾಮಯ್ಯ ಬಾಸು’ ಎಂಬಂತಾಗಿದೆ ಕಾಂಗ್ರೆಸ್ ಪಕ್ಷದ ಸ್ಥಿತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಲೇ ಸಾಗುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಪರೋಕ್ಷವಾಗಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಡಿಕೆಶಿಯವರದ್ದು ಬರೇ ಕನಸೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: Spice Jet: ಬೆಳಗಾವಿಯಲ್ಲಿ ರಾಂಗ್ ರನ್ವೇನಲ್ಲಿ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್, ತಪ್ಪಿದ ಭಾರೀ ದುರಂತ..!
‘ನಮಸ್ತೆ ಟ್ರಂಪ್’ ಮಾಡಿ ಇಡೀ ದೇಶಕ್ಕೆ ವೈರಸ್ ಹಂಚಿದಿರಿ..!
ಇನ್ನು ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯವನ್ನು ತೋರಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿಕೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಿಡಿಕಾರಿದೆ. ‘ಕೊರೊನಾ ಮುನ್ನೆಚ್ಚರಿಕೆ ನಿರ್ಲಕ್ಷಿಸಿ ‘ನಮಸ್ತೆ ಟ್ರಂಪ್’ ಮಾಡಿ ಇಡೀ ದೇಶಕ್ಕೆ ವೈರಸ್ ಹಂಚಿದಿರಿ. ಯೋಜಿತವಲ್ಲದ ಲಾಕ್‌ಡೌನ್ ಘೋಷಿಸಿ ಎಲ್ಲವನ್ನೂ ಬಂದ್ ಮಾಡಿ, ಅನ್ನ-ನೀರು ಕೊಡದೆ ಜನರ ಪ್ರಾಣ ಹಿಂಡಿದಿರಿ, ಆ್ಯಂಬುಲೆನ್ಸ್, ಆಸ್ಪತ್ರೆ, ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್, ಔಷಧ, ಚಿಕಿತ್ಸೆ ಕೊಡದೆ ಜನರು ಸಾಯುವಂತೆ ಮಾಡಿದಿರಿ’ ಅಂತಾ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ: ಸಿದ್ದರಾಮಯ್ಯ
‘ಹೂಳಲು ಜಾಗವಿಲ್ಲದೆ ಗಂಗಾ ನದಿಯಲ್ಲಿ ಹೆಣಗಳು ತೇಲುವಂತೆ ಮಾಡಿದಿರಿ, ವಿದೇಶಗಳಿಗೆ ಲಸಿಕೆ ರಫ್ತು ಮಾಡಿ ನಮ್ಮ ಲಸಿಕಾ ಕೇಂದ್ರಗಳ ಮುಂದೆ ನೋ ಸ್ಟಾಕ್ ಬೋರ್ಡ್ ಹಾಕಿದಿರಿ, ಸಂತ್ರಸ್ತರಿಗೆ ಪರಿಹಾರ ನೀಡದೆ ಬೀದಿಗೆ ತಂದಿರಿ, ಈಗ100 ಕೋಟಿ ಮೊದಲನೇ ಡೋಸ್ ಕೊಡಲು ಇಷ್ಟು ಸುದೀರ್ಘ ಸಮಯ ತೆಗೆದುಕೊಂಡು ಸಂಭ್ರಮಿಸುತ್ತಿದ್ದೀರಿ’ ಅಂತಾ ಕಾಂಗ್ರೆಸ್(Congress) ವ್ಯಂಗ್ಯವಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ