Omicronನ ಪ್ರತಿಯೊಂದು ಕೊರೊನಾ ರೂಪಾಂತರಿಗೂ ರಾಮಬಾಣ ಈ ಔಷಧಿ ಎಂದ ವಿಜ್ಞಾನಿ

Glaxosmithkline says antibody drug sotrovimab works against omicron variant: ಈ ಕೋವಿಡ್ -19 ಪ್ರತಿಕಾಯ ಆಧಾರಿತ ಔಷಧವನ್ನು ತಯಾರಿಸುವ ಕಂಪನಿಯಾದ GSK, ಸೋಟ್ರೋವಿಮಾಬ್‌ನ (Sotrovimab) ಪೂರ್ವಭಾವಿ ದತ್ತಾಂಶವು ವಿಶ್ವಾದ್ಯಂತ ಆತಂಕ ಹೆಚ್ಚಳಕ್ಕೆ ಕಾರಣವಾದ  ಓಮಿಕ್ರಾನ್ ಸೇರಿದಂತೆ ಕರೋನಾದ ಇತರ ಹಲವು ರೂಪಾಂತರಗಳ ವಿರುದ್ಧ ಬಹಳ ಪರಿಣಾಮಕಾರಿ ಎಂದು ಕಂಡುಬಂದಿದೆ.

Written by - Nitin Tabib | Last Updated : Dec 7, 2021, 05:05 PM IST
  • ದೊಡ್ಡ ಭರವಸೆ ವ್ಯಕ್ತಪಡಿಸಿದ ಬ್ರಿಟನ್ ವಿಜ್ಞಾನಿ
  • ಓಮಿಕ್ರಾನ್ ವಿರುದ್ಧ ಪರಿಣಾಮಕಾರಿ ಈ ಔಷಧಿ
  • ವಿಶ್ವದ ಮುಂದೆ ತನ್ನ ವರದಿ ಪ್ರಸ್ತುತ ಪಡಿಸಿದ ಕಂಪನಿ.
Omicronನ ಪ್ರತಿಯೊಂದು ಕೊರೊನಾ  ರೂಪಾಂತರಿಗೂ ರಾಮಬಾಣ ಈ ಔಷಧಿ ಎಂದ ವಿಜ್ಞಾನಿ title=
Omicron Anti Dose (File Photo)

ಲಂಡನ್: ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾದ (Coronavirus) ಓಮಿಕ್ರಾನ್ (Omicron Variant) ರೂಪಾಂತರದ ಬಗ್ಗೆ ಬ್ರಿಟನ್ ವಿಜ್ಞಾನಿಯೊಬ್ಬರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ವಾಸ್ತವವಾಗಿ, ಅವರ ಔಷಧಿ ಸೊಟ್ರೋವಿಮಾಬ್ (Omicron Anti Dose) ಒಮಿಕ್ರಾನ್‌ನ ಪ್ರತಿಯೊಂದು ರೂಪಾಂತರದ ವಿರುದ್ಧ ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಜಂಟಿ ಉದ್ಯಮ ಔಷಧ
ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​(GSK) ಮೂಲಕ ಯುಎಸ್ ಪಾಲುದಾರ ವಿರ್ (ವಿಐಆರ್) ಜೈವಿಕ ತಂತ್ರಜ್ಞಾನದ ಸಹಯೋಗದೊಂದಿಗೆ ಈ ವಿಶೇಷ ಔಷಧವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಈ ಯುಕೆ ವಿಜ್ಞಾನಿ ಹೇಳಿದ್ದಾರೆ. ಈಗ ಈ ಔಷಧಿಯನ್ನು ಓಮಿಕ್ರಾನ್ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಜಗತ್ತಿಗೆ ನೆಮ್ಮದಿಯ ಸುದ್ದಿ
ಈ ಕೋವಿಡ್ -19 ವಿರುದ್ಧ ಪ್ರತಿಕಾಯ ಆಧಾರಿತ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಯಾದ ಜಿಎಸ್‌ಕೆ, ಸೋಟ್ರೋವಿಮಾಬ್‌ನ (Sotrovimab) ಪೂರ್ವಭಾವಿ ದತ್ತಾಂಶವು ವಿಶ್ವಾದ್ಯಂತ ಆತಂಕಕ್ಕೆ ಕಾರಣವಾದ ಓಮಿಕ್ರಾನ್ ಸೇರಿದಂತೆ ಕರೋನಾದ ಇತರ ಹಲವು ರೂಪಾಂತರಗಳ ವಿರುದ್ಧ ಬಹಳ ಪರಿಣಾಮಕಾರಿ ಸಾಬೀತಾಗಿದೆ.

ಈ ಔಷಧಿಯ ಫಲಿತಾಂಶಗಳನ್ನು ದೃಢೀಕರಿಸಲು ಸೊಟ್ರೋವಿಮಾಬ್ ಚಿಕಿತ್ಸೆಯಲ್ಲಿ ಹೆಚ್ಚಿನ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು,  ಇದು ಜಗತ್ತಿಗೆ ಭಾರಿ ನೆಮ್ಮದಿ ನೀಡುವ ಸುದ್ದಿಯೇ ಎಂದರೆ ತಪ್ಪಾಗಲಾರದು.

ಓಮಿಕ್ರಾನ್ ವಿರುದ್ಧ ಪ್ರಭಾವಶಾಲಿ
Omicron ಹೊಂದಿರುವ 37 ರೂಪಾಂತರಗಳ ವಿರುದ್ಧ ತನ್ನ ಔಷಧ ಸೊಟ್ರೋವಿಮಾಬ್ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಳೆದ ವಾರವೂ, ಪ್ರಿ-ಕ್ಲಿನಿಕಲ್ ಪರೀಕ್ಷೆಗಳ ನಂತರ, ಸೊಟ್ರೋವಿಮಾಬ್ ಔಷಧಿ ಒಮಿಕ್ರಾನ್ ವಿರುದ್ಧ ಕೆಲಸ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿತ್ತು. ಇದೇ ವೇಳೆ  WHO ಉಲ್ಲೇಖಿಸಿರುವ ಪ್ರತಿಯೊಂದು ರೂಪಾಂತರದ ವಿರುದ್ಧವೂ ಈ ಔಷಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯು ಇದೀಗ ಒತ್ತಿ ಹೇಳಿದೆ.

ಇದನ್ನೂ ಓದಿ-Omicron ಕುರಿತು ಟೆನ್ಶನ್ ಹೆಚ್ಚಿಸುವ ವರದಿ ಬಹಿರಂಗ, ಹೊಸ ರಿಪೋರ್ಟ್ ಹೇಳಿದ್ದಾದರೂ ಏನು?

ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು
Reuters ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕಂಪನಿಯು ಈ ಕುರಿತು ಹೇಳಿಕೆಯೊಂದನ್ನು ಹೊರಡಿಸಿದ್ದು, ಸೋಟ್ರೋವಿಮಾಯಿಬ್ ಮೂಲಕ ಕೊರೊನಾ ಸೋಂಕಿಗೆ ಗುರಿಯಾದ ಮಧ್ಯಮ ಮತ್ತು ಉನ್ನತ ಮಟ್ಟದ ರೋಗಿಗಳ ಆಸ್ಪತ್ರೆಗೆ ದಾಖಲಾಗುವ ಅಥವಾ ಸಾವಿನ ಅಪಾಯವನ್ನು ಶೇ.80ರಷ್ಟು ಕಡಿಮೆ ಮಾಡಬಹುದು ಎನ್ನಲಾಗಿದೆ. 

ಇದನ್ನೂ ಓದಿ-Time Traveller Alert! ಡಿಸೆಂಬರ್ 25ರಂದು ಸಂಭವಿಸಲಿರುವ ಈ ಘಟನೆಯಿಂದ ವಿಶ್ವವೇ ಬದಲಾಗಲಿದೆಯಂತೆ!

ಅಧ್ಯಯನದಲ್ಲಿ, ವಿಜ್ಞಾನಿಗಳು ಈ ಪ್ರತಿಕಾಯ ಔಷಧವು ಓಮಿಕ್ರಾನ್ ಸೇರಿದಂತೆ SARS-CoV-2 ನ ಎಲ್ಲಾ ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ಪ್ರಸ್ತುತ, ಈ ಅಧ್ಯಯನದ ಕುರಿತು ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ. 

ಇದನ್ನೂ ಓದಿ -Omicron COVID Variant: ಕೇವಲ ಒಂದು ದಿನದಲ್ಲಿ ಯುಕೆಯಾದ್ಯಂತ 50% ಕ್ಕಿಂತ ಹೆಚ್ಚಿನ ಒಮಿಕ್ರಾನ್ ಕೋವಿಡ್ ಪ್ರಕರಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News