ಉಡುಪಿ: ಉಡುಪಿಯಲ್ಲಿ ಎರಡು ಒಮಿಕ್ರಾನ್ ಕೇಸ್(Omicron Variant) ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಹೇಳಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ಪ್ರಕರಣಗಳ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದ್ದಾರೆ.
ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಇಬ್ಬರೂ ಸಂಪೂರ್ಣ ಆರೋಗ್ಯಕರವಾಗಿದ್ದಾರೆ. ಒಬ್ಬರು ಕ್ಯಾನ್ಸರ್ ಪೀಡಿತರರಾಗಿದ್ದರೂ ಆರೋಗ್ಯ ಬಿಗಡಾಯಿಸಿಲ್ಲ. ಈ ಇಬ್ಬರೂ ಸಂಪೂರ್ಣ ಆರೋಗ್ಯಕರವಾಗಿದ್ದಾರೆ. ಇಬ್ಬರಿಗೂ ಎರಡು ಡೋಸ್ ಕೋವಿಶೀಲ್ಡ್ ವ್ಯಾಕ್ಸಿನೇಶನ್(Covishield Vaccine) ಆಗಿದೆ. ಲಸಿಕೆ ತೆಗೆದುಕೊಂಡ ಕಾರಣ ಯಾವುದೇ ದುಷ್ಪರಿಣಾಮ ಆಗಿಲ್ಲ. ಇವರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದ ಯಾರಿಗೂ ಪಾಸಿಟಿವ್ ಇಲ್ಲ. ಸುತ್ತಮುತ್ತ ನಡೆಸಿದ 2 ಸಾವಿರ ಟೆಸ್ಟ್ ರಿಪೋರ್ಟ್ ನೆಗೆಟಿವ್ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಅವಮಾನ: ಕಿಡಗೇಡಿಗಳನ್ನು ಗುಂಡಿಕ್ಕಿ ಸಾಯಿಸಿ ಎಂದ ಕೆ.ಎಸ್.ಈಶ್ವರಪ್ಪ
Five cases of Omicron have been confirmed on Dec 19th:
🔹 Dharwad: 54 yr male
🔹 Bhadravathi: 20 yr female
🔹 Udupi: 82 yr male and 73 yr female
🔹 Mangaluru: 19 yr female#Omicronindia #Covid_19 @BSBommai— Dr Sudhakar K (@mla_sudhakar) December 20, 2021
ಒಮಿಕ್ರಾನ್ ರೂಪಾಂತರಿ ವೈರಸ್ ಬಗ್ಗೆ ಯಾವುದೇ ರೀತಿಯ ಭಯ ಬೇಡ, ಆದರೆ ಎಚ್ಚರವಿರಲಿ. 1 ವಾರದಲ್ಲಿ 19 ಸಾವಿರ ಕೊರೊನಾ ಟೆಸ್ಟ್ ಮಾಡಿದ್ದೇವೆ. ಜಿಲ್ಲೆಯ ಪಾಸಿಟಿವಿಟಿ ಶೇ.0.11ರಷ್ಟು ಇದೆ. ಜಿಲ್ಲೆಯಲ್ಲಿ ಇದುವರೆಗೆ ಶೇ.95.6ರಷ್ಟು ಫಸ್ಟ್ ಡೋಸ್ ಹಾಗೂ ಶೇ.80ರಷ್ಟು ಸೆಕೆಂಡ್ ಡೋಸ್ ಲಸಿಕೆ(COVID-19 Vaccine)ಯನ್ನು ನೀಡಲಾಗಿದೆ. ಡಿಸೆಂಬರ್ ಕೊನೆಗೆ ಶೇ.90ರಷ್ಟು ತಲುಪಲು ಪ್ರಯತ್ನಿಸುತ್ತೇವೆ. ಪಂಚಾಯತ್ ವಾರ್ಡ್ ನಲ್ಲಿ ವ್ಯಾಕ್ಸಿನ್ ಡ್ರೈವ್ ಮಾಡುತ್ತೇವೆ. ವಿದೇಶ, ಮಹಾರಾಷ್ಟ್ರ ಮತ್ತು ಕೇರಳದ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡುತ್ತೇವೆಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ‘ಒಮಿಕ್ರಾನ್’ ಸಂಖ್ಯೆ 167ಕ್ಕೆ ಏರಿಕೆ
ಭಾರತದ ಒಮಿಕ್ರಾನ್ ಪ್ರಕರಣ(Omicron Variant Case)ಗಳ ಸಂಖ್ಯೆ ಈಗ ಕನಿಷ್ಠ 167 ಆಗಿದೆ. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರ (54), ದೆಹಲಿ (24), ರಾಜಸ್ಥಾನ (17) ಮತ್ತು ಕರ್ನಾಟಕ (19), ತೆಲಂಗಾಣ (20), ಗುಜರಾತ್ (11), ಕೇರಳ (15), ಆಂಧ್ರಪ್ರದೇಶ (1), ಚಂಡೀಗಢ (1), ತಮಿಳುನಾಡು (1) ಮತ್ತು ಪಶ್ಚಿಮ ಬಂಗಾಳ (4) ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ನಟ ಪುನೀತ್ ರಾಜ್‍ಕುಮಾರ್ ನಾಮಫಲಕ ಕೆಡವಿದ ಕಿಡಿಗೇಡಿಗಳು: ಗ್ರಾಮಸ್ಥರ ಆಕ್ರೋಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.