ಬೆಂಗಳೂರು: ಪ್ಯಾನ್ ಇಂಡಿಯಾ ಪರಿಕಲ್ಪನೆ ಭಾರತೀಯ ಸಿನಿಮಾದಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಿಂದ ಹೆಚ್ಚಾಗಿ ಬಳಕೆಗೆ ಬಂದಿದ್ದರೂ ಕೂಡ, ಈ ಟ್ರೆಂಡ್ ಗೆ ಮೊದಲ ಬಾರಿಗೆ 1959 ರಲ್ಲಿಯೇ ಅಣ್ಣಾವ್ರು ಅಡಿಪಾಯ ಹಾಕಿದ್ದರು ಎನ್ನುವ ಸಂಗತಿ ಬಹುತೇಕ ಜನರಿಗೆ ಗೊತ್ತಿಲ್ಲ ಎಂದು ಕಾಣುತ್ತದೆ.
ಇದನ್ನೂ ಓದಿ: ತೂಫಾನ್ ಬಳಿಕ ಈಗ ಸುಲ್ತಾನ್ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!
ಇತ್ತೀಚಿಗೆ ಕನ್ನಡ ಚಿತ್ರರಂಗ ಬಹು ಭಾಷೆಗಳಲ್ಲಿ ಚಿತ್ರಗಳನ್ನು ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಸಂಸ್ಕೃತಿ ಅಧಿಕವಾಗಿದೆ.ಕನ್ನಡದ 'ಕೆ.ಜಿ.ಎಫ್' ಮತ್ತು ವಿಕ್ರಾಂತ್ ರೋಣದಂತಹ ಬಹುಕೋಟಿ ಬಜೆಟ್ ಸಿನಿಮಾಗಳು ಈಗ ಹಿಂದಿ ಸಿನಿಮಾದಲ್ಲಿಯೂ ಕೂಡ ಕ್ರೇಜ್ ನ್ನೂ ಹುಟ್ಟು ಹಾಕಿವೆ.ಆದ್ಯಾಗೂ ಈ ಪ್ಯಾನ್ ಇಂಡಿಯಾ ಸಂಸ್ಕೃತಿ 50 ರ ದಶಕದಲ್ಲಿ ಮಯೇ ಬಳಕೆಗೆ ಬಂದಿತ್ತು.ಆಗ ಅನೇಕ ದಕ್ಷಿಣ ಭಾರತದ ಚಲನಚಿತ್ರಗಳು ಸಾಂಸ್ಕೃತಿಕ ಹೋಲಿಕೆಗಳು ಮತ್ತು ಅನುಕೂಲಕ್ಕಾಗಿ ಕನಿಷ್ಠ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿದ್ದವು.
Wish you all a very #HappyDussehra!
Revisit this stunning still from #MahishasuraMardini (1959). A #Kannada film by #BSRanga was dubbed in multiple regional languages & considered as amongst the first major pan-India films. #VijayaDashami2021 #VijayaDashami pic.twitter.com/xycwwtrsPd— NFAI (@NFAIOfficial) October 15, 2021
ಇದನ್ನೂ ಓದಿ: ಸೌತ್ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್!
ಇಂತಹ ಪ್ಯಾನ್ ಇಂಡಿಯಾ ಪರಿಕಲ್ಪನೆ ಭಾಗವಾಗಿ ಡಾ.ರಾಜಕುಮಾರ ಅಭಿನಯದ ಪೌರಾಣಿಕ ಚಿತ್ರ ಮಹಿಷಾಸುರ ಮರ್ದಿನಿ 1959 ರಲ್ಲಿಯೇ ತಯಾರಾಗಿತ್ತು.ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಡಾ.ರಾಜ್ಕುಮಾರ್, ಉದಯಕುಮಾರ್, ಕೆ.ಎಸ್. ಅಶ್ವಥ್ ಕಾಣಿಸಿಕೊಂಡಿದ್ದರು.ಇದು ಚೆನ್ನೈನ (ಆಗ ಮದ್ರಾಸ್) ವಿಕ್ರಮ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಮೊದಲ ಚಲನಚಿತ್ರವಾಗಿದೆ ಮತ್ತು ಮೊದಲ ಬಾರಿಗೆ ಡಾ. ರಾಜ್ಕುಮಾರ್ ಅವರ ಹಿನ್ನೆಲೆ ಗಾಯಕರಾಗಿ ಕಾಣಿಸಿಕೊಂಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.