ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿಯು ಇಂದು ಕೊನೆಗೊಳ್ಳಲಿದೆ. ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಚಾಂಪಿಯನ್ ಪಟ್ಟ ಯಾರಿಗೆ ಲಭಿಸಲಿದೆ ಎಂಬ ಕಾತುರ ಮನೆಮಾಡಿದೆ. ಇನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಜೆ 8ಗಂಟೆಗೆ ಈ ಪಂದ್ಯ ನಡೆಯಲಿದೆ.
ಐಪಿಎಲ್ ಇತಿಹಾಸದಲ್ಲಿಯೇ ಬರೋಬ್ಬರಿ ಒಂದು ಲಕ್ಷದ 20 ಸಾವಿರ ಅಭಿಮಾನಿಗಳು ವೀಕ್ಷಿಸಲಿದ್ದಾರೆ. ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರವರೂ ಸಹ ವೀಕ್ಷಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. ಇನ್ನು ಐಪಿಎಲ್ ಫೈನಲ್ ಪ್ರಾರಂಭಕ್ಕೂ ಮುನ್ನ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಮತ್ತು ನಟ ರಣ್‌ವೀರ್ ಸಿಂಗ್ ಸೇರಿ ಹಾಲಿವುಡ್‌ನ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.
ಇದನ್ನು ಓದಿ: ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹಣದ ಸುರಿಮಳೆ! ಎಷ್ಟು ಲಾಭ ಗೊತ್ತಾ?
ಇಂದು ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ನಡುವೆ ಹಣಾಹಣಿ ನಡೆಯಲಿದೆ. ಮೊದಲ ಬಾರಿಗೆ ಐಪಿಎಲ್‌ನಲ್ಲಿ ಪ್ರವೇಶ ಪಡೆದ ಗುಜರಾತ್ ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನೇ ಕಾಪಾಡಿಕೊಂಡು ಇದೀಗ ಫೈನಲ್ ಪ್ರವೇಶಿಸಿದೆ. ಇನ್ನು ಈ ಬಾರಿ ಕಪ್ ಗೆದ್ದರೆ ಚೊಚ್ಚಲ ಐಪಿಎಲ್‌ನಲ್ಲಿ ಚಾಂಪಿಯನ್ಸ್ ಆದ ಗರಿಮೆ ತಂಡದ ಪಾಲಾಗಲಿದೆ.
ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡ ಈ ಹಿಂದೆ ಒಂದು ಬಾರಿ ಕಪ್ ಗೆದ್ದಿದೆ. ಈ ಬಾರಿಯೂ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ರಾಜಸ್ಥಾನ ತಂಡವು ಟೀಗ್ ಹಂತದಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದು, ಎರಡನೇ ಸ್ಥಾನ ಪಡೆದುಕೊಂಡಿತ್ತು.
ಮೊದಲ ಕ್ವಾಲಿಫೈಯರ್ ಸುತ್ತಿನಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿದ್ದ ರಾಜಸ್ಥಾನ ಎರಡನೇ ಕ್ವಾಲಿಫೈಯರ್ ಆರ್‌ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಇನ್ನು ಇಂದು ನಡೆಯುವ ಐಪಿಎಲ್ ಅಂತಿಮ ಹಣಾಹಣಿಯಲ್ಲಿ ಯಾರಿಗೆ ಚಾಂಪಿಯನ್ ಪಟ್ಟ ಲಭಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನು ಓದಿ: Ambareesh Birth Anniversary: ರೆಬೆಲ್ ಸ್ಟಾರ್ ಅಂಬರೀಷ್ ಬಗ್ಗೆ ನೀವರಿಯದ ಸಂಗತಿ ಇಲ್ಲಿವೆ ನೋಡಿ..
ಸಂಭಾವ್ಯ ಆಟಗಾರರ ಪಟ್ಟಿ
ಗುಜರಾತ್ ಟೈಟಾನ್ಸ್:
ಹಾರ್ದಿಕ್ ಪಾಂಡ್ಯ(ಕ್ಯಾ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಜೋಸೆಫ್/ಫಗ್ರ್ಯೂಸನ್, ಮೊಹಮದ್ ಶಮಿ, ಯಶ್ ದಯಾಳ್, ಶುಭ್‌ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ರಶೀದ್ ಖಾನ್, ಸಾಯಿ ಕಿಶೋರ್
ರಾಜಸ್ಥಾನ ರಾಯಲ್ಸ್:
ಸಂಜು ಸ್ಯಾಮ್ಸನ್(ಕ್ಯಾ), ದೇವದತ್ ಪಡಿಕ್ಕಲ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್, ಒಬೆಡ್ ಮೆಕಾಯ್, ಯಜುವೇಂದ್ರ ಚಹಲ್, ಪ್ರಸೀದ ಕೃಷ್ಣ, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರೊನ್ ಹೆಟ್ಮೇಯರ್, ರಿಯಾನ್ ಪರಾಗ್,
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.