ನಿಮ್ಮ ಹೃದಯ ದುರ್ಬಲವಾಗುತ್ತಿದೆ ಎನ್ನುತ್ತವೆ ಈ ಸಂಕೇತಗಳು ..!

ನಮ್ಮ ದೇಹದ ಯಾವುದೇ ಅಂಗವಾಗಿರಲಿ,  ಅದರಲ್ಲಿ ಸಮಸ್ಯೆ ಕಾಣಿಸಿಕೊಂಡಾಗ, ಅದು ನಮಗೆ ಸೂಚನೆ ನೀಡುತ್ತದೆ.  ಆ ಸೂಚನೆಯನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿದರೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬಹುದು. 

Written by - Ranjitha R K | Last Updated : Jun 28, 2022, 08:11 AM IST
  • ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ
  • ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸುವುದು ಹೆಚ್ಚು ಸೂಕ್ತ.
  • ಹೃದಯ ನೀಡುವ ಸೂಚನೆಯನ್ನು ಅರ್ಥ ಮಾಡಿಕೊಳ್ಳಿ
ನಿಮ್ಮ ಹೃದಯ ದುರ್ಬಲವಾಗುತ್ತಿದೆ ಎನ್ನುತ್ತವೆ ಈ ಸಂಕೇತಗಳು ..!  title=
weak heart symptoms (file photo)

ಬೆಂಗಳೂರು : ಮನುಷ್ಯ ನೆಮ್ಮದಿಯಿಂದ ಬದುಕಬೇಕಾದರೆ ಹಣ ಒಂದಿದ್ದರೆ ಸಾಲದು, ಉತ್ತಮ ಆರೋಗ್ಯ ಕೂಡಾ ಮುಖ್ಯ. ಇಂಗ್ಲಿಷ್ ನಲ್ಲಿ ಒಂದು ಗಾದೆಯಿದೆ. ಪ್ರಿವೆಂಶನ್ ಇಸ್ ಬೆಟರ್ ದಾನ್ ಕ್ಯೂರ್ ಎಂದು.  ಹೌದು, ಕಾಯಿಲೆ ಬಂದ ಮೇಲೆ ಕಾಯಿಲೆ ಬಂತು ಎಂದು ಒದ್ದಾಡುವುದಕ್ಕಿಂತ ಅದಕ್ಕಿಂತ ಮುನ್ನವೇ ಆ ಬಗ್ಗೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.  ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಎನ್ನುವ ಹಾಗೆ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸುವುದು ಹೆಚ್ಚು ಸೂಕ್ತ. 

ನಮ್ಮ ದೇಹದ ಪ್ರತಿ ಅಂಗಾಗಗಳು ಸಕ್ರೀಯವಾಗಿ ಕೆಲಸ ಮಾಡುತ್ತಿದ್ದರೆ ಮಾತ್ರ ನಾವು ಉತ್ತಮ ಆರೋಗ್ಯ ಹೊಂದಿದ್ದೇವೆ ಎಂದು ಹೇಳಬಹುದು. ಹೃದಯ, ನಮ್ಮ ದೇಹದ ಬಹು ಮುಖ್ಯ ಅಂಗ.  ಹೃದಯವು ದುರ್ಬಲವಾಗಿದ್ದರೆ ಪಾರ್ಶ್ವವಾಯು ಅಥವಾ ಹೃದಯಾಘಾತದ ಸಾಧ್ಯತೆಗಳು ಹೆಚ್ಚು. ನಮ್ಮ ದೇಹದ ಯಾವುದೇ ಅಂಗವಾಗಿರಲಿ,  ಅದರಲ್ಲಿ ಸಮಸ್ಯೆ ಕಾಣಿಸಿಕೊಂಡಾಗ, ಅದು ನಮಗೆ ಸೂಚನೆ ನೀಡುತ್ತದೆ.  ಆ ಸೂಚನೆಯನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿದರೆ, ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬಹುದು. ಹೃದಯ ಕೂಡಾ ಹಾಗೆಯೇ.. ತಾನು ದುರ್ಬಲವಾಗುತ್ತಿದ್ದೇನೆ ಎನ್ನುವ ಸಂಕೇತವನ್ನು ಮೊದಲೇ ನೀಡುತ್ತದೆ. 

ಇದನ್ನೂ ಓದಿ : Papaya Facts: ಊಟದ ಬಳಿಕ ಪರಂಗಿ ಹಣ್ಣನ್ನು ಸೇವಿಸಬಹುದೇ? ಇಲ್ಲಿದೆ ಮುಖ್ಯ ಮಾಹಿತಿ

ಅಧಿಕ ರಕ್ತದೊತ್ತಡ :
ಕೆಲವರಿಗೆ ಬಿಪಿ ನಿರಂತರ ಸಮಸ್ಯೆಯಾಗಿರುತ್ತದೆ. ಆದರೆ ಇದನ್ನು  ಯಾವುದೇ ಕಾರಣಕ್ಕೂ ಲಘುವಾಗಿ ತೆಗೆದುಕೊಳ್ಳಬಾರದು. ಇದು ದುರ್ಬಲ ಹೃದಯದ ಸಂಕೇತವಾಗಿರಬಹುದು. ಹೃದಯವು ದುರ್ಬಲಗೊಂಡಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.

ಭುಜ ಮತ್ತು ಎದೆ ನೋವು :
ಕೆಲವರಿಗೆ ಐದು ನಿಮಿಷಕ್ಕೊಮ್ಮೆ ಭುಜ ಮತ್ತು ಎದೆನೋವು ಕಾಣಿಸಿಕೊಳ್ಳುತ್ತಿರುತ್ತದೆ. ಅದನ್ನು ಕೂಡಾ ಲಘುವಾಗಿ ಪರಿಗಣಿಸಬಾರದು. ಹೀಗೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಕಾಣಬೇಕು. 

ಇದನ್ನೂ ಓದಿ : Weight Loss Tips: ಬೊಜ್ಜಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಡಯಟ್ ನಲ್ಲಿ ಶಾಮೀಲುಗೊಳಿಸಿ ಈ ಹಣ್ಣು

ಗೊರಕೆ ಮತ್ತು ನಿದ್ರೆಯ ಸಮಸ್ಯೆಗಳು :
ಕೆಲವರಿಗೆ ಗೊರಕೆ ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ. ಇದು ಸಾಮಾನ್ಯ ಎಂದು ಅದೆಷ್ಟೋ ಜನ ನಿರ್ಲಕ್ಷಿಸಿ ಬಿಡುತ್ತಾರೆ. ಅದಕ್ಕೆ ಸೂಕ್ತ   ಚಿಕಿತ್ಸೆ ಪಡೆಯುವುದಿಲ್ಲ. ಆದರೆ, ಇದು ದುರ್ಬಲ ಹೃದಯದ ಸಂಕೇತವಾಗಿರಬಹುದು. ಈ ನಿಟ್ಟಿನಲ್ಲಿ ಮೊದಲೇ ಎಚ್ಚೆತ್ತುಕೊಂಡು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಇಲ್ಲವಾದರೆ ನಂತರ ತೊಂದರೆ ಉಂಟಾಗಬಹುದು.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News