Diwali Shubh Yog 2022: ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ದೀಪಾವಳಿ ಮತ್ತು ಧನತ್ರಯೋದಶಿಗೂ ಮುನ್ನ ಅತ್ಯಂತ ವಿಶೇಷವಾದ ಶುಭ ಕಾಕತಾಳೀಯವೊಂದು ರೂಪುಗೊಳ್ಳುತ್ತಿದೆ. ಈ ಶುಭಯೋಗದಲ್ಲಿ ಮಾಡಲಾಗುವ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಈ ಬಾರಿ ದೀಪಾವಳಿ ಅಕ್ಟೋಬರ್ 24 ರಂದು ಮತ್ತು ಧನತ್ರಯೋದಶಿ ಅಕ್ಟೋಬರ್ 23 ರಂದು ಆಚರಿಸಲಾಗುತ್ತಿದೆ.
ಈ ಬಾರಿಯ ಧನತ್ರಯೋದಶಿ ಮತ್ತು ದೀಪಾವಳಿಗೂ ಮುನ್ನ ಅಕ್ಟೋಬರ್ 18ರ ಮಂಗಳವಾರದಂದು ವಿಶೇಷ ಪುಷ್ಯ ನಕ್ಷತ್ರ (ಯೋಗ) ರಚನೆಯಾಗುತ್ತಿದೆ. ಈ ಯೋಗವು ಹಬ್ಭದ ಖರೀದಿ ತುಂಬಾ ಮಂಗಳಕರವಾಗಿದೆ. ಅಕ್ಟೋಬರ್ 18, 2022 ರಂದು ಪುಷ್ಯ ನಕ್ಷತ್ರವು ಕಾರ್ತಿಕ ಕೃಷ್ಣ ಅಷ್ಟಮಿ ತಿಥಿಯಂದು ಬೆಳಗ್ಗೆ 5.14 ರಿಂದ ಮರುದಿನ ಅಕ್ಟೋಬರ್ 19 ರಂದು ಬೆಳಗ್ಗೆ 8.02 ರವರೆಗೆ ಇರಲಿದೆ. ಇದರೊಂದಿಗೆ ಅಕ್ಟೋಬರ್ 18 ರ ಸಂಜೆ 4.53 ರವರೆಗೆ ಸಿದ್ಧಯೋಗ ಇರಲಿದೆ. ಇದಾದ ಬಳಿಕ ಸಾಧ್ಯ ಯೋಗ ಆರಂಭಗೊಳ್ಳಲಿದೆ.
ಪುಷ್ಯ ನಕ್ಷತ್ರ ಯೋಗ ಯಾವಾಗ ನಿರ್ಮಾಣಗೊಳ್ಳುತ್ತದೆ?
ಜ್ಯೋತಿಷ್ಯದಲ್ಲಿ ಪುಷ್ಯ ನಕ್ಷತ್ರವನ್ನು ನಕ್ಷತ್ರಗಳ ರಾಜ ಎಂದು ಪರಿಗಣಿಸಲಾಗಿದೆ. ಈ ನಕ್ಷತ್ರವನ್ನು ಅತ್ಯಂತ ಶುಭ ನಕ್ಷತ್ರ ಎಂದು ಪರಿಗಣಿಸಲಾಗಿದೆ. ಈ ನಕ್ಷತ್ರದ ಅವಧಿಯಲ್ಲಿ ಮಾಡಲಾಗುವ ಎಲ್ಲಾ ಕೆಲಸಗಳು ಅತ್ಯಂತ ಸುಲಭವಾಗಿ ಪೂರ್ಣಗೊಳ್ಳುತ್ತವೆ. ಅಕ್ಟೋಬರ್ 18ರ ಮಂಗಳವಾರದಂದು ಬೆಳಗ್ಗೆಯಿಂದ ಪುಷ್ಯ ನಕ್ಷತ್ರವು ಬ್ರಹ್ಮ ಮುಹೂರ್ತದಲ್ಲಿ ಪ್ರಾರಂಭವಾಗಲಿದ್ದು, ಇದು ಹಗಲು ರಾತ್ರಿಯಿಡಿ ಇರಲಿದೆ. ಇದು ಮಾರನೆಯ ದಿನ ಅಕ್ಟೋಬರ್ 19 ರಂದು ಬೆಳಗ್ಗೆ 8.02 ರವರೆಗೆ ಇರಲಿದೆ.
ಪುಷ್ಯ ನಕ್ಷತ್ರ ಅತ್ಯಂತ ಶುಭ ಸಮಯ ಯಾವುದು
ಪುಷ್ಯ ನಕ್ಷತ್ರವು ಅಕ್ಟೋಬರ್ 18 ರಂದು ಬೆಳಿಗ್ಗೆ 5:14 ಕ್ಕೆ ಬ್ರಹ್ಮ ಮುಹೂರ್ತದಲ್ಲಿ ಪ್ರಾರಂಭವಾಗಲಿದೆ, ಇದು ಅಕ್ಟೋಬರ್ 19 ರಂದು ಬೆಳಿಗ್ಗೆ 08:02 ಕ್ಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ-Chanakya Niti : ಹೆಣ್ಣಿನ ಈ ಗುಣಗಳ ಮುಂದೆ ಎಂತ ಶಕ್ತಿಶಾಲಿ ಪುರುಷನು ತಲೆಬಾಗುತ್ತಾನೆ!
ಪುಷ್ಯ ನಕ್ಷತ್ರದ ಮಹತ್ವ
ಜ್ಯೋತಿಷಿಗಳ ಪ್ರಕಾರ, ಅಕ್ಟೋಬರ್ 18 ರಂದು ಬರುವ ಪುಷ್ಯ ನಕ್ಷತ್ರದ ಜೊತೆಗೆ ದಿನವಿಡೀ ಸಿದ್ಧ ಯೋಗ ಮತ್ತು ಸಾಧ್ಯ ಯೋಗದಲ್ಲಿ ಮಾಡಿದ ಶಾಪಿಂಗ್ ತುಂಬಾ ಮಂಗಳಕರವಾಗಿರುತ್ತದೆ. ಈ ನಿರ್ದಿಷ್ಟ ಯೋಗದಲ್ಲಿ ಚಿನ್ನ-ಬೆಳ್ಳಿ, ಭೂಮಿ, ಕಟ್ಟಡ, ವಾಹನ, ಖಾತೆ ಕೀರ್ದಿ ಮತ್ತು ಲೇಖನಿ-ಔಷಧಿ ಸೇರಿದಂತೆ ಎಲ್ಲಾ ರೀತಿಯ ಚರ ಮತ್ತು ಸ್ಥಿರ ಆಸ್ತಿಗಳ ಖರೀದಿಯು ಫಲಪ್ರದವಾಗಿರಲಿದೆ. ಈ ಸಮಯದಲ್ಲಿ, ಈ ವಸ್ತುಗಳನ್ನು ಖರೀದಿಸುವುದು ಕೆಲಸ ಕಾರ್ಯಗಳಲ್ಲಿ ಶುಭ ಫಲಿತಾಂಶಗಳನ್ನು ಹೆಚ್ಚಿಸುತ್ತದೆ. ತುಲಾ ಸಂಕ್ರಾಂತಿಯು ಕೂಡ ಈ ದಿನದಂದು ಅಂದರೆ ಅಕ್ಟೋಬರ್ 18 ರಂದು ಇರಲಿದೆ, ಏಕೆಂದರೆ ಈ ದಿನ ಸೂರ್ಯನು ಕನ್ಯಾರಾಶಿಯನ್ನು ತೊರೆದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ.
ಇದನ್ನೂ ಓದಿ-Name Astrology: ಈ ಐದು ಅಕ್ಷರಗಳು ನಿಮ್ಮ ಹೆಸರಿನಲ್ಲಿ ಇದೆಯೇ? ಹಾಗಾದ್ರೆ ನಿಮ್ಮಷ್ಟು ಅದೃಷ್ಟವಂತರು ಯಾರಿಲ್ಲ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.