IND vs PAK: ಇಂಡೋ-ಪಾಕ್ ವಿಶ್ವಕಪ್ ಮುಖಾಮುಖಿಯಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದಿದ್ದು ಇದೇ ತಂಡ

ಇನ್ನು ಉಭಯ ತಂಡಗಳಿಗೆ ಟಾಸ್ ಯಾವ ರೀತಿ ಸಹಕಾರಿಯಾಗಿದೆ ಎಂದು ನೋಡೋಣ. ಕಳೆದ ಏಳು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಆರು ಘರ್ಷಣೆಗಳಲ್ಲಿ ತಲಾ ಮೂರು ಬಾರಿ ಟಾಸ್ ಗೆದ್ದಿವೆ.

Written by - Bhavishya Shetty | Last Updated : Oct 23, 2022, 12:40 PM IST
    • ಇಂದಿನಿಂದ ಭಾರತವು T20 ವಿಶ್ವಕಪ್ 2022 ಸೂಪರ್ 12 ಅಭಿಯಾನವನ್ನು ಪ್ರಾರಂಭಿಸಲಿದೆ
    • ಸಾಂಪ್ರದಾಯಿಕ ಬದ್ಧವೈರಿ ಪಾಕ್ ನೊಂದಿಗೆ ಭಾರತ ಹಣಾಹಣಿ
    • ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಕಾದಾಟ
IND vs PAK: ಇಂಡೋ-ಪಾಕ್ ವಿಶ್ವಕಪ್ ಮುಖಾಮುಖಿಯಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದಿದ್ದು ಇದೇ ತಂಡ title=
India

ಭಾರತವು ತನ್ನ T20 ವಿಶ್ವಕಪ್ 2022 ಸೂಪರ್ 12 ಅಭಿಯಾನವನ್ನು ಭಾನುವಾರ ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸುತ್ತಿದೆ.

ಇದನ್ನೂ ಓದಿ: IND vs PAK: ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಪಿಚ್ ರಿಪೋರ್ಟ್, ಪ್ಲೇಯಿಂಗ್ 11 ಪಟ್ಟಿ ಹೀಗಿದೆ

ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಆರು ಬಾರಿ ಮುಖಾಮುಖಿಯಾಗಿವೆ. 2021 ರ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಮೊದಲ ಗೆಲುವು ದಾಖಲಿಸಿದರೆ ಮೆನ್ ಇನ್ ಬ್ಲೂ ಐದು ಬಾರಿ ಗೆದ್ದಿದೆ.

ಇನ್ನು ಉಭಯ ತಂಡಗಳಿಗೆ ಟಾಸ್ ಯಾವ ರೀತಿ ಸಹಕಾರಿಯಾಗಿದೆ ಎಂದು ನೋಡೋಣ. ಕಳೆದ ಏಳು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಆರು ಘರ್ಷಣೆಗಳಲ್ಲಿ ತಲಾ ಮೂರು ಬಾರಿ ಟಾಸ್ ಗೆದ್ದಿವೆ.

  • ಡರ್ಬನ್, 2007: ಪಂದ್ಯ ಟೈ ಆಗಿದ್ದು, ಬೌಲ್ ಔಟ್ ನಲ್ಲಿ ಭಾರತ ಗೆದ್ದಿತು. ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

  • ಜೋಹಾನ್ಸ್ ಬರ್ಗ್, 2007: ಭಾರತಕ್ಕೆ ಐದು ರನ್‌ಗಳ ಜಯ. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

  • ಕೊಲಂಬೊ, 2012: ಭಾರತಕ್ಕೆ ಎಂಟು ವಿಕೆಟ್‌ಗಳ ಜಯ. ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

  • ಢಾಕಾ, 2014: ಭಾರತಕ್ಕೆ ಏಳು ವಿಕೆಟ್‌ಗಳ ಜಯ. ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

  • ಕೋಲ್ಕತ್ತಾ, 2016: ಭಾರತಕ್ಕೆ ಆರು ವಿಕೆಟ್‌ಗಳ ಜಯ. ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

  • ಇದನ್ನೂ ಓದಿ:  IND vs PAK: ರೋಹಿತ್ ಪಡೆಗೆ ಗುಡ್ ನ್ಯೂಸ್: ಹೈವೋಲ್ಟೇಜ್ ಪಂದ್ಯದಿಂದ ಹೊರಬಿದ್ದ ಪಾಕ್ ನ ಈ ಆಟಗಾರ

  • ದುಬೈ, 2021: ಪಾಕಿಸ್ತಾನಕ್ಕೆ 10 ವಿಕೆಟ್‌ಗಳ ಜಯ. ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News