ದಿನಭವಿಷ್ಯ 22-07-2024: ಸೋಮವಾರದ ಈ ದಿನ ಶ್ರವಣ ನಕ್ಷತ್ರ, ಪ್ರೀತಿ ಯೋಗ- ಯಾವ ರಾಶಿಗೆ ಏನು ಫಲ?

Today Horoscope 22nd July 2024: ಸೋಮವಾರದ ಈ ದಿನ ಪ್ರೀತಿ ಯೋಗ,  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jul 22, 2024, 08:27 AM IST
  • ಸಿಂಹ ರಾಶಿಯ ಹೈನುಗಾರಿಕೆ ವ್ಯವಹಾರದಲ್ಲಿರುವವರಿಗೆ ಲಾಭದಾಯಕ ದಿನ.
  • ತುಲಾ ರಾಶಿಯ ನಿರುದ್ಯೋಗಿಗಳಿಗೆ ಸುವರ್ಣಾವಕಾಶ ದೊರೆಯಲಿದೆ.
  • ಧನು ರಾಶಿಯವರಿಗೆ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಒತ್ತಡ ಹೆಚ್ಚಾಗಬಹುದು.
ದಿನಭವಿಷ್ಯ 22-07-2024:  ಸೋಮವಾರದ ಈ ದಿನ ಶ್ರವಣ ನಕ್ಷತ್ರ, ಪ್ರೀತಿ ಯೋಗ- ಯಾವ ರಾಶಿಗೆ ಏನು ಫಲ?  title=

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ ಪ್ರತಿಪದಾ ತಿಥಿ, ಸೋಮವಾರದ ಈ ದಿನ ಶ್ರವಣ ನಕ್ಷತ್ರ ಪ್ರೀತಿ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಉತ್ತಮ ದಿನ. ಉದ್ಯೋಗಸ್ಥರಿಗೂ ದಿನ ಲಾಭದಾಯಕವಾಗಿದೆ. ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳಿಂದ ಪ್ರಗತಿ ಕಾಣಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ವೃತ್ತಿಪರರು ಕೆಲಸದತ್ತ ಹೆಚ್ಚಿನ ಗಮನ ವಹಿಸಬೇಕು. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಪ್ರೀತಿಯಿಂದ ಮಾತನಾಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಪ್ರಯಾಣದ ಸಮಯದಲ್ಲಿ ವಿವಾದ ಸಾಧ್ಯತೆ. ಹಣಕಾಸಿನ ದೃಷ್ಟಿಯಿಂದ ಕೆಲವು ಸಮಸ್ಯೆಗಳು ಬಾಧಿಸಬಹುದು. ಕುಟುಂಬದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಆದಾಗ್ಯೂ, ಉದ್ಯೋಗ-ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ವ್ಯವಹಾರದಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುವುದು ಲಾಭದಾಯಕವಾಗಿರಲಿದೆ. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಗಳಿಸಬಹುದು. ರಕ್ಷಣಾ ಕ್ಷೇತ್ರದಲ್ಲಿ ಕೆಲಸಕ್ಕೆ ಬಯಸುವವರು ನಿಮ್ಮ ದೈಹಿಕ ಸಾಮರ್ಥ್ಯದೊಂದಿಗೆ ಬುದ್ದಿ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಿ. 

ಇದನ್ನೂ ಓದಿ- Tulsi Upay: ಪ್ರತಿನಿತ್ಯ ತುಳಸಿಗೆ ಇವುಗಳನ್ನು ಅರ್ಪಿಸಿದರೆ ಹರಸಿ ಬರುತ್ತೆ ಸಂಪತ್ತು

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಹೈನುಗಾರಿಕೆ ವ್ಯವಹಾರದಲ್ಲಿರುವವರಿಗೆ ಲಾಭದಾಯಕ ದಿನ. ಯೋಜನೆಗೆ ಅನುಗುಣವಾಗಿ ಮುಂದುವರೆಯುವುದರಿಂದ ಉದ್ಯಮಿಗಳಿಗೆ ಯಶಸ್ಸು. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ಹೊಸತನ್ನು ಕಲಿಯುವ ಅವಕಾಶವಿದ್ಧರೆ ಖಂಡಿತವಾಗಿಯೂ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಹೊಸ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಶುಭದಾಯಕ ದಿನ. ವೃತ್ತಿ ರಂಗದಲ್ಲಿ ನಿಮ್ಮ ಬಾಸ್ ಸಹಕಾರದಿಂದ ಯಶಸ್ಸು ಗಳಿಸುವಿರಿ. ವಿವಾಹಿತರು ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಅನುಭವಿಸುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ನಿರುದ್ಯೋಗಿಗಳಿಗೆ ಸುವರ್ಣಾವಕಾಶ ದೊರೆಯಲಿದೆ. ಸೌಂದರ್ಯಕ್ಕೆ ಸಂಬಂಧಿಸಿದ ವ್ಯಾಪಾರ ಉತ್ಪನ್ನಗಳಲ್ಲಿ ಭಾರೀ ಲಾಭವನ್ನು ನಿರೀಕ್ಷಿಸಬಹುದು. ಯಾವುದೇ ನಿರ್ದಿಷ್ಟ ಗುರಿಯನ್ನು ತಲುಪಲು ಹೆಚ್ಚಿನ ಶ್ರಮ ಅಗತ್ಯವಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಗಳಿಸುವಿರಿ. ಸ್ನೇಹಿತರ ಸಹಾಯದಿಂದ ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ಕುಟುಂಬಸ್ಥರೊಂದಿಗೆ ಶಾಂತಿ ಸಮಾಧಾನದಿಂದ ವರ್ತಿಸಿ. ಪಾಲಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಲು ಪ್ರಯತ್ನಿಸಿ. 

ಇದನ್ನೂ ಓದಿ- ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗ; ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಒತ್ತಡ ಹೆಚ್ಚಾಗಬಹುದು. ಸ್ಟಾಕ್ ಮರುಕಟ್ಟೆಯಲ್ಲಿ ಹೂಡಿಕೆ ಮಾಡುವರು ಆರ್ಥಿಕ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. ವೃತ್ತಿಪರರು ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮ್ಮ ಮನಸ್ಸು ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ. ವ್ಯವಹಾರದಲ್ಲಿ ಬದಲಾವಣೆಗಳಿಂದ ಉತ್ತಮ ಅವಕಾಶವನ್ನು ಪಡೆಯಬಹುದು. ಸಗಟು ವ್ಯಾಪಾರಿಗಳು ಹೂಡಿಕೆ ಮಾಡುವುದನ್ನು ತಪ್ಪಿಸಿ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಅನುಭವಿಸುವಿರಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಹೋಂ ಡೆಲಿವರಿ ವ್ಯವಹಾರದಲ್ಲಿ ದಿನವು ಸಮಸ್ಯೆಗಳಿಂದ ತುಂಬಿರುತ್ತದೆ. ಕೆಲಸದಲ್ಲಿ ಅತಿಯಾದ ಸ್ಮಾರ್ಟ್ ವರ್ತನೆಯನ್ನು ತಪ್ಪಿಸಿ. ಕುಟುಂಬಸ್ಥರೊಂದಿಗೆ ಮಾತನಾಡುವಾಗ ಕೋಪವನ್ನು ನಿಯಂತ್ರಿಸಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ವ್ಯಾಪಾರಸ್ಥರು ಸರಿಯಾದ ಜಾಗದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ. ಇದರಿಂದ ಭವಿಷ್ಯದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕೆಲಸದ ಸ್ಥಳದಲ್ಲಿ ಮೇಲಾಧಿಕರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News