ದಿನಭವಿಷ್ಯ 05-08-2022: ವರಮಹಾಲಕ್ಷ್ಮಿ ಹಬ್ಬದ ದಿನ ದ್ವಾದಶ ರಾಶಿಗಳ ಫಲಾಫಲ

Horoscope 05 August 2022: ಇಂದು ವರಮಹಾಲಕ್ಷ್ಮಿ ಹಬ್ಬ. ಇಂದಿನ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.

Written by - Zee Kannada News Desk | Last Updated : Aug 5, 2022, 06:27 AM IST
  • ತುಲಾ ರಾಶಿಯವರು ಯೋಚಿಸದೆ ಖರ್ಚು ಮಾಡುವುದನ್ನು ತಪ್ಪಿಸಿ
  • ಧನು ರಾಶಿಯವರಿಗೆ ಇಂದು ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದೆ
  • ಮೀನ ರಾಶಿಯವರು ಆರೋಗ್ಯದ ಬಗ್ಗೆ ಗಮನಹರಿಸಿ
ದಿನಭವಿಷ್ಯ 05-08-2022:  ವರಮಹಾಲಕ್ಷ್ಮಿ ಹಬ್ಬದ ದಿನ ದ್ವಾದಶ ರಾಶಿಗಳ ಫಲಾಫಲ title=
Todays astrology 05 August 2022

ದಿನಭವಿಷ್ಯ 05-08-2022 :    ಇಂದು ಶುಭ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ ಹೇಗಿದೆ ಎಂದು ತಿಳಿಯೋಣ...

ಮೇಷ ರಾಶಿ: ಮೇಷ ರಾಶಿಯವರು ನಿಮ್ಮ ಮಕ್ಕಳ ಸಾಧನೆ ಕಂಡು ಹೆಮ್ಮೆ ಪಡುವಿರಿ. ವ್ಯಾಪಾರ ಎಂದ ಮೇಲೆ ರಿಸ್ಕ್ ಇದ್ದೇ ಇರುತ್ತದೆ. ನೀವು ಕೈಗೊಳ್ಳುವ ನಿರ್ಧಾರಗಳು ಅಪಾಯಕಾರಿ ಎಂದು ಭಾವಿಸಿದರೂ ಮುಂದಿನ ದಿನಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.

ವೃಷಭ ರಾಶಿ: ವರಮಹಾಲಕ್ಷ್ಮಿ ಹಬ್ಬದ ಈ ದಿನ ನಿಮ್ಮ ವೈವಾಹಿಕ ಸಂಬಂಧವು ಪ್ರೀತಿಯಿಂದ ಕೂಡಿರುತ್ತದೆ. ನಿಮ್ಮ ಸಾಧನೆಯು ನಿಮ್ಮ ಎದುರಾಳಿಗಳ ಬಾಯಿ ಮುಚ್ಚಿಸಲಿದೆ.

ಮಿಥುನ ರಾಶಿ: ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆದರೆ, ನೀವು ನಿಮ್ಮ ಮಾತಿನ ಮೇಲೆ ಕಡಿವಾಣ ಹೊಂದುವುದು ಅವಶ್ಯಕ. ಹೊಸ ವ್ಯವಹಾರ ಆರಂಭಿಸಲು ಇಂದು ಶುಭ ದಿನ.

ಕರ್ಕಾಟಕ ರಾಶಿ: ಕಷ್ಟ ಪಡದೆ ಯಾವುದೂ ಲಭಿಸುವುದಿಲ್ಲ. ಕೆಟ್ಟ ಕಾರ್ಯಕ್ಷಮತೆಯಿಂದಾಗಿ ನೀವು ಕಚೇರಿಯಲ್ಲಿ ಟೀಕೆಗಳನ್ನು ಎದುರಿಸಬೇಕಾಗುತ್ತದೆ.  ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. 

ಇದನ್ನೂ ಓದಿ- ಲಕ್ಷ್ಮೀ ಯನ್ನು ಒಲಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ, ಜೀವನ ಪೂರ್ತಿ ಇರುತ್ತದೆ ಲಕ್ಷ್ಮೀ ಕಟಾಕ್ಷ

ಸಿಂಹ ರಾಶಿ: ಇಂದು ಹಬ್ಬದ ದಿನ ನಿಮ್ಮ ಬೆಲೆಬಾಳುವ ವಸ್ತುಗಳನ್ನು ಸುರಕ್ಷತೆಯಿಂದ ನೋಡಿಕೊಳ್ಳಿ. ಇಷ್ಟು ದಿನಗಳ ನಿಮ್ಮ ಆರ್ಥಿಕ ಸಮಸ್ಯೆ ಇಂದು ಬಗೆಹರಿಯಲಿದೆ. 

ಕನ್ಯಾ ರಾಶಿ: ನಿಮ್ಮ ಸೃಜನಶೀಲ ಕೌಶಲ್ಯಗಳು ಸುಧಾರಿಸುತ್ತವೆ. ನಿಮ್ಮ ಮಕ್ಕಳಿಗೆ ಉಡುಗೊರೆಗಳನ್ನು ಖರೀದಿಸಬಹುದು. ನಿಮ್ಮ ಕುಟುಂಬದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. 

ತುಲಾ ರಾಶಿ: ಯೋಚಿಸದೆ ಖರ್ಚು ಮಾಡುವುದು ಮುಂದಿನ ದಿನಗಳಲ್ಲಿ ಭಾರೀ ಹಣದ ಸಮಸ್ಯೆಗೆ ಕಾರಣವಾಗಬಹುದು. ಆದರೆ, ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮಕ್ಕಳಿಗಾಗಿ ಉಡುಗೊರೆ ಕೊಳ್ಳಬಹುದು.

ವೃಶ್ಚಿಕ ರಾಶಿ: ಇಂದು ಓಡಾಟದ ದಿನ. ಆದರೂ, ಜೀವನದಲ್ಲಿ ನಿಮ್ಮ ಸ್ವಂತ ನೈತಿಕತೆ ಮತ್ತು ನೀತಿಗಳನ್ನು ನೀವು ಉಲ್ಲಂಘಿಸಬಾರದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.

ಇದನ್ನೂ ಓದಿ- Vastu Tips: ಮರೆತು ಸಹ ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ, ವಾಸ್ತು ದೋಷಗಳಿಂದ ಬಡವರಾಗುತ್ತೀರಿ

ಧನು ರಾಶಿ: ಇಂದು ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಹಿರಿಯರು ನಿಮ್ಮ ಬಗ್ಗೆ ಸಂತೋಷಪಡುತ್ತಾರೆ. ನಿಮ್ಮ ಪರೀಕ್ಷೆಯ ಫಲಿತಾಂಶಗಳು ಧನಾತ್ಮಕವಾಗಿರುತ್ತವೆ.

ಮಕರ ರಾಶಿ: ಪ್ರಯತ್ನವಿದ್ದರೆ ಮಾತ್ರ ನಿರ್ದಿಷ್ಟ ಗುರಿ ಸಾಧಿಸಲು ಸಾಧ್ಯ. ಇಂದು ಆಕಸ್ಮಿಕ ಪ್ರವಾಸ ಸಾಧ್ಯತೆ ಇದ್ದು, ಪ್ರವಾಸವು ಧನ ಲಾಭವನ್ನು ತರಲಿದೆ. ಮಾರಾಟ ಮತ್ತು ಮಾರ್ಕೆಟಿಂಗ್‌ನಲ್ಲಿರುವ ವ್ಯಕ್ತಿಗಳು ಕೆಲವು ಹೊಸ ಗ್ರಾಹಕರನ್ನು ಕಂಡುಕೊಳ್ಳಬಹುದು.

ಕುಂಭ ರಾಶಿ: ಅನಗತ್ಯ ಚಟುವಟಿಕೆಗಳು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಅಪಾಯಕಾರಿ ಹೂಡಿಕೆಗಳನ್ನು ಮಾಡುವುದು ನಿಮ್ಮ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. 

ಮೀನ ರಾಶಿ: ನಿಮ್ಮ ಸಂಗಾತಿ ಜೊತೆಗಿನ ಸಂಬಂಧದಲ್ಲಿ ಯಾವುದೇ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಡಬೇಡಿ. ಯಾರನ್ನೂ ಸಹ ಅತಿಯಾಗಿ ನಂಬುವುದು ಸೂಕ್ತವಲ್ಲ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News