Mangal Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭೂಮಿ, ಮದುವೆ, ಧೈರ್ಯ ಮತ್ತು ಶೌರ್ಯದ ಅಂಶ ಎಂದು ಪರಿಗಣಿಸಲಾಗಿರುವ ಮಂಗಳ ಗ್ರಹ ಏಪ್ರಿಲ್ 23 ರಂದು ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಕೆಲ ರಾಶಿಯವರ ಜೀವನದಲ್ಲಿ ಇದು ನಕಾರಾತ್ಮಕ ಪರಿಣಾಮವನ್ನು ಬೀರಬಹುದು ಎಂದು ಹೇಳಲಾಗುತ್ತಿದೆ.
ಮೀನ ರಾಶಿಯಲ್ಲಿ ಮಂಗಳನ ಗೋಚಾರ (Mangal Gochar In Meena Rashi) ಯಾವೆಲ್ಲಾ ರಾಶಿಯವರಿಗೆ ಕಷ್ಟಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಯಾರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ.
ಮೇಷ ರಾಶಿ:
ಮಂಗಳ ರಾಶಿ ಪರಿವರ್ತನೆಯು (Mangala Rashi Parivartane) ಮೇಷ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ಮಾನಸಿಕ ಒತ್ತಡಗಳು ಹೆಚ್ಚಾಗಬಹುದು. ಶತ್ರುಗಳಿಂದ ಸಮಸ್ಯೆ ಉಲ್ಬಣಿಸಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳು ಧನ ಹಾನಿಗೆ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಇರಿ.
ಇದನ್ನೂ ಓದಿ- Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟ
ಕರ್ಕಾಟಕ ರಾಶಿ:
ಮಂಗಳ ಸಂಚಾರದ (Mars Transit) ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ಅಪಘಾತ ಸಾಧ್ಯತೆ ಇರುವುದರಿಂದ ಸಾಧ್ಯವಾದರೆ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ನಿಮ್ಮ ಮಾತು ನಿಮ್ಮ ಇಮೇಜ್ ಡ್ಯಾಮೇಜ್ ಮಾಡುವ ಸಾಧ್ಯತೆ ಇರುವುದರಿಂದ ಮಾತನಾಡುವಾಗ ತುಂಬಾ ಎಚ್ಚರಿಕೆ ಅಗತ್ಯ. ಇಲ್ಲದಿದ್ದರೆ, ನಿಮ್ಮ ಮಾತಿನಿಂದಲೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಬಹುದು.
ಸಿಂಹ ರಾಶಿ:
ಮಂಗಳ ರಾಶಿ ಬದಲಾವಣೆಯು ಸಿಂಹ ರಾಶಿಯ ಜನರಿಗೆ ಸವಾಲಿನ ಸಮಯ. ಈ ವೇಳೆ ಅನಗತ್ಯ ಪ್ರವಾಸಗಳಿಂದ ಖರ್ಚು ಹೆಚ್ಚಾಗಲಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ, ಇಲ್ಲವೇ ಇದು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಮನಸ್ಸಿನಲ್ಲಿ ಹತಾಶೆಯ ಭಾವನೆ ಹೆಚ್ಚಾಗಬಹುದು. ವೃತ್ತಿಜೀವನದಲ್ಲಿ ನಿಶ್ಚಲತೆಯು ನಿಮ್ಮನ್ನು ಅಸಮಾಧಾನಗೊಳಿಸಬಹುದು. ಆದರೆ, ತಾಳ್ಮೆಯಿಂದ ಇರುವುದನ್ನು ಪರಿಗಣಿಸಿ.
ಮೀನ ರಾಶಿ:
ಸ್ವ ರಾಶಿಗೆ ಮಂಗಳನ ಪ್ರವೇಶವು ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳನ್ನು ಹೆಚ್ಚಿಸಬಹುದು. ವ್ಯಾಪಾರಸ್ಥರು ಅದರಲ್ಲೂ ಮುಖ್ಯವಾಗಿ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಸಮಯ ಅಷ್ಟು ಉತ್ತಮವಾಗಿಲ್ಲ. ಮಾತನಾಡುವಾಗ ತುಂಬಾ ಎಚ್ಚರಿಕೆ ಅಗತ್ಯ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.