Asia Cup 2023 : ನಾಳೆ ನಡೆಯಲಿರುವ ಭಾರತ - ಪಾಕ್ ಪಂದ್ಯದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್ ! ರೋಹಿತ್ ಕುಚಿಕುಗೂ ಇಲ್ಲ ಸ್ಥಾನ

India vs Pakistan, Asia Cup-2023  ಭಾರತದ ಪ್ಲೇಯಿಂಗ್-11 ನ ಲ್ಲಿ ಒಬ್ಬರಲ್ಲ ಇಬ್ಬರು ಆಟಗಾರರು  ತಂಡದಿಂದ ಹೊರಗುಳಿಯಲಿದ್ದಾರೆ.   

Written by - Ranjitha R K | Last Updated : Sep 1, 2023, 12:57 PM IST
  • ಕ್ಯಾಂಡಿಯಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಪಂದ್ಯ
  • ಬದಲಾಗಲಿದೆ ಬ್ಯಾಟಿಂಗ್ ಕ್ರಮಾಂಕ
  • ಪ್ಲೇಯಿಂಗ್ 11 ರಲ್ಲಿ ಇಬ್ಬರು ಆಟಗಾರರಿಗಿಲ್ಲ ಸ್ಥಾನ
Asia Cup 2023 : ನಾಳೆ ನಡೆಯಲಿರುವ ಭಾರತ - ಪಾಕ್ ಪಂದ್ಯದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್ ! ರೋಹಿತ್ ಕುಚಿಕುಗೂ ಇಲ್ಲ ಸ್ಥಾನ    title=

India vs Pakistan, Asia Cup-2023 : ಏಷ್ಯಾ ಕಪ್ ಆರಂಭವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು  ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಾಳೆ ಆಡಲಿದೆ. ಭಾರತದ ಪ್ಲೇಯಿಂಗ್-11 ನ ಲ್ಲಿ ಒಬ್ಬರಲ್ಲ ಇಬ್ಬರು ಆಟಗಾರರು  ತಂಡದಿಂದ ಹೊರಗುಳಿಯಲಿದ್ದಾರೆ. 

ಕ್ಯಾಂಡಿಯಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಪಂದ್ಯ : 
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಹೈ ವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 2 ರಂದು ಅಂದರೆ ನಾಳೆ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಪಾಕಿಸ್ತಾನ ತಂಡದ ನೇತೃತ್ವವನ್ನು ಬಾಬರ್ ಅಜಮ್  ವಹಿಸಲಿದ್ದು, ರೋಹಿತ್ ಶರ್ಮಾ ಭಾರತ ತಂಡದ ಸಾರಥ್ಯ ವಹಿಸಲಿದ್ದಾರೆ. ಈ ಪಂದ್ಯದ ಪ್ಲೇಯಿಂಗ್-11 ಬಗ್ಗೆ ಕೆಲವು ಮಾಹಿತಿ ಹೊರ ಬಿದ್ದಿದೆ. ಕೆಎಲ್ ರಾಹುಲ್ ಆರಂಭಿಕ ಪಂದ್ಯಗಳಿಂದ ಹೊರಗುಳಿದಿರುವ ಕಾರಣ, ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕ ಬದಲಾಗಲಿದೆ. ಈ ನಡುವೆ ಇಬ್ಬರು ಆಟಗಾರರು ಟೀಂ ಇಂಡಿಯಾದ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆಯುವುದು ಕಷ್ಟ. 

ಇದನ್ನೂ ಓದಿ : Zurich Diamond League: ಡೈಮಂಡ್ ಲೀಗ್‍ನಲ್ಲಿ ಎಡವಿದ ನೀರಜ್ ಚೋಪ್ರಾ!

ರಾಹುಲ್ ಔಟ್ : 
ಏಷ್ಯಾಕಪ್ ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಬಳಿಕ ನೇಪಾಳ ತಂಡವನ್ನು ಎದುರಿಸಲಿದೆ. ಕೆಎಲ್ ರಾಹುಲ್ ಈ ಎರಡೂ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದನ್ನು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡಾ ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಕ್ರಮಾಂಕ ರೋಹಿತ್ ಶರ್ಮಾ ಮತ್ತು ಬಳಗಕ್ಕೆ ತಲೆ ನೋವಾಗಿದೆ. ರಾಹುಲ್ ಆಡದೇ ಇರುವುದರಿಂದ ಇಶಾನ್ ಕಿಶನ್ ವಿಕೆಟ್ ಕೀಪರ್ ಜವಾಬ್ದಾರಿ  ಹೊರಲಿದ್ದಾರೆ.  

ಬದಲಾಗಲಿದೆ ಬ್ಯಾಟಿಂಗ್ ಕ್ರಮಾಂಕ : 
ಒಂದು ವೇಳೆ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರೆ, ಮಧ್ಯಮ ಕ್ರಮಾಂಕದಲ್ಲಿ ಶುಭಮಾನ್ ಗಿಲ್ ಬರಬೇಕಾಗುತ್ತದೆ. ಇಶಾನ್ ಮತ್ತು ಗಿಲ್ ಓಪನಿಂಗ್‌ನಲ್ಲಿ ಬಂದರೆ,  3 ನೇ  ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಂಟಿಂಗ್ ಮಾಡುತ್ತಾರೆ. ಶ್ರೇಯಸ್ ಅಯ್ಯರ್ ಕೂಡಾ ನಾಲ್ಕನೇ ಸ್ಥಾನಕ್ಕೆ ಬದಲಾಗಿ ಐದನೇ ಸ್ಥಾನಕ್ಕೆ ಇಳಿಯಬೇಕಾಗುತ್ತದೆ. ಟೀಂ ಇಂಡಿಯಾಗೆ ಶುಭ ಸುದ್ದಿ ಎಂದರೆ ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು. 

ಇದನ್ನೂ ಓದಿ : World Cup 2023 : ಆಸ್ಟ್ರೇಲಿಯಾ ಪರ ಆಡಲಿದ್ದಾನೆ ಭಾರತದ ಈ ಆಟಗಾರ ! ಚೊಚ್ಚಲ ಪಂದ್ಯದಲ್ಲೇ ಬಿರುಗಾಳಿ ಎಬ್ಬಿಸಿದ ಬೌಲರ್

ಪ್ಲೇಯಿಂಗ್ 11 ರಲ್ಲಿ ಇಬ್ಬರು ಆಟಗಾರರಿಗಿಲ್ಲ ಸ್ಥಾನ : 
ಬ್ಯಾಟಿಂಗ್ ಕ್ರಮಾಂಕ ಎಷ್ಟೇ ಬದಲಾದರೂ, ಪಾಕಿಸ್ತಾನ ವಿರುದ್ಧದ ಭಾರತದ ಪ್ಲೇಯಿಂಗ್-11ರಲ್ಲಿ ಇಬ್ಬರು ಆಟಗಾರರು ತಂಡದಲ್ಲಿ ಇರುವುದಿಲ್ಲ.  ಹೌದು ಸೂರ್ಯಕುಮಾರ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಪ್ಲೇಯಿಂಗ್-11 ನಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಶ್ರೇಯಸ್ ಅಯ್ಯರ್ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಸೂರ್ಯಕುಮಾರ್ ಯಾದವ್ ಭಾರತದ ಪ್ಲೇಯಿಂಗ್ 11 ನಿಂದ ಹೊರಗುಳಿಯಲಿದ್ದಾರೆ. ರೋಹಿತ್ ಅವರನ್ನು ನಂಬರ್-5ರಲ್ಲಿ ಕಳುಹಿಸುವ ಸಾಧ್ಯತೆಯೂ ಇದೆ. ಇದರೊಂದಿಗೆ ಶುಭ್‌ಮನ್ ಮತ್ತು ಇಶಾನ್ ಓಪನ್ ಆಗಲಿದ್ದಾರೆ. ವಿರಾಟ್ ಸಂಖ್ಯೆ-3 ಮತ್ತು ಶ್ರೇಯಸ್ ಸಂಖ್ಯೆ-4. ಆಗಲೂ ಸೂರ್ಯಕುಮಾರ್ ಆಟವಾಡಲು ಸಾಧ್ಯವಾಗುವುದಿಲ್ಲ.ಇನ್ನು ಹಾರ್ದಿಕ್ ಪಾಂಡ್ಯ ಇರುವ ಕಾರಣ ಶಾರ್ದೂಲ್ ಠಾಕೂರ್  ಆಡುವುದು ಸಾಧ್ಯವಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News