2024ರ ಐಪಿಎಲ್‌ನಲ್ಲೂ ಈ ಸಮಸ್ಯೆಯಿಂದ ಬಳಲುತ್ತಿದ್ದರಂತೆ ಸಿ‌ಎಸ್‌ಕೆಯ ಎಂ.ಎಸ್. ಧೋನಿ!

MS Dhoni Undergo Surgery: ಕಳೆದ ವಾರ (ಮೇ 18, ಶನಿವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 'ವಿಚಲಿತ' ನೋಟದಿಂದ ಮೈದಾನದಿಂದ ಹೊರನಡೆದರು. ಆ ಬಳಿಕ ಇದು ಎಂ.ಎಸ್. ಧೋನಿಯವರ ಕೊನೆಯ ಐ‌ಪಿ‌ಎಲ್ ಪಂದ್ಯ ಎಂಬ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. 

Written by - Yashaswini V | Last Updated : May 21, 2024, 02:39 PM IST
  • ಐಪಿಎಲ್ 2024 ರ ಸೀಸನ್‌ಗೆ ಮುಂಚಿತವಾಗಿ ತಂಡದ ನಾಯಕತ್ವವನ್ನು ಯುವ ರುತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದ ಎಂ.ಎಸ್. ಧೋನಿ
  • ಅಷ್ಟೇ ಅಲ್ಲದೆ, ಈ ಋತುವಿನಲ್ಲಿ, ಧೋನಿ ನಿರಂತರವಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದರು
  • ಇಡೀ ಋತುವಿನಲ್ಲಿ ಎಂ.ಎಸ್. ಧೋನಿ ಅವರು ಕೊನೆಯ 2 ಓವರ್‌ಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡಲು ಆದ್ಯತೆ ನೀಡುತ್ತಿದ್ದರು.
2024ರ ಐಪಿಎಲ್‌ನಲ್ಲೂ ಈ ಸಮಸ್ಯೆಯಿಂದ ಬಳಲುತ್ತಿದ್ದರಂತೆ ಸಿ‌ಎಸ್‌ಕೆಯ ಎಂ.ಎಸ್. ಧೋನಿ!  title=

MS Dhoni: ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋಲುಂಡ ಬಳಿಕ ಚೆನ್ನೈ ಸೂಪರ್ ಕಿಂಗ್ಸ್  (Chennai Super Kings) ಐ‌ಪಿ‌ಎಲ್ 2024ರಲ್ಲಿ  ಪ್ಲೇಆಫ್‌ನಿಂದ ಹೊರಬಿದ್ದಿದೆ. ಬಳಿಕ ಎಂ.ಎಸ್. ಧೋನಿ ಐ‌ಪಿ‌ಎಲ್  ಲೀಗ್‌ನಿಂದ ನಿವೃತ್ತಿ ಘೋಷಿಸಬಹುದು ಎಂಬ ಊಹಾಫೋಹಗಳ ಮಧ್ಯೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದಂತೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಧೋನಿ ಶೀಘ್ರದಲ್ಲೇ ಸ್ನಾಯು ಹರಿದ ಶಸ್ತ್ರಚಿಕಿತ್ಸೆ (Muscle Tear Surgery) ಲಂಡನ್‌ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. 

ಹೌದು, ಕಳೆದ ವಾರ (ಮೇ 18, ಶನಿವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು  (Royal Challengers Bengaluru) ವಿರುದ್ಧ ಸೋತ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 'ವಿಚಲಿತ' ನೋಟದಿಂದ ಮೈದಾನದಿಂದ ಹೊರನಡೆದರು. ಆ ಬಳಿಕ ಇದು ಎಂ.ಎಸ್. ಧೋನಿಯವರ (MS Dhoni) ಕೊನೆಯ ಐ‌ಪಿ‌ಎಲ್ ಪಂದ್ಯ ಎಂಬ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಸುದ್ದಿ ಸಂಸ್ಥೆ ಐಎಎನ್‌ಎಸ್‌ನ ವರದಿಯ ಪ್ರಕಾರ, ಎಂ.ಎಸ್. ಧೋನಿ ಸ್ನಾಯು ಹರಿದ ಶಸ್ತ್ರ ಚಿಕಿತ್ಸೆಗಾಗಿ ಶೀಘ್ರದಲ್ಲೇ ಲಂಡನ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ ಎನ್ನಲಾಗಿದೆ. 

ಇದನ್ನೂ ಓದಿ- ರಾಹುಲ್ ದ್ರಾವಿಡ್ ಬದಲಿಗೆ ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್ ಆಯ್ಕೆಯಲ್ಲಿ ಎಂಎಸ್ ಧೋನಿ!

ಇದೇ ಕಾರಣಕ್ಕಾಗಿ ಎಂ.ಎಸ್. ಧೋನಿ 2024ರ ಐ‌ಪಿ‌ಎಲ್ ಋತುವಿನಲ್ಲಿ ಕೊನೆಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದರಂತೆ: 
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ದೀರ್ಘ ಸಮಯದಿಂದ ಚೆನ್ನೈ ಸೂಪರ್ ಕಿಂಗ್ಸ್ - ಸಿ‌ಎಸ್‌ಕೆ ನಾಯಕತ್ವ ವಹಿಸಿದ್ದ ಎಂ.ಎಸ್. ಧೋನಿ 2024 ರ ಐಪಿಎಲ್ ಸೀಸನ್‌ಗೂ ಮುಂಚಿತವಾಗಿ ತಂಡದ ನಾಯಕತ್ವವನ್ನು ಯುವ ಆಟಗಾರ  ರುತುರಾಜ್ ಗಾಯಕ್‌ವಾಡ್‌ಗೆ (Ruthuraj Gaikwad)  ಹಸ್ತಾಂತರಿಸಿದ್ದರು. ಅಷ್ಟೇ ಅಲ್ಲದೆ, ಈ ಋತುವಿನಲ್ಲಿ, ಧೋನಿ ನಿರಂತರವಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದರು. ಇಡೀ ಋತುವಿನಲ್ಲಿ ಎಂ.ಎಸ್. ಧೋನಿ ಅವರು ಕೊನೆಯ 2 ಓವರ್‌ಗಳಲ್ಲಿ ಮಾತ್ರ ಬ್ಯಾಟಿಂಗ್  ಮಾಡಲು ಆದ್ಯತೆ ನೀಡುತ್ತಿದ್ದರು. 2024ರ ಐ‌ಪಿ‌ಎಲ್ ಋತುವಿಗೂ ಮುಂಚಿತವಾಗಿಯೇ ಸ್ನಾಯು ಹರಿದ ನೋವಿನಿಂದ ಬಳಲುತ್ತಿದ್ದ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆದ್ಯತೆ ನೀಡುತ್ತಿದ್ದರು ಎನ್ನಲಾಗಿದೆ. 

ಇದನ್ನೂ ಓದಿ- MS Dhoni: ಧೋನಿ ಐಪಿಎಲ್ ನಿವೃತ್ತಿಯ ಬಗ್ಗೆ ಬಿಗ್ ಅಪ್‌ಡೇಟ್.. CSKಗೆ ಯಾವಾಗ ವಿದಾಯ ಹೇಳಲಿದ್ದಾರೆ ಕ್ಯಾಪ್ಟನ್‌ ಕೂಲ್?!

ಮುಂದಿನ ಐ‌ಪಿ‌ಎಲ್ ಋತುವಿನಲ್ಲಿ ಆಡಲಿದ್ದಾರೆಯೇ ಎಂ.ಎಸ್. ಧೋನಿ? 
ಲಭ್ಯವಿರುವ ಮಾಹಿತಿಯ ಪ್ರಕಾರ, ಚಿಕಿತ್ಸೆ ಪೂರ್ಣಗೊಂಡ ನಂತರವೇ ಎಂ.ಎಸ್. ಧೋನಿ ಮುಂದಿನ ಐ‌ಪಿ‌ಎಲ್ ಋತುವಿನಲ್ಲಿ ಆಡುತ್ತಾರೋ ಅಥವಾ ಇಲ್ಲವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಕನಿಷ್ಠ ಐದರಿಂದ ಆರು ತಿಂಗಳುಗಳು ಬೇಕಾಗಬಹುದು ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News