ನವದೆಹಲಿ: ಭಾರತ-ಶ್ರೀಲಂಕಾ ಪಿಂಕ್ ಬಾಲ್ ಟೆಸ್ಟ್ಗೆ (Pink Ball Test) ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಅಂದರೆ ಮಾರ್ಚ್ 12ರಿಂದ ಮಾರ್ಚ್ 16ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) 2ನೇ ಟೆಸ್ಟ್ ಪಂದ್ಯ ನಡೆಯಲಿದ್ದು ಈಗಾಗಲೇ ಸಾಕಷ್ಟು ಕುತೂಹಲ ಕೌತುಕಗಳಿಗೆ ಪಂದ್ಯ ಸಾಕ್ಷಿಯಾಗಲಿದೆ.
ಗೆಲುವಿನ ನಾಗಾಲೋಟ ಮುಂದುವರೆಸುತ್ತಾ ರೋಹಿತ್ ಪಡೆ?
ಸಾಲು ಸಾಲು ಗೆಲುವುಗಳಿಂದ ಮುನ್ನುಗ್ಗುತ್ತಿರುವ ರೋಹಿತ್ (Rohith Sharma) ಪಡೆ ತನ್ನ ಗೆಲುವಿನ ಓಟ ಮುಂದುವರೆಸುತ್ತಾ ಕಾದು ನೋಡಬೇಕಿದೆ. ಮೊಹಾಲಿಯಲ್ಲಿ ನಡೆದ ಟೆಸ್ಟ್ನಲ್ಲಿ ಮೂರೇ ದಿನಕ್ಕೆ ಟೆಸ್ಟ್ ಮುಗಿಸಿದ್ದ ಟೀಂ ಇಂಡಿಯಾ (Team India) 222ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ರೋಹಿತ್ ಪಡೆ ಅದೇ ಆಟವನ್ನು ಲಂಕಾ ವಿರುದ್ದವೂ ಮುಂದುವರೆಸಿತ್ತು. ಟಿ-20 ಸರಣಿಯಲ್ಲಿ (T20 Series) ಲಂಕಾ (Srilanka) ವಿರುದ್ದ ಕ್ಲೀನ್ ಸ್ವೀಪ್ ಸಾಧನೆ ಮುಂದುವರೆಸಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನೂ ಸಂಪೂರ್ಣ ವಶಪಡಿಸಿಕೊಳ್ಳುವ ತವಕದಲ್ಲಿದೆ.
ಇದನ್ನೂ ಓದಿ: Omicron ಇನ್ನೂ ಹೋಗಿಲ್ಲ! ಬ್ರಿಟನ್ ನಲ್ಲಿ ನಡೆಸಲಾದ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ
ಬಹುಕಾಲದ ಬಳಿಕ ಕ್ರಿಕೆಟ್ಗೆ ತೆರೆದುಕೊಂಡ ಕ್ರಿಕೆಟ್ ಅಂಗಳ:
2020ರ ಜನವರಿ 19ರಂದು ಭಾರತ, ಆಸ್ಟ್ರೇಲಿಯಾ ವಿರುದ್ದ ನಡೆದಿದ್ದ ಏಕದಿನ ಪಂದ್ಯವೇ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಕೊನೆಯ ಪಂದ್ಯವಾಗಿತ್ತು. 2018ರ ಜನವರಿಯಲ್ಲಿ ಅಫ್ಘನ್ ವಿರುದ್ದ ನಡೆದ ಟೆಸ್ಟ್ ಪಂದ್ಯವೇ (Test Match) ಚಿನ್ನಸ್ವಾಮಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿವೆ.
ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್:
ಬಹಳ ಸಮಯದ ಬಳಿಕ ನಡೆಯುತ್ತಿರುವ ಈ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ರಾಜ್ಯದ ಜನರು ಭರ್ಜರಿ ರೆಸ್ಪಾನ್ಸ್ ಕೊಟ್ಟಿದ್ದಾರೆ. ಈ ಪಂದ್ಯಕ್ಕಾಗಿ ಕಾಯ್ದಿರಿಸಲಾಗಿದ್ದ ಎಲ್ಲಾ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು ತುಂಬಿದ ಸ್ಟೇಡಿಯಂ ಎರಡನೇ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.
ಇನ್ನು ತಂಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳುತ್ತಿದ್ದು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಆಟಗಾರರು ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಲು ತಯಾರಾಗುತ್ತಿದ್ದಾರೆ. ಕರ್ನಾಟಕದ ಪ್ರತಿಭೆ, ಇದೇ ಚಿನ್ನಸ್ವಾಮಿಯಲ್ಲಿ ಆಡಿ ಬೆಳೆದ ಪ್ರತಿಭೆ ಮಾಯಾಂಕ್ ಅಗರ್ವಾಲ್ (Mayank Agarwal) ಮತ್ತೆ ಹೋಂ ಗ್ರೌಂಡ್ನಲ್ಲಿ ಕಮಾಲ್ ಮಾಡಲು ತಯಾರಾಗಿದ್ದಾರೆ. ಇದರ ಜೊತೆಗೆ ವೇಗದ ಬೌಲರ್ ಸಿರಾಜ್ ಕೂಡ ಈ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಮತ್ತೋರ್ವ ಬೌಲರ್ ಈಗಷ್ಟೇ ಗಾಯದ ಸಮಸ್ಯೆಯಿಂದ ಹೊರ ಬಂದು ಫಿಟ್ ಆಗಿರುವ ಅಕ್ಷರ್ ಪಟೇಲ್ (Axar Patel) ಕೂಡ ಈ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ : ವಿಜಯೋತ್ಸವ ಆಚರಿಸಿದ ಸಿಎಂ ಯೋಗಿ
ಮೊದಲ ಪಿಂಕ್ ಬಾಲ್ ಟೆಸ್ಟ್:
ಭಾರತ ಹಾಗೂ ಶ್ರೀಲಂಕಾ (India Srilanka Match) ನಡುವೆ ಸಾಕಷ್ಟು ಪಂದ್ಯಗಳು ನಡೆದಿದ್ದು ಪಿಂಕ್ ಬಾಲ್ ಟೆಸ್ಟ್ ಮೊದಲ ಬಾರಿಗೆ ನಡೆಯುತ್ತಿದ್ದು, ಭಾರತ ಮತ್ತು ಶ್ರೀಲಂಕಾ ನಡುವಿನ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ಗೆ ಬೆಂಗಳೂರಿನ ಅಂಗಳ ಸಾಕ್ಷಿಯಾಗಲಿದೆ. ಈಗಾಗಲೇ ಉಭಯ ತಂಡಗಳು ಅಭ್ಯಾಸ ನಡೆಸುತ್ತಿದ್ದು ಭಾರತ ಗೆಲುವಿನ ನಾಗಾಲೋಟ ಮುಂದುವರೆಸಲಿ ಎಂಬುದೇ ಕ್ರಿಕೆಟ್ ಅಭಿಮಾನಿಗಳ ಆಶಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.