ಸಂಸತ್ತಿನ ಉಭಯ ಸದನಗಳಲ್ಲಿನ ಸಂಸದರಿಗೆ ಕ್ಯಾಂಟೀನ್ ನ ಆಹಾರ ಪದಾರ್ಥಗಳ ಮೇಲೆ ನೀಡಲಾಗುವ ಎಲ್ಲಾ ಸಬ್ಸಿಡಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗುರುವಾರ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ವಿವಿಧ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 140 ರೂ.ಗೆ ಏರಿದರೆ, ಹೈದರಾಬಾದ್ನಲ್ಲಿ ಪ್ರತಿ ಕೆ.ಜಿ.ಗೆ 150 ರೂ. ತಲುಪಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನ, ಹಣಕ್ಕಿಂತ ಈರುಳ್ಳಿ ಕಳ್ಳತನದ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿವೆ. ಇತ್ತೀಚೆಗಷ್ಟೇ, ಮಧ್ಯಪ್ರದೇಶದ ಮಾಂಡ್ಸೌರ್ನ ರೈತ 30,000 ರೂ. ಮೌಲ್ಯದ ಈರುಳ್ಳಿ ಬೆಳೆಯನ್ನು ಕಳ್ಳರು ಬೇರುಸಹಿತ ಕಿತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಿಳಾ ಸುರಕ್ಷತೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿ ಟ್ವಿಟರ್, ಫೇಸ್ಬುಕ್, ವಾಟ್ಸಾಪ್ ಅಧಿಕಾರಿಗಳನ್ನು ಸಂಸತ್ತಿಗೆ ಕರೆದಿದೆ. ಇದರೊಂದಿಗೆ ಸಂಸತ್ತಿನ ಸ್ಥಾಯಿ ಸಮಿತಿ ಪ್ರಶ್ನೆಗೆ ಉತ್ತರಿಸುತ್ತದೆ.
ಮುಂದಿನ ವಾರ ವಿಶೇಷ ಸಂರಕ್ಷಣಾ ಗುಂಪು (ಎಸ್ಪಿಜಿ) ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯನ್ನು ಲೋಕಸಭೆ ಕೈಗೆತ್ತಿಕೊಳ್ಳಲಿದೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ನವೆಂಬರ್ 22 ರಂದು ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು, 2019 ರ ಈ ಕೊನೆಯ ಅಧಿವೇಶನ ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಮಾತನಾಡಿದ್ದೇನೆ.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಹಲವು ಮಸೂದೆಗಳನ್ನು ಚರ್ಚಿಸುವ ನಿರೀಕ್ಷೆಯಿದ್ದು, ಎರಡು ನಿರ್ಣಾಯಕ ಸುಗ್ರೀವಾಜ್ಞೆಗಳನ್ನು ಕಾನೂನನ್ನಾಗಿ ಪರಿವರ್ತಿಸುವುದೂ ಸಹ ಪಟ್ಟಿಯಲ್ಲಿದೆ.
ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತಿದೆ. ಈ ಅಧಿವೇಶನದಲ್ಲಿ, ಸರ್ಕಾರವು ಅನೇಕ ಪ್ರಮುಖ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಮಾಡಲು ಪ್ರಯತ್ನಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಯ ಅಂತಿಮ ಪಟ್ಟಿ ಘೋಷಣೆಯಾದ ನಂತರ ವ್ಯಂಗ್ಯ ವಾಡಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಂಸತ್ತಿನಲ್ಲಿ ಎನ್ಆರ್ಸಿಯನ್ನು ಸಹ ನಡೆಸಬೇಕು ಎಂದು ಹೇಳಿದರು
ಪಶ್ಚಿಮ ಉತ್ತರಪ್ರದೇಶದ ಪ್ರಮುಖ ಗುಜ್ಜರ್ ನಾಯಕ ಸುರೇಂದ್ರ ಸಿಂಗ್ ನಗರ್ ಅವರು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ಅದನ್ನು ಅಂಗೀಕರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಮೇಲಿರುವ ವಾತ್ಸಲ್ಯದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಮಕ್ಕಳೊಂದಿಗೆ ಸಂವಹನ ನಡೆಸಿರುವುದನ್ನು ನಾವು ನೋಡಿದ್ದೇವೆ.
ಶನಿವಾರದಂದು ಸಂಸತ್ತಿನ ಆವರಣದಲ್ಲಿನ ಸ್ವಚ್ಛ ಭಾರತ್ ಅಭಿಯಾನ್ ದಲ್ಲಿ ಭಾಗವಹಿಸಿದ್ದ ಸಂಸದೆ ಹೇಮಾಮಾಲಿನಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಎಎನ್ಐ ಹಂಚಿಕೊಂಡಿರುವ ಈ ವಿಡಿಯೋ ಈಗ ನೆಟಿಜನ್ ಗಳ ವ್ಯಂಗ್ಯಕ್ಕೆ ಗುರಿಯಾಗಿದೆ.
ದುರುದ್ದೇಶಪೂರಿತ ಉದ್ದೇಶದಿಂದ ಪ್ರಕಟವಾದ ನಕಲಿ ಸುದ್ದಿ ಮತ್ತು ಮಾಹಿತಿಯು ಚರ್ಚಿಸಬೇಕಾದ ಪ್ರಮುಖ ವಿಷಯಗಳಾಗಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಹೇಳಿದ್ದಾರೆ.
17ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಇಂದು ವಿಪಕ್ಷಗಳ ಜೈ ಶ್ರೀರಾಮ್, ವಂದೇ ಮಾತರಂ ಘೋಷಣೆಗಳ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.