ಈ ವರದಿಯ ಪ್ರಕಾರ, ಶೇಕಡಾ 29 ಜನರು ವರ್ಕ್ ಫ್ರಮ್ ಹೋಂ ಪರವಾಗಿದ್ದಾರೆ. ಅದೇ ಸಮಯದಲ್ಲಿ, ಸಾಂಕ್ರಾಮಿಕ ರೋಗದ ಬೆಳವಣಿಗೆಯನ್ನು ತಡೆಯುವಲ್ಲಿ ವರ್ಕ್ ಫ್ರಮ್ ಹೋಂ ಸಹ ದೊಡ್ಡ ಕೊಡುಗೆ ನೀಡಿದೆ ಎಂದು 24 ಪ್ರತಿಶತದಷ್ಟು ಜನರು ತಿಳಿಸಿದ್ದಾರೆ. ಏತನ್ಮಧ್ಯೆ, ಕೇವಲ 9 ಪ್ರತಿಶತದಷ್ಟು ಜನರು ತಮ್ಮ ಮೂಲ ಸ್ಥಳದಲ್ಲಿ ಉಳಿಯಲು ಬಯಸುತ್ತಾರೆ ಮತ್ತು ಅಲ್ಲಿಂದಲೇ ಕೆಲಸ ಮಾಡಲು ಬಯಸುತ್ತಾರೆ ಎಂದು ಹೇಳಿದರು.
ಬಳಕೆದಾರರ ಬೇಡಿಕೆಯಂತೆಯೇ ವಾಟ್ಸಾಪ್ ಕೊನೆಗೂ ಡೆಸ್ಕ್ಟಾಪ್ನಲ್ಲಿ ವಾಟ್ಸಾಪ್ ಬಳಕೆ ಮಾಡುವವರಿಗೆ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಸೌಲಭ್ಯವನ್ನ ನೀಡಿದೆ. ಇದರಿಂದಾಗಿ ದಿನದ ಬಹುತೇಕ ಅವಧಿಯನ್ನ ಕಂಪ್ಯೂಟರ್ ಪರದೆಯ ಮುಂದೆ ಕಳೆಯುವವರಿಗೆ ದೊಡ್ಡ ಲಾಭ ಸಿಕ್ಕಂತಾಗಿದೆ.
ಲಾಕ್ ಡೌನ್ ಹಿಂಪಡೆದ ಬಳಿಕವೂ ಕೂಡ ಕಂಪನಿಗಳು ವರ್ಕ್ ಫ್ರಮ್ ಹೋಮ್ (WFH) ಮೋಡ್ ನಿಂದ ನಿಧಾನಕ್ಕೆ ಹೊರಬರುತ್ತಿವೆ. ಆದರೆ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಇನ್ನೊಂದೆಡೆ ಸ್ಕೂಲ್ ಹಾಗೂ ಕಾಲೇಜುಗಳ ಪರಿಸ್ಥಿತಿಯೂ ಕೂಡ ಇದೇ ತೆರನಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಸಂಪೂರ್ಣ ತರಗತಿಗಳು ಇನ್ನೂ ಆನ್ಲೈನ್ ನಲ್ಲಿಯೇ ನಡೆಯುತ್ತಿದೆ.
ಬಿಸಿನೆಸ್ ಪ್ರೋಸೆಸ್ ಔಟ್ ಸೋರ್ಸ್ (BPO) ಮತ್ತು ಐಟಿ ಆಧಾರಿತ ಸೇವೆಗಳನ್ನು (ITES) ಸೇವೆ ಒದಗಿಸುವ ಕಂಪನಿಗಳ ಮಾರ್ಗಸೂಚಿಗಳ ಸರಳೀಕರಣವನ್ನು ಸರ್ಕಾರ ಘೋಷಿಸಿದೆ, ಇದು ನೌಕರರ ಮನೆಯಿಂದ ಮಾಡುವ ಕೆಲಸಕ್ಕೆ ಅನುಕೂಲ ಮಾಡಿಕೊಡಲಿದೆ.
ಭಾರತದ ಪ್ರತಿಯೊಂದು ವಲಯದಲ್ಲೂ ಮಹಿಳೆಯರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ, ಮಾರ್ಚ್ನಲ್ಲಿ ಜಾರಿಗೆ ತರಲಾದ ಲಾಕ್ಡೌನ್ ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಹೆಚ್ಚಾಗಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಕಂಪನಿಯು ತನ್ನ ಜನಪ್ರಿಯ "ವರ್ಕ್ ಫ್ರಮ್ ಹೋಮ್" ಬ್ರಾಡ್ಬ್ಯಾಂಡ್ ಯೋಜನೆಯ ಸಿಂಧುತ್ವವನ್ನು ಡಿಸೆಂಬರ್ವರೆಗೆ ವಿಸ್ತರಿಸಿದೆ.
ಮನೆಯಿಂದ ಕೆಲಸ (Work From Home) ನಿಮ್ಮ ನಿದ್ರೆಯ ಚಕ್ರವನ್ನು ಹಾಗೂ ರೂಢಿಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ, ಇದರಿಂದಾಗಿ ಹೆಚ್ಚಿನ ಜನರು ಕಳಪೆ ಪ್ರಮಾಣದ ನಿದ್ರೆಗೆ ಬಲಿಯಾಗುತ್ತಿದ್ದಾರೆ,ಇದರಿಂದ ಅವರ ಆರೋಗ್ಯದ ಮೇಲೆ ಬಹಳ ಹಾನಿಕಾರಕ ಪರಿಣಾಮ ಉಂಟಾಗುತ್ತಿದೆ. ಹಾಗಾದರೆ ಬನ್ನಿ ಈ ಕುರಿತು ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ವಿಸ್ತಾರವಾಗಿ ತಿಳಿಯೋಣ.
ಮನೆಯಿಂದ ಕೆಲಸ ಎಂದರೆ ವರ್ಕ್ ಫ್ರಮ್ ಹೋಂ ಇದು ಭಾರತದಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕುತ್ತಿರುವ ಪ್ರಮುಖ ಪದವಾಗಿದೆ. ಬಿಸಿನೆಸ್ ಸಂಸ್ಥೆಯ ವರದಿಯ ಪ್ರಕಾರ ಮನೆಯಿಂದ ಸಂಪಾದಿಸಲು 6 ಸಾವಿರಕ್ಕೂ ಹೆಚ್ಚು ಜನರು ಪ್ರತಿದಿನ ಈ ಕೀವರ್ಡ್ ಹುಡುಕುತ್ತಾರೆ.
ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಜನರು ತಮ್ಮ ವ್ಯರ್ಥ ವೆಚ್ಚಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ಪ್ರತಿ 3 ಭಾರತೀಯರಲ್ಲಿ ಒಬ್ಬರು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದರಿಂದ ಪ್ರತಿ ತಿಂಗಳು ಸರಾಸರಿ 3 ರಿಂದ 5 ಸಾವಿರ ರೂಪಾಯಿಗಳನ್ನು ಉಳಿತಾಯ ಮಾಡಿದ್ದಾರೆ ಎನ್ನಲಾಗಿದೆ.
ಅನೇಕ ಟೆಕ್ ಕಂಪನಿಗಳು ಉದ್ಯೋಗಿಗಳಿಗೆ ತಮಗೆ ಬೇಕಾದಷ್ಟು ಕಾಲ ಅಥವಾ ಕನಿಷ್ಠ ವರ್ಷದ ಅಂತ್ಯದವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತಿದ್ದರೆ, ಗೂಗಲ್ ಸಿಇಒ ಸುಂದರ್ ಪಿಚೈ ಅವರು ಮನೆಯಿಂದ ಪೂರ್ಣ ಸಮಯದ ಕೆಲಸವು ಕಂಪನಿಗೆ ಕಾರ್ಯಸಾಧ್ಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ Twitter, ಸೆಪ್ಟೆಂಬರ್ ಮೊದಲು ಕಚೇರಿಗಳು ತೆರೆಯುವುದಿಲ್ಲ ಎಂದು ಹೇಳಿ ತನ್ನ ಎಲ್ಲ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿತ್ತು. ಆದರೆ ಇದೀಗ ಕಚೇರಿ ತೆರೆದ ನಂತರವೂ ಕೂಡ, ಯಾವುದೇ ಉದ್ಯೋಗಿ ಯಾವಾಗಲೂ ತನ್ನ ಮನೆಯಿಂದಲೇ ಕೆಲಸ ಮಾಡಲು ಬಯಸಿದರೆ, ಅವರು ಮಾಡಬಹುದು ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.