Big Bang Plan: 7 ರೂ.ಗಿಂತ ಕಡಿಮೆ ದರದಲ್ಲಿ 2GB ಡೇಟಾ, ಅನಿಯಮಿತ ಕರೆ

ಕಂಪನಿಯ ಕೊಡುಗೆ 2GB ಡೇಟಾ, ಅನಿಯಮಿತ ಕರೆಗಷ್ಟೇ ಸೀಮಿತವಾಗಿಲ್ಲ. ಅನೇಕ ಯೋಜನೆಗಳಲ್ಲಿ ಏರ್‌ಟೆಲ್ ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಂತಹ ಉಚಿತ ಒಟಿಟಿ ಚಂದಾದಾರಿಕೆಗಳನ್ನು ಸಹ ನೀಡುತ್ತದೆ. 

Written by - Yashaswini V | Last Updated : Mar 31, 2021, 08:20 AM IST
  • 7 ರೂಪಾಯಿಗಿಂತ ಕಡಿಮೆ ದರದಲ್ಲಿ ಅತ್ಯುತ್ತಮ ಯೋಜನೆ
  • ಪ್ರತಿದಿನ 2 ಜಿಬಿ ಡೇಟಾ ಲಭ್ಯವಿರುತ್ತದೆ
  • ಅನಿಯಮಿತ ಕರೆ ಮತ್ತು 100 ಉಚಿತ ಎಸ್ಎಂಎಸ್ ಸೌಲಭ್ಯವೂ ಲಭ್ಯ
Big Bang Plan: 7 ರೂ.ಗಿಂತ ಕಡಿಮೆ ದರದಲ್ಲಿ 2GB ಡೇಟಾ, ಅನಿಯಮಿತ ಕರೆ title=
Prepaid Recharge plan

ನವದೆಹಲಿ: ಪ್ರತಿ ದಿನ 2 ಜಿಬಿ ಡೇಟಾ ಮತ್ತು ಅನ್ಲಿಮಿಟೆಡ್ ಕಾಲಿಂಗ್ ಕೇವಲ 7 ರೂ.ಗಳಿಗೆ ಲಭ್ಯವಾಗಬಹುದೇ? ಆದರೆ ಇದು ನಿಜ. ಏರ್ಟೆಲ್ ಒಂದು ಯೋಜನೆಯನ್ನು ನೀಡುತ್ತದೆ, ಇದರಲ್ಲಿ ನೀವು ಕೇವಲ 7 ರೂಪಾಯಿಗಳಿಗೆ ಉತ್ತಮ ಯೋಜನೆಯನ್ನು ಪಡೆಯಬಹುದು.

ಈ ಯೋಜನೆಯ ಲಾಭಗಳು ಯಾವುವು?
ಏರ್ಟೆಲ್ ಗ್ರಾಹಕರನ್ನು ಸೆಳೆಯಲು ಇಂತಹ ಅನೇಕ ಯೋಜನೆಗಳನ್ನು ತರುತ್ತಿದೆ. ಇದು ಬಳಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಕಂಪನಿಯ ಈ ಯೋಜನೆಯಲ್ಲಿ, ಪ್ರತಿದಿನ ಹತ್ತು ರೂಪಾಯಿಗಿಂತ ಕಡಿಮೆ ದರದಲ್ಲಿ 100 ಎಸ್‌ಎಂಎಸ್ ಲಭ್ಯವಿದೆ. ಅಲ್ಲದೆ, ಯಾವುದೇ ನೆಟ್‌ವರ್ಕ್‌ನಲ್ಲಿ ನಿಮಗೆ ಅನಿಯಮಿತ ಕರೆ (Unlimited Call) ಸೌಲಭ್ಯವನ್ನು ನೀಡಲಾಗುತ್ತದೆ. ಕಂಪನಿಯು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಪ್ರತಿದಿನ 2 ಜಿಬಿ ಇಂಟರ್ನೆಟ್ ಡೇಟಾವನ್ನು ಸಹ ಒದಗಿಸುತ್ತದೆ.

ಇದನ್ನೂ ಓದಿ - Free Disney+ Hotstar ಪಡೆಯಲು ಹೀಗೆ ಮಾಡಿ..!

ಏರ್ಟೆಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು (Airtel Prepaid Recharge Plans): 
ಮಾಹಿತಿಯ ಪ್ರಕಾರ, ಪ್ರಿಪೇಯ್ಡ್ ಗ್ರಾಹಕರಿಗೆ ಏರ್ಟೆಲ್ (Airtel) ಅನೇಕ ಯೋಜನೆಗಳನ್ನು ನೀಡುತ್ತದೆ. ಇವುಗಳಲ್ಲಿ ಒಂದು ವಾರ್ಷಿಕ ಯೋಜನೆ, ಇದರ ಬೆಲೆ 2,498 ರೂ. ಇದರ ಸಿಂಧುತ್ವವು 365 ದಿನಗಳು. ಈ ಯೋಜನೆಯನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅದರ ದೈನಂದಿನ ವೆಚ್ಚ ಕೇವಲ 6.84 ರೂಪಾಯಿಗಳು. ಅಂದರೆ, ನೀವು ದಿನಕ್ಕೆ 7 ರೂಪಾಯಿಗಿಂತ ಕಡಿಮೆ ದರದಲ್ಲಿ ಅತ್ಯುತ್ತಮ ಯೋಜನೆಯನ್ನು ಪಡೆಯುತ್ತಿರುವಿರಿ.

ಈ ಯೋಜನೆಯಲ್ಲಿ ಇನ್ನೂ ಹಲವು ಪ್ರಯೋಜನಗಳಿವೆ:
ಕಂಪನಿಯ ಕೊಡುಗೆ 2GB ಡೇಟಾ, ಅನಿಯಮಿತ ಕರೆಗಷ್ಟೇ ಸೀಮಿತವಾಗಿಲ್ಲ. ಅನೇಕ ಯೋಜನೆಗಳಲ್ಲಿ, ಏರ್‌ಟೆಲ್ ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಂತಹ ಉಚಿತ ಒಟಿಟಿ ಚಂದಾದಾರಿಕೆಗಳನ್ನು ಸಹ ನೀಡುತ್ತದೆ. ನೀವು ಅವರ ಮಾಹಿತಿಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಬಹುದು.

ಇದನ್ನೂ ಓದಿ - Airtel 4-ಇನ್ -1 Family Plan, ಸಿಗಲಿದೆ 500GB ಡಾಟಾ

ನಾನು ಮತ್ತು ನನ್ನ ಕುಟುಂಬದ (Me & My Family) ಯೋಜನೆಗಳು ಅದ್ಭುತವಾಗಿವೆ:
ಏರ್ಟೆಲ್ ಹಲವಾರು ಕುಟುಂಬ ಯೋಜನೆಗಳನ್ನು ಸಹ ನೀಡುತ್ತಿದೆ. ಕುಟುಂಬ ಯೋಜನೆಗಳ ಬೆಲೆ 749 ರೂ., 999 ರೂ., ಮತ್ತು 1,599 ರೂ. ವಾಸ್ತವವಾಗಿ, ನೀವು ಸರಳವಾದ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಆಡ್-ಆನ್ ಸಂಪರ್ಕವನ್ನು ತೆಗೆದುಕೊಂಡರೆ, ಅದರ ಶುಲ್ಕ 299 ರೂ. ಕುಟುಂಬ ಯೋಜನೆಗಳಿಗಾಗಿ ಏರ್‌ಟೆಲ್  749 ರೂ.ನ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಸಹ ಹೊಂದಿದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಎರಡು ಉಚಿತ ಆಡ್-ಆನ್ ಸಂಪರ್ಕಗಳು ಲಭ್ಯವಿದೆ. ನಿಯಮಿತ ಮತ್ತು ಕೇವಲ ಒಂದು ಡೇಟಾ ಆಡ್-ಆನ್ ಇದೆ. ಈ ಯೋಜನೆಯು ಒಂದು ತಿಂಗಳಿಗೆ 125 ಜಿಬಿ ಡೇಟಾವನ್ನು ನೀಡುತ್ತದೆ, ಇದರೊಂದಿಗೆ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇದರಲ್ಲಿ, ಪ್ರತಿ ದಿನ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸಹ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News