ಬೆಂಗಳೂರು : ಇಂದಿನ ದಿನಗಳಲ್ಲಿ ಬಟ್ಟೆ ಒಗೆಯುವುದು ದೊಡ್ಡ ಕೆಲಸವಲ್ಲ. ವಾಶಿಂಗ್ ಮೆಷಿನ್ ನಲ್ಲಿ ಯಾವುದೇ ಸಮಯದಲ್ಲಿ ಬಟ್ಟೆಯನ್ನು ಹಾಕುವ ಮೂಲಕ ಸುಲಭವಾಗಿ ಸ್ವಚ್ಛಗೊಳಿಸಬಹುದು.ಆದರೆ ಕೆಲವೊಮ್ಮೆ ನಾವು ಒಗೆಯಲು ಹಾಕುವ ಬಟ್ಟೆಗಳಿಂದಲೇ ವಾಶಿಂಗ್ ಮೆಷಿನ್ ಹಾನಿಗೆ ಒಳಗಾಗುತ್ತದೆ.
ಹೌದು, ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯಲು ಹಾಕುವಾಗ ಯಾವ ವಸ್ತುಗಳನ್ನು ಮೆಷಿನ್ ನಲ್ಲಿ ಹಾಕಬೇಕು, ಯಾವ ಬಟ್ಟೆಗಳನ್ನು ಹಾಕಬಾರದು ಎನ್ನುವ ಅರಿವು ನಮಗೆ ಇರಬೇಕು. ಈ ಬಗ್ಗೆ ಯೋಚಿಸದೆ ವಾಶಿಂಗ್ ಮೆಷಿನ್ ನಲ್ಲಿ ಬಟ್ಟೆಯನ್ನು ಹಾಕಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಿದ್ದರೆ ಯಾವ ರೀತಿಯ ಬಟ್ಟೆಗಳನ್ನು ವಾಶಿಂಗ್ ಮೆಷಿನ್ ನಲ್ಲಿ ಒಗೆಯಬಾರದು ಎನ್ನುವುದನ್ನು ನೋಡೋಣ.
ಇದನ್ನೂ ಓದಿ : Lok Sabha Elections 2024: ಮತದಾನದಲ್ಲಿ ಎರಡು ಹಂತದ ಪರಿಶೀಲನೆ, ಬಿಜೆಪಿಯ ಈ ಬೇಡಿಕೆಯ ಹಿಂದಿನ ಲೆಕ್ಕಾಚಾರ ಏನು?
ಈ ವಸ್ತುಗಳನ್ನು ವಾಶಿಂಗ್ ಮೆಷಿನ್ ನಲ್ಲಿ ಹಾಕಿ ಒಗೆಯಬಾರದು :
1- ಸಾಕುಪ್ರಾಣಿಗಳ ಕೂದಲು ಅಂಟಿಕೊಂಡಿರುವ ಬಟ್ಟೆಗಳನ್ನು ತಪ್ಪಿಯೂ ವಾಷಿಂಗ್ ಮೆಷಿನ್‌ನಲ್ಲಿ ಹಾಕಬಾರದು. ಹೀಗೆ ಮಾಡುವುದರಿಂದ ಸಾಕುಪ್ರಾಣಿಗಳ ಕೂದಲು ಇತರ ಬಟ್ಟೆಗಳ ಮೇಲೂ ಅಂಟಿಕೊಳ್ಳುತ್ತದೆ.ಇದಲ್ಲದೆ, ಇದು ವಾಶಿಂಗ್ ಮೆಷಿನ್ ನ ಡ್ರೈನ್ ಅನ್ನು ಮುಚ್ಚಿಬಿಡುವ ಅಪಾಯವೂ ಇರುತ್ತದೆ.
2- ವಾಷಿಂಗ್ ಮೆಷಿನ್‌ನಲ್ಲಿ ಬ್ರಾ ಮತ್ತು ಪ್ಯಾಂಟಿಗಳಂತಹ ಎಲಾಸ್ಟಿಕ್ ಇರುವ ಒಳ ಉಡುಪುಗಳನ್ನು ಒಗೆಯಲು ಹಾಕುವ ಅಭ್ಯಾಸ ಇಟ್ಟುಕೊಂಡಿದ್ದರೆ ತಕ್ಷಣವೇ ಇದನ್ನೂ ನಿಲ್ಲಿಸಿಬಿಡಿ. ಏಕೆಂದರೆ ಅಂತಹ ಬಟ್ಟೆಗಳು ವಾಶಿಂಗ್ ಮೆಷಿನ್ ನಲ್ಲಿ ತೊಳೆಯಲು ಸೂಕ್ತವಲ್ಲ.
3- ಚಿಕ್ಕ ಮಕ್ಕಳ ಬಟ್ಟೆಯನ್ನು ಕೂಡಾ ವಾಷಿಂಗ್ ಮೆಷಿನ್ ನಲ್ಲಿ ಒಗೆಯಬಾರದು. ಸಣ್ಣ ಬಟ್ಟೆಗಳು ಯಂತ್ರದ ರಂಧ್ರಗಳಲ್ಲಿ ಬಹಳ ಸುಲಭವಾಗಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಬಟ್ಟೆಯಾ ಜೊತೆಗೆ ಯಂತ್ರಕ್ಕೂ ಹಾನಿಯಾಗುವ ಅಪಾಯವಿದೆ.
ಇದನ್ನೂ ಓದಿ : X ನಲ್ಲೂ ಉಚಿತವಾಗಿ ಮಾಡಬಹುದು audio, Video Calls!ಈ ಮೂರು ಹಂತಗಳನ್ನು ಅನುಸರಿಸಿದರೆ ಸಾಕು !
4- ಯಂತ್ರದಲ್ಲಿ ಗ್ರೀಸ್, ಎಣ್ಣೆ, ಮದ್ಯದಂತಹ ಸುಡುವ ವಸ್ತುಗಳು ತಾಕಿರುವ ಬಟ್ಟೆಗಳನ್ನು ತೊಳೆಯಬಾರದು. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿ ಭಾರೀ ಅವಘಡ ಸಂಭವಿಸುವ ಅಪಾಯವಿರುತ್ತದೆ.
5- ವಾಶಿಂಗ್ ಮೆಷಿನ್ ನಲ್ಲಿ ಅನೇಕ ಬೂಟುಗಳನ್ನು ತೊಳೆಯುವುದು ಸುರಕ್ಷಿತ ಎಂದು ಹೇಳಲಾಗುತ್ತದೆ. ಆದರೂ ನಿತ್ಯ ಬಳಸುವ ಕೊಳೆ ತುಂಬಿಕೊಂಡಿರುವ ಬೂಟುಗಳನ್ನು ಎಂದಿಗೂ ವಾಶಿಂಗ್ ಮೆಷಿನ್ ನಲ್ಲಿ ಹಾಕಬಾರದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ