ನವದೆಹಲಿ: ಗೂಗಲ್ ನ ಆನ್‌ಲೈನ್ ಪಾವತಿ ಅಪ್ಲಿಕೇಶನ್ ಗೂಗಲ್ ಪೇ (Google Pay) ಅನ್ನು ಆಪಲ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಈ ಹಠಾತ್ ಕ್ರಮಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಐಫೋನ್ ಕಂಪನಿ ತಯಾರಕ ಆಪಲ್ ಶೀಘ್ರದಲ್ಲೇ ಇದನ್ನು ಪ್ರಕಟಿಸುವ ನಿರೀಕ್ಷೆಯಿದೆ.
ವಹಿವಾಟಿನಲ್ಲಿ ತೊಂದರೆಗಳು:
ಪ್ರಸ್ತುತ, ಆಪಲ್ ಆಪ್ ಸ್ಟೋರ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಗೋಚರಿಸುವುದಿಲ್ಲ. ಮೊದಲೇ ಸ್ಥಾಪಿಸಲಾದ ಗೂಗಲ್ ಪೇ ಅಪ್ಲಿಕೇಶನ್ ಇನ್ನೂ ಐಫೋನ್ (iPhone)ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಬಳಕೆದಾರರು ವಹಿವಾಟಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರಿದ್ದಾರೆ.
Google Pay ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಗೂಗಲ್ ನೀಡಿದೆ ಈ ಹೇಳಿಕೆ:
ಆದರೆ ಆಪ್ ಸ್ಟೋರ್‌ನಿಂದ ಕೆಲವು ಸಮಸ್ಯೆಗಳನ್ನು ಸರಿಪಡಿಸುವ ಹಿನ್ನಲೆಯಲ್ಲಿ ಗೂಗಲ್ ಪೇ ಅನ್ನು ತೆಗೆದುಹಾಕಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಗೂಗಲ್ (Google) ಸ್ಪಷ್ಟಪಡಿಸಿದೆ. ಇದು ಆಂಡ್ರಾಯ್ಡ್‌ನ ವಿಷಯವಲ್ಲ ಮತ್ತು ಗೂಗಲ್ ಪೇ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಗೂಗಲ್ ಹೇಳಿದೆ.
ನೀವು ಕೂಡ Google Pay ಮೂಲಕ ಹಣ ವರ್ಗಾಯಿಸುತ್ತೀರಾ? ಹಾಗಿದ್ದರೆ ತಪ್ಪದೇ ತಿಳಿಯಿರಿ ಈ ಮಾಹಿತಿ
Apple App ಸ್ಟೋರ್‌ನಲ್ಲಿ Google Pay ಯಾವಾಗ ಮರಳುತ್ತದೆ?
ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ ವಹಿವಾಟಿನ ವೈಫಲ್ಯದ ಸಮಸ್ಯೆಯಿಂದಾಗಿ ಕೆಲವು ಐಒಎಸ್ ಬಳಕೆದಾರರನ್ನು ತೆಗೆದುಹಾಕಲಾಗಿದೆ. ಇದನ್ನು ಸರಿಪಡಿಸಲು ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ. ಸಮಸ್ಯೆಗಳನ್ನು ಸರಿಪಡಿಸಿದ ಕೂಡಲೇ ಅದು ಆಪಲ್ ಪ್ಲೇ ಸ್ಟೋರ್‌ನಲ್ಲಿರುವ ಬಳಕೆದಾರರಿಗೆ ಮತ್ತೆ ಲಭ್ಯವಾಗುತ್ತದೆ ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.