Viral video : ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಚಿತ್ರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಜನರು ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವೀಡಿಯೊಗಳನ್ನು ನೋಡಿಕೊಂಡು ಕಳೆಯುತ್ತಿದ್ದಾರೆ. ಪ್ರತಿದಿನ ಹಲವಾರು ಇಂಟ್ರಸ್ಟಿಂಗ್ ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಮುಖ್ಯವಾಗಿ ಪ್ರಾಣಿಗಳು, ಪಕ್ಷಿಗಳ, ಡಾಲ್ಫಿನ್ ವೀಡಿಯೊಗಳು ಬಹಳ ಜನಪ್ರಿಯವಾಗಿವೆ.
ಸೋಷಿಯಲ್ ಮೀಡಿಯಾದಲ್ಲಿ ಈ ಕೆಲವು ವಿಡಿಯೋಗಳು ನಮ್ಮನ್ನು ನಗಿಸಿದರೆ, ಇನ್ನು ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಅಳುವಂತೆ ಮಾಡುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಅಚ್ಚರಿ ಮೂಡಿಸಿದ್ದು, ಜನರಲ್ಲಿ ಸಂತಸ ಮೂಡಿಸುತ್ತಿದೆ. ಆನೆಗಳು ವಿಶ್ವದ ಅತಿದೊಡ್ಡ ಭೂ ಪ್ರಾಣಿಗಳಾಗಿವೆ. ಸಂಪೂರ್ಣವಾಗಿ ಬೆಳೆದ ಅನ್ನವು ದಿನಕ್ಕೆ 400 ಕೆಜಿ ಆಹಾರ ಮತ್ತು ಸರಾಸರಿ 150 ಲೀಟರ್ ನೀರನ್ನು ಸೇವಿಸುತ್ತದೆ.
Baby elephant having fun.. 😊 pic.twitter.com/NkKU2VKUqB
— Buitengebieden (@buitengebieden) March 22, 2023
ಇದನ್ನೂ ಓದಿ: Viral Video: ಮಗುವಿನ ಮುತ್ತಿಗೆ ಮನ ಸೋತ ಜಿಂಕೆಮರಿ !
ಆನೆಗಳಿಗೆ ವಿಶೇಷ ಬುದ್ಧಿವಂತಿಕೆ ಇದೆ ಎಂದು ಜನರು ಹೇಳುತ್ತಾರೆ. ಇದೀಗ ಮರಿ ಆನೆ ಒಂದು ಫುಟ್ಬಾಲ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಫುಟ್ಬಾಲ್ ಆಡುವಾಗ ಮರಿ ಆನೆ ಜಾರಿ ಬಿದ್ದು ಎದ್ದು ಆಟವಾಡುವ ವಿಧಾನ ಸಖತ್ ಕ್ಯೂಟ್ ಆಗಿದೆ. ಬಿದ್ದ ಸ್ಥಳದಿಂದ ಮೇಲಕ್ಕೆ ಎದ್ದು ಮತ್ತೆ ಚೆಂಡನ್ನು ಉರುಳಿಸುತ್ತಾ ಮರಿಆನೆ ತುಂಟಾಟ ನೆಟ್ಟಿಗರಿಗೆ ಸಖತ್ ಇಷ್ಟವಾಗುತ್ತಿದೆ. Buitengebieden ಎಂಬ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಈಗಾಗಲೇ 963.9k ಜನರು ವೀಕ್ಷಿಸಿದ್ದಾರೆ. 55.9 ಸಾವಿರ ಜನರು ಇಷ್ಟಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.