Viral Video : ಆಮೆಯನ್ನು ತಿಂದು ಮುಗಿಸಿ ಚಿಪ್ಪಿನೊಂದಿಗೆ ಆಟವಾಡುತ್ತಿರುವ ಕೊಮೊಡೊ ಡ್ರ್ಯಾಗನ್

Viral Video : ಆಮೆಯನ್ನು ತಿಂದು ಮುಗಿಸಿದ ಕೊಮೊಡೊ ಡ್ರ್ಯಾಗನ್ , ಆಮೆಯ ಚಿಪ್ಪಿನೊಂದಿಗೆ ಆಟವಾಡುವ ಹಳೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ  ಪೋಸ್ಟ್ ಮಾಡಲಾಗಿದೆ. 

Written by - Ranjitha R K | Last Updated : Oct 19, 2022, 11:15 AM IST
  • ಕೊಮೊಡೊ ಡ್ರ್ಯಾಗನ್‌ಗಳೆಂದರೆ ದೈತ್ಯ ಹಲ್ಲಿಗಳು.
  • ರಾಷ್ಟ್ರೀಯ ಉದ್ಯಾನವನ ಮತ್ತು ನೆರೆಯ ಫ್ಲೋರ್ಸ್‌ಗಳಲ್ಲಿ ಮಾತ್ರ ಕಂಡುಬರುತ್ತವೆ.
  • ಇಲ್ಲಿದೆ ಭಯಾನಕ ಪ್ರಾಣಿಯ ಮುದ್ದಾದ ವಿಡಿಯೋ
Viral Video : ಆಮೆಯನ್ನು ತಿಂದು  ಮುಗಿಸಿ ಚಿಪ್ಪಿನೊಂದಿಗೆ ಆಟವಾಡುತ್ತಿರುವ ಕೊಮೊಡೊ ಡ್ರ್ಯಾಗನ್ title=
viral video

Viral Video : ಕೊಮೊಡೊ ಡ್ರ್ಯಾಗನ್‌ಗಳೆಂದರೆ ದೈತ್ಯ ಹಲ್ಲಿಗಳು. ಇವುಗಳು ಅತ್ಯಂತ ಮೊನಚಾದ ಹಲ್ಲುಗಳನ್ನು ಹೊಂದಿರುತ್ತವೆ. ಈ ದೈತ್ಯ ಹಲ್ಲಿಗಳ ಹಲ್ಲುಗಳು ಶಾರ್ಕ್ ನಂತೆಯೇ ಹರಿತವಾಗಿರುತ್ತವೆ. ಮಾತ್ರವಲ್ಲ ಅವುಗಳು ವಿಷಭರಿತವಾಗಿರುತ್ತವೆ. ಇವುಗಳು ತಮ್ಮ ಹಲ್ಲಿನ ಸಹಾಯದಿನದ ಯಾವುದೇ ಪ್ರಾಣಿಯನ್ನು ಬೇಕಾದರೂ ಸುಲಭವಾಗಿ ತಿಂದು ಮುಗಿಸಬಲ್ಲದು. ಇದೀಗ, ಈ ಕೊಮೊಡೊ ಡ್ರ್ಯಾಗನ್  ವಿಡಿಯೋ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆಮೆಯನ್ನು ತಿಂದು ಮುಗಿಸಿದ ಈ ಡ್ರಾಗನ್ ನಂತರ ಆಮೆಯ ಚಿಪ್ಪಿನೊಂದಿಗೆ ಆಟವಾಡುತ್ತಿರುವ ವಿಡಿಯೋವಿದು. 

ಈ ವೀಡಿಯೋ 2019ರದ್ದು. ಅಂದರೆ ಸುಮಾರು ಮೂರು ವರ್ಷಗಳಷ್ಟು ಹಿಂದಿನದ್ದು. ಆದರೂ ಸಾಮಾಜಿಕ ಮಾಧ್ಯಮದಲ್ಲಿ ಈಗ ಮತ್ತೆ ಸದ್ದು ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ತನ್ನತ್ತ ಆಕರ್ಷಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ.  

ಇದನ್ನೂ ಓದಿ : Viral Video: ಠಾಣೆಗೆ ಬಂದ 3 ವರ್ಷದ ಮಗು! ಚಾಕೊಲೇಟ್‌ ಕೊಡದ ಅಮ್ಮನ ಮೇಲೆ ಮಾರುದ್ದ ದೂರು

ದೈತ್ಯ ಹಲ್ಲಿಯೊಂದು ಆಮೆಯ ಚಿಪ್ಪಿನೊಳಗೆ ತನ್ನ ತಲೆಯನ್ನು ತೂರಿಸಿಕೊಂಡು  ಆಟವಾಡುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದು. ಸಮುದ್ರತೀರದಲ್ಲಿ, ಆಮೆಯೊಂದನ್ನು ತಿಂದು ಮುಗಿಸಿ ನಂತರ ಆ ಆಮೆಯ ಚಿಪ್ಪಿನೊಳಗೆ ತನ್ನ ತಲೆಯನ್ನು ಹಾಕಿಕೊಂಡು ಇಡೀ ಸಮುದ್ರ ತೀರದಲ್ಲಿ ತಿರುಗಾಡುವುದನ್ನು ಕಾಣಬಹುದು. ನಂತರ ತಾನು ಆಮೆಯನ್ನು ತಿಂದು ಮುಗಿಸಿರುವುದು ಖಾತ್ರಿಯಾಗುತ್ತಿದ್ದಂತೆ ಚಿಪ್ಪನ್ನು ತನ್ನ ತಲೆಯಿಂದ ಹೊರಗೆ ಎಸೆದು ಬಿಡುತ್ತದೆ. 

 

ಇದನ್ನೂ ಓದಿ :  Shocking Video: ಸಣ್ಣ ಜಗಳ, ಚಲಿಸುತ್ತಿರುವ ರೈಲಿನಿಂದ ಸಹ ಪ್ರಯಾಣಿಕನನ್ನು ಹೊರಕ್ಕೆ ಎಸೆದ ವ್ಯಕ್ತಿ

ಈ ವೀಡಿಯೊವನ್ನು ಫೆಸಿನೇಟಿಂಗ್ ಹೆಸರಿನ twitter ಖಾತೆಯಲ್ಲಿ ಶೇರ್ ಮಾಡಲಾಗಿದೆ.  ಅನೇಕ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  ಕಳೆದ ವರ್ಷವಷ್ಟೇ 2021 ರಲ್ಲಿ, ಈ ದೈತ್ಯ ಹಲ್ಲಿಗಳನ್ನು "ಅಳಿವಿನಂಚಿನಲ್ಲಿರುವ ಪ್ರಾಣಿಗಳ  ಎಂದು ಪಟ್ಟಿಗೆ ಸೇರಿಸಲಾಗಿತ್ತು. ಕೊಮೊಡೊ ಡ್ರ್ಯಾಗನ್‌ಗಳು ಕೊಮೊಡೋ ರಾಷ್ಟ್ರೀಯ ಉದ್ಯಾನವನ ಮತ್ತು ನೆರೆಯ ಫ್ಲೋರ್ಸ್‌ಗಳಲ್ಲಿ ಮಾತ್ರ ಕಂಡುಬರುತ್ತವೆ.

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News