ಹಾರುವ ಮೂಲಕ ನದಿ ದಾಟಿದ ಬೆಕ್ಕು : ಮಾರ್ಜಾಲದ ಅದ್ಭುತ ವಿಡಿಯೋ

Flying Cat Video : ಈ ಹಿಂದೆ ಬಲು ಎತ್ತರಕ್ಕೆ ಹಾರುವ ನವಿಲಿನ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ ಈಗ ಹಾರಿಕೊಂಡು ನದಿ ದಾಟಿದ ಬೆಕ್ಕಿನ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. 

Written by - Ranjitha R K | Last Updated : Oct 17, 2022, 02:52 PM IST
  • ಹಾರುವ ಬೆಕ್ಕನ್ನು ನೋಡಿದಿರಾ ?
  • ಹಾರಿಕೊಂಡು ನದಿ ದಾಟಿದ ಬೆಕ್ಕು
  • ವೈರಲ್ ಆಯಿತು ಮಾರ್ಜಾಲದ ವಿಡಿಯೋ
ಹಾರುವ ಮೂಲಕ ನದಿ ದಾಟಿದ ಬೆಕ್ಕು : ಮಾರ್ಜಾಲದ ಅದ್ಭುತ ವಿಡಿಯೋ  title=
Flying cat viral video ( photo twitter)

Flying Cat Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇಲ್ಲಿ ಕೆಲವು ವಿಡಿಯೋಗಳನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಕೆಲವೊಂದು ವಿಡಿಯೋಗಳಲ್ಲಿ ಪ್ರಾಣಿಗಳ ಚಟುವಟಿಕೆ ಮನುಷ್ಯನ ನಿರೀಕ್ಷೆಯನ್ನೂ ಮೀರಿರುತ್ತವೆ. ಈ ಹಿಂದೆ ಬಲು ಎತ್ತರಕ್ಕೆ ಹಾರುವ ನವಿಲಿನ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ ಈಗ ಹಾರಿಕೊಂಡು ನದಿ ದಾಟಿದ ಬೆಕ್ಕಿನ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. 'ಇದು ಜಿಗಿತವೋ  ಹಾರಾಟವೋ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಕಾಡು ಬೆಕ್ಕು ನದಿಯ ದಡದಲ್ಲಿ ಕುಳಿತಿರುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು. ಆ ಬೆಕ್ಕಿಗೆ ನದಿ ದಾಟಬೇಕು. ಇದಕ್ಕಾಗಿ ಸ್ವಲ್ಪ ಹೊತ್ತು ಯೋಚನೆ ಮಾಡುತ್ತದೆ. ನಂತರ ಒಂದೇ ಜಿಗಿದು ನದಿಯನ್ನು ದಾಟಿ ಬಿಡುತ್ತದೆ. ಈ ಅದ್ಭುತ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ.  ಕೇವಲ 44 ಸೆಕೆಂಡ್‌ಗಳ ಈ ವಿಡಿಯೋವನ್ನು ವೀಕ್ಷಕರು ಕೂಡಾ ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. 

ಇದನ್ನೂ ಓದಿ : Viral Video: ಬ್ಯಾಂಕ್ ಲೂಟಿ ಮಾಡಲು ಬಂದ ಕಳ್ಳನನ್ನು ಏಕಾಂಗಿಯಾಗಿ ಹೊಡೆದೋಡಿಸಿದ ಮಹಿಳಾ ಮ್ಯಾನೇಜರ್.. ವಿಡಿಯೋ ನೋಡಿ

 

ಇದನ್ನೂ ಓದಿ :Smoking Bird Viral Video: ಬಾಯಿಯಿಂದ ಹೊಗೆ ಬಿಡುವ ಇಂತಹ ಪಕ್ಷಿಯನ್ನು ಎಲ್ಲಾದರೂ ನೋಡಿದ್ದೀರಾ?

ಅರಣ್ಯಾಧಿಕಾರಿ ಡಾ.ಸಾಮ್ರಾಟ್ ಗೌಡ IFS ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಡು ಜಿಗಿತವೋ ಅಥವಾ ಹಾರಾಟವೋ ಎಂಬ ಶೀರ್ಷಿಕೆಯೊಂದಿಗೆ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಇದುವರೆಗೆ 24.1K ವೀಕ್ಷಣೆಗಳನ್ನು ಪಡೆದಿವೆ.  

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News