ವಿಮಾನದಂತೆ ಶರ ವೇಗದಲ್ಲಿ ಹಾರುವ ಮೀನು ! ಸಮುದ್ರ ಮಧ್ಯೆ ಕಂಡ ದೃಶ್ಯ ವಿಸ್ಮಯವಿದು !

Flying Fish Video:ಇದು ವಿಮನವಲ್ಲ, ಮೀನು. ಸಮುದ್ರ ಮಧ್ಯದಲ್ಲಿ ಹಕ್ಕಿಗಿಂತಲೂ ವೇಗವಾಗಿ ಹಾರಿ ಹೋಗುತ್ತಿರುವುದು ಸಮುದ್ರದ ಮೀನು. 

Written by - Ranjitha R K | Last Updated : Sep 5, 2024, 11:36 AM IST
  • ನಮ್ಮ ಪ್ರಕೃತಿಯಲ್ಲಿ ಅನೇಕ ರೀತಿಯ ವೈಚಿತ್ರ್ಯಗಳು ಆಗಾಗ ಸಂಭವಿಸುತ್ತಾ ಇರುತ್ತವೆ
  • ಪ್ರಕೃತಿ ವಿಚಿತ್ರವನ್ನು ಈ ವಿಡಿಯೋ ಇಲ್ಲಿದೆ
  • ಹಾರುವ ವಿಡಿಯೋ ಇಲ್ಲಿದೆ.
ವಿಮಾನದಂತೆ ಶರ ವೇಗದಲ್ಲಿ ಹಾರುವ ಮೀನು ! ಸಮುದ್ರ ಮಧ್ಯೆ ಕಂಡ ದೃಶ್ಯ ವಿಸ್ಮಯವಿದು !  title=

Flying Fish : ನಮ್ಮ ಪ್ರಕೃತಿಯಲ್ಲಿ ಅನೇಕ ರೀತಿಯ ವೈಚಿತ್ರ್ಯಗಳು ಆಗಾಗ ಸಂಭವಿಸುತ್ತಾ ಇರುತ್ತವೆ. ಹೀಗೂ ನಡೆಯುವುದು ಸಾಧ್ಯನಾ ಎನ್ನುವ ಯಕ್ಷ ಪ್ರಶ್ನೆಯನ್ನು ಈ ಘಟನೆಗಳು ನಮ್ಮ ಮುಂದೆ ಇಡುತ್ತವೆ.ಅಂಥದ್ದೇ ಒಂದು ಪ್ರಕೃತಿ ವಿಚಿತ್ರವನ್ನು ಈ ವಿಡಿಯೋ ಮೂಲಕ ನೋಡಬಹುದು. 

ಮೀನು ಜಲಚರ ಜೀವಿ. ನೀರೇ ಮೀನಿನ ಬದುಕು ಎನ್ನುವುದು ನಾವು ಸಣ್ಣ ತರಗತಿಯಿಂದಲೂ ಕಲಿತುಕೊಂಡು ಬಂದಿದ್ದೇವೆ. ನೋಡಿಕೊಂಡು ಬಂದಿದ್ದೇವೆ. ಇದೇ ಸತ್ಯ ಕೂಡಾ. ಒಂದು ವೇಳೆ ನೀರಿನಿಂದ ಮೀನನ್ನು ಹಿರ ತೆಗೆದರೆ ವಿಲವಿಲನೆ ಒದ್ದಾಡಿ ಪ್ರಾಣ ಬಿಡುತ್ತದೆ. ಎಲ್ಲಾ ಪ್ರಾಣಿಗಳಿಗೂ ಬದುಕಬೇಕಾದರೆ ಆಮ್ಲಜನಕ ಬೇಕು. ಹಾಗೆಯೇ ಮೀನು ಕೂಡಾ. ಮೀನುಗಳು ಕಿವಿರುಗಳು ಮೀನಿನ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತದೆ. ಮೀನು ಮನುಷ್ಯರ ಹಗೆ ಮೂಗಿನಿಂದ ಉಸಿರಾದುವುದಲ್ಲ, ಮೀನು ಬಾಯಿ ತೆರೆದು ನೀರನ್ನು ಹೀರಿಕೊಂಡು, ನೀರಿನಲ್ಲಿ ಬೆರೆತುಕೊಂಡಿರುವ  ಆಮ್ಲಜನಕವನ್ನು ಕಿವಿರುಗಳ ಮೂಲಕ ಉಸಿರಾಡುತ್ತದೆ.ಈ ಕಾರಣದಿಂದ ಮೀನನ್ನು ನೀರಿನಿಂದ ಹೊರ ತೆಗೆದ ಕೂಡಲೇ ಅದು ಉಸಿರುಗಟ್ಟಿ ಒದ್ದಾಡುತ್ತವೆ. 

ಇದನ್ನೂ ಓದಿ : ನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆ

ಆದರೆ, ಇಲ್ಲೊಂದು ವಿಡಿಯೋ ಇದೆ.ಈ ವಿಡಿಯೋ ನೋಡುವಾಗ ನಮ್ಮ ಕಣ್ಣುಗಳನ್ನು ನಂಬುವುದು ನಮಗೆ ಸಾಧ್ಯವಾಗದೇ ಹೋಗಬಹುದು. ಯಾಕೆಂದರೆ ಈ ವಿಡಿಯೋದಲ್ಲಿ ಸಮುದ್ರ ಮಧ್ಯದಲ್ಲಿ ಮೀನೊಂದು ಹಾರುವುದನ್ನು ಕಾಣಬಹುದು.ಹಾರುವುದು ಎಂದರೆ ಸುಮ್ಮನೆ ಇಲ್ಲಿಂದ ಅಲ್ಲಿಗೆ ಅಲ್ಲ. ಬಹಳ ದೂರದವರೆಗೆ ಹಾರುವ ಈ ಮೀನು, ಹಕ್ಕಿಯ ವೇಗಕೂ ಸೆಡ್ಡು ಹೊಡೆಯುತ್ತದೆ. ಒಮ್ಮೆಲೇ ನೋಡುವಾಗ ವಿಮಾನ ಹಾರುತ್ತಿದೆ ಎನ್ನುವಂತೆ ಭಾಸವಾಗುತ್ತದೆ. 

 

ಇದನ್ನೂ ಓದಿ :ಏನ್‌ ವಿಚಿತ್ರ ಗುರು ಇದು.. ತನ್ನನ್ನೇ ತಾನು ನುಂಗುತ್ತಿದೆ ಈ ಬೃಹತ್‌ ಸರ್ಪ..! ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ!!

ಈ ಹಾರುವ ಮೀನಿನ ವಿಡಿಯೋವನ್ನು @buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ, ಇಷ್ಟಪಟ್ಟಿದ್ದಾರೆ.ಮಾತ್ರವಲ್ಲ ರಿಪೋಸ್ಟ್ ಕೂಡಾ ಮಾಡಿದ್ದಾರೆ. ಪ್ರಕೃತಿಯ ವೈಚಿತ್ರ್ಯಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News