Viral Video : ಪ್ರಿಯತಮೆಯನ್ನು ಕದ್ದು ಮುಚ್ಚಿ ಭೇಟಿಯಾಗಲು ಹೋಗಿ ಹುಡುಗಿಯ ತಾಯಿಯ ಕೈಗೆ ಸಿಕ್ಕಿ ಬಿದ್ದಾಗ ..?

Viral Video : ತನ್ನ ಪ್ರಿಯತಮೆಯನ್ನು ಕದ್ದು ಮುಚ್ಚಿ ಭೇಟಿಯಾಗಲು ಬಂದ ಹುಡುಗ ಹುಡುಗಿಯ ತಾಯಿಯ ಕೈಗೆ ಸಿಕ್ಕಿ ಬಿದ್ದಾಗ ನಡೆದ ಘಟನೆಯನ್ನು ಸೆರೆ ಹಿಡಿಯಲಾಗಿದೆ. 

Written by - Ranjitha R K | Last Updated : Feb 17, 2023, 05:12 PM IST
  • ಇಂಟರ್ನೆಟ್ ಜಗತ್ತಿನ ವ್ಯಾಪ್ತಿ ಬಹಳ ದೊಡ್ಡದು.
  • ಸಾಮಾಜಿಕ ಮಾಧ್ಯಮದಲ್ಲಿ ಪ್ರತಿನಿತ್ಯ ಸಾವಿರಾರು ರೀತಿಯ ವೀಡಿಯೊ ಕಾಣಿಸುತ್ತದೆ
  • ಕೆಲವು ವೀಡಿಯೋಗಳು ಅಪ್ಲೋಡ್ ಮಾಡುತ್ತಿದ್ದಂತೆಯೇ ವೈರಲ್ ಆಗಿ ಬಿಡುತ್ತವೆ.
Viral Video : ಪ್ರಿಯತಮೆಯನ್ನು ಕದ್ದು ಮುಚ್ಚಿ ಭೇಟಿಯಾಗಲು ಹೋಗಿ ಹುಡುಗಿಯ ತಾಯಿಯ ಕೈಗೆ ಸಿಕ್ಕಿ ಬಿದ್ದಾಗ ..? title=

Viral Video : ಇಂಟರ್ನೆಟ್ ಜಗತ್ತಿನ ವ್ಯಾಪ್ತಿ ಬಹಳ ದೊಡ್ಡದು. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿನಿತ್ಯ ಸಾವಿರಾರು  ರೀತಿಯ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವು ವೀಡಿಯೋಗಳು ಅಪ್ಲೋಡ್ ಮಾಡುತ್ತಿದ್ದಂತೆಯೇ ವೈರಲ್ ಆಗಿ ಬಿಡುತ್ತವೆ.   ಇಂಥಹ ವಿಡಿಯೋಗಳನ್ನು ಪದೇ ಪದೇ ನೋಡುವವರು ಇದ್ದಾರೆ. ಯಾಕೆಂದರೆ ಬಹುತೇಕ ಇಂಥಹ ವಿಡಿಯೋಗಳು ಜನರನ್ನು ನಕ್ಕು ನಕ್ಕು ಸುಸ್ತಾಗಿಸುತ್ತವೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಪ್ರೇಮಿಗಳಿಬ್ಬರಿಗೆ ಸಂಬಂಧಪಟ್ಟ ವಿಡಿಯೋ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಇದರಲ್ಲಿ,  ತನ್ನ ಪ್ರಿಯತಮೆಯನ್ನು ಕದ್ದು ಮುಚ್ಚಿ ಭೇಟಿಯಾಗಲು ಬಂದ ಹುಡುಗ ಹುಡುಗಿಯ ತಾಯಿಯ ಕೈಗೆ ಸಿಕ್ಕಿ ಬಿದ್ದಾಗ ನಡೆದ ಘಟನೆಯನ್ನು ಸೆರೆ ಹಿಡಿಯಲಾಗಿದೆ. 

ಸಿಕ್ಕಿಬಿದ್ದ  ಪ್ರೇಮಿಗೆ ಮಂಗಳಾರತಿ : 
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ  ಪ್ರೇಮಿಗಳ ದಿನದಂದು ನಡೆದಿರುವ ಘಟನೆ ಎಂದು ಹೇಳಲಾಗುತ್ತದೆ. ಪ್ರೇಮಿಗಳ ದಿನದ ಸಲುವಾಗಿ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಪ್ರೇಮಿ ಬಂದಿದ್ದಾನೆ. ಪಾಪ, ಕದ್ದು ಮುಚ್ಚಿ ಬಂದಿರುವ ಕಾರಣ ಯಾರಿಗೂ ತಿಳಿಯದಂತೆ ಟೆರೆಸ್ ಮೇಲೆ ಭೇಟಿಯಾಗಲು ನಿರ್ಧರಿಸಿದ್ದಾರೆ. ಪ್ಲಾನ್ ಹಾಕಿದಂತೆ ಪ್ರೇಮಿ ಟೆರೆಸ್ ತಲುಪಿದ್ದಾನೆ. ಆದರೆ ಹಿಂದಿನಿಂದ ಹುಡುಗಿಯ ತಾಯಿ ಕೂಡಾ ಬಂದು ಬಿಟ್ಟಿದ್ದಾರೆ. ಹುಡುಗಿಯ ತಾಯಿ ಬಂದಿರುವ  ವಿಷಯ ತಿಳಿಯುತ್ತಿದ್ದಂತೆಯೇ ಹುಡುಗ ಅವಿತು ಕೊಳ್ಳಲು ಪ್ರಯತ್ನಿಸು ತ್ತಾನೆ. ಆದರೆ ತಾಯಿ ಬಿಡಬೇಕಲ್ಲ. ಅವಿತವನನ್ನು ಹೊರಗೆಳೆದು ತಂದು ಚಪ್ಪಲಿ ಸೇವೆ ಮಾಡಿ ಬಿಡುತ್ತಾರೆ. 

ಇದನ್ನೂ ಓದಿ : Cat Rat figt Video : ಆಹಾರ ಸಿಕ್ಕಿತೆಂದು ಖುಷಿ ಪಟ್ಟುಕೊಂಡರೆ, ಈ ಬೆಕ್ಕಿಗೆ ನಿರೀಕ್ಷೆಗೂ ಮೀರಿದ ಕಪಾಳ ಮೋಕ್ಷ

ಹುಡುಗಿಯ ತಾಯಿಯ ಕೈಗೆ ಹುಡುಗ ಸಿಕ್ಕಿದ್ದೇ ತಡ ಹಿಂದೂ ಮುಂದೂ ನೋಡದೆ ಬಾರಿಸಿ ಬಿಡುತ್ತಾರೆ. ಹುಡುಗ ಓಡಿ ಹೋಗಲು ಪ್ರಯತ್ನಿಸುತ್ತಾನಾದರೂ ಮಹಿಳೆ ಅದಕ್ಕೆ ಅವಕಾಶ ನೀಡುವುದಿಲ್ಲ. ಕೊನೆಗೆ ಮಹಿಳೆಯೇ ಆತನನ್ನು ಹೊರಗೆ ದಬ್ಬಿ ಬಿಡುತ್ತಾರೆ. 

ಬರೀ ಹುಡುಗನಿಗೆ ಬಾರಿಸಿದರೆ ಹೇಗೆ? ಆತನ ಮನೆಯ ಟೆರೆಸ್ ಗೆ ಬರಲು ಕಾರಣವಾದ ಮಗಳಿಗೆ ಬುದ್ದಿ ಹೇಳುವುದು ಬೇಡವೇ? ಯಾವ ಚಪ್ಪಲಿಯಿಂದ ಹುಡುಗನಿಗೆ ಬಾರಿಸಿದ್ದರೋ ಅದೇ ಚಪ್ಪಲಿಯಿಂದ ಮಗಳನ್ನು ಕೂಡಾ ಜಾಡಿಸಿಬಿಡುತ್ತಾರೆ  ಮಹಿಳೆ. 

ಇಲ್ಲಿದೆ ವಿಡಿಯೋ : 

 

ಇದನ್ನೂ ಓದಿ : Funny Video : ಸಿಂಹದ ಮೇಲೆ ಕೋತಿಯ ಸವಾರಿ, ಮಂಗನ ಕಿತಾಪತಿಗೆ ಎದ್ದುಬಿದ್ದು ನಗ್ತೀರಾ!

 ಈ ವಿಡಿಯೋವನ್ನು  @gharkekalesh ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೆಲವೇ ಸೆಕೆಂಡುಗಳ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News