ಮರಿ ಆನೆಗಳ ಮುದ್ದು ಮುನಿಸು! ಬಾಲ್ಯ ನೆನಪಿಸುತ್ತದೆ ಈ ವಿಡಿಯೋ

Elephant Viral Video :ಸಾಮಾಜಿಕ ಜಾಲ ತಾಣಗಳಲ್ಲಿ ಕಾಣ ಸಿಗುವ ಈ ವಿಡಿಯೋಗಳು ಜೀವನದಲ್ಲಿ ಮನಸು ಹಗುರಾಗಿಸಲು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದಂತೂ ಸುಳಲ್ಲ.   

Written by - Ranjitha R K | Last Updated : Aug 18, 2023, 02:12 PM IST
  • ಆನೆ ಮರಿಗಳ ಮುದ್ದು ವಿಡಿಯೋ
  • ಇಬ್ಬರಿಗೂ ಅದೇನೋ ಮುನಿಸು
  • ಇಲ್ಲಿದೆ ವೈರಲ್ ವಿಡಿಯೋ
ಮರಿ ಆನೆಗಳ ಮುದ್ದು ಮುನಿಸು!  ಬಾಲ್ಯ ನೆನಪಿಸುತ್ತದೆ ಈ ವಿಡಿಯೋ  title=

Elephant Viral Video : ಸಾಮಾಜಿಕ ಜಾಲತಾಣಗಳಲ್ಲಿನ ವಿವಿಧ ಸುದ್ದಿಗಳು ಜ್ಞಾನದ ಮೂಲವಾಗಿದೆ. ಇಲ್ಲಿ ಕಾಣ ಸಿಗುವ ಕೆಲವು ವಿಡಿಯೋಗಳು ಮನಸ್ಸಿನಲ್ಲಿರುವ ನೋವು, ಬೇಸರವನ್ನು ಹೋಗಲಾಡಿಸುವ ವೈದ್ಯರಂತೆ ಕಾರ್ಯನಿರ್ವಹಿಸುತ್ತವೆ. ಸಾಮಾಜಿಕ ಜಾಲ ತಾಣಗಳಲ್ಲಿ ಕಾಣ ಸಿಗುವ ಈ ವಿಡಿಯೋಗಳು ಜೀವನದಲ್ಲಿ ಮನಸು ಹಗುರಾಗಿಸಲು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದಂತೂ ಸುಳಲ್ಲ. 

ಸಂಪರ್ಕ, ಆತಂಕ, ನಿಂದೆ ಮತ್ತು ನಿರಾಶೆಯ ಇನ್ನೊಂದು ಬದಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಸೃಜನಶೀಲ ಮುಖಗಳು ಮತ್ತು ವೀಡಿಯೊಗಳು ಹೃದಯಸ್ಪರ್ಶಿಯಾಗಿವೆ. ಇಂಟರ್‌ನೆಟ್‌ನಲ್ಲಿರುವ ಕೆಲವು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ಅವುಗಳಲ್ಲಿ ಕೆಲವು ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತವೆ.

ಇದನ್ನೂ ಓದಿ :  ಗೆಳೆಯನನ್ನು ರಕ್ಷಿಸಲು ದೈತ್ಯ ಹೆಬ್ಬಾವಿನ ಜೊತೆ ನರಿ ಹೋರಾಟ..! ರೋಚಕ ವಿಡಿಯೋ ನೋಡಿ..

ಆನೆಗಳು ಹಾಗೂ ಅವುಗಳ ಜೀವನ ಶೈಲಿಯನ್ನು ನೋಡಿದರೆ ನಾವು ಬೆರಗಾಗದೇ ಇರಲಾರೆವು. ಸುಂದರವಾದ ನೈಸರ್ಗಿಕ ಪರಿಸರದಲ್ಲಿ ಬೆಳೆಯುವ ಆನೆಗಳು ಚೇಷ್ಟೆ ಮಾಡುವುದರಲ್ಲಿಯೂ ಹಿಂದೆ ಉಳಿದಿಲ್ಲ.  ಇದಕ್ಕೆ ಉದಾಹರಣೆ ಈ ವಿಡಿಯೋ. 

ಇಲ್ಲಿ ಎರಡು ಆನೆ ಮರಿಗಳನ್ನು ಕಾಣಬಹುದು. ಇವುಗಳಿಗೆ ಅದೇನು ಮುನಿಸೋ ಅವುಗಳಿಗೆಯೇ ಗೊತ್ತು. ಒಂದರ ಮುಖ ಇನ್ನೊಂದು ನೋಡುತ್ತಿಲ್ಲ. ಆದರೆ ತೀಟೆ ಮಾಡುವುದನ್ನು ಬಿಡುತ್ತಿಲ್ಲ. ಹಿಂಬದಿ ಕಾಲಿನಿಂದ ಒಂದಕ್ಕೊಂದು ಒದ್ದುಕೊಂಡು ಪರಸ್ಪರ ಕೋಪ ತೀರಿಸಿಕೊಳ್ಳುತ್ತಿವೆ. 

ಇದನ್ನೂ ಓದಿ :   ಮುದ್ದಾದ ಅವಳಿ ಮರಿಗಳೊಂದಿಗೆ ತಾಯಿ ಆನೆ ! ಅಪರೂಪದ ದೃಶ್ಯವಿದು

ಈ ವಿಡಿಯೋವನ್ನು ನೋಡುವಾಗ ನಮ್ಮ ಬಾಲ್ಯದಲ್ಲಿ ಸಹೋದರ ಸಹೋದರಿಯರ ಜೊತೆ ನಮ್ಮ ಮುನಿಸು, ನಾವಾಡುತ್ತಿದ್ದ ಜಗಳ ಎಲ್ಲವೂ ನೆನಪಿಗೆ ಬಾರದೇ ಇರದು. 

 

ಈ ವಿಡಿಯೋವನ್ನು Yoda4ever ಎನ್ನುವ ತ್ವೀತೆರ್ ಕಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲ ಕಾಮೆಂಟ್ ಕೂಡಾ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News