ಪಾಕಿಸ್ತಾನದಲ್ಲೂ ಲಾಕ್‌ಡೌನ್: ಕರೋನಾ ವೈರಸ್‌ನಿಂದ ಇದುವರೆಗೆ 7ಜನರ ಸಾವು

ಭಾನುವಾರ ಮಧ್ಯರಾತ್ರಿಯಿಂದ ಪ್ರಾಂತ್ಯವನ್ನು ಲಾಕ್‌ಡೌನ್ ಮಾಡಲಾಗುವುದು ಎಂದು ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಘೋಷಿಸಿದ್ದಾರೆ.  

Yashaswini V Yashaswini V | Updated: Mar 25, 2020 , 02:25 PM IST
ಪಾಕಿಸ್ತಾನದಲ್ಲೂ ಲಾಕ್‌ಡೌನ್: ಕರೋನಾ ವೈರಸ್‌ನಿಂದ ಇದುವರೆಗೆ 7ಜನರ ಸಾವು

ಇಸ್ಲಾಮಾಬಾದ್: ಕೊರೊನಾವೈರಸ್ COVID-19 ಕಾಯಿಲೆಯಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ದೇಶದಲ್ಲಿ 1000 ಕ್ಕೆ ಏರಿದ ನಂತರ ಪಾಕಿಸ್ತಾನ ದೇಶೀಯ ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿತು. ಈ ಕಾಯಿಲೆಯಿಂದ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಪಾಕಿಸ್ತಾನದಲ್ಲಿ ಕರೋನಾ ವೈರಸ್‌ನಿಂದಾಗಿ ಇನ್ನೊಬ್ಬ ವ್ಯಕ್ತಿಯ ಸಾವಿನ ನಂತರ, ಈ ಮಾರಕ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ. ಏತನ್ಮಧ್ಯೆ, ಸಿಂಧ್ ಸರ್ಕಾರವು ಭಾನುವಾರ ಮಧ್ಯರಾತ್ರಿಯಿಂದ ಪ್ರಾಂತ್ಯದಲ್ಲಿ ಲಾಕ್‌ಡೌನ್(LOCKDOWN) ಘೋಷಿಸಿದೆ.

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ, ಕರೋನಾ ವೈರಸ್‌ಗೆ ತುತ್ತಾಗಿ ಮಹಿಳೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಈ ಕರೋನವೈರಸ್ (Coronavirus) ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಅವರಲ್ಲಿ ಮೂವರು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಮೃತಪಟ್ಟರು.

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಸಲಹೆಗಾರ ಅಜ್ಮಲ್ ವಜೀರ್ ಭಾನುವಾರ, ಈ ಪ್ರಾಂತ್ಯದಲ್ಲಿ ಕರೋನಾ ವೈರಸ್‌ನಿಂದ ಮೃತಪಟ್ಟ ಮಹಿಳೆ ಇರಾನ್ ಗಡಿಯ ತಪ್ತಾನದಿಂದ ಬಂದಿದ್ದಾಳೆ ಎಂದು ಹೇಳಿದರು. ಅವರು ಡೇರಾ ಗಾಜಿ ಖಾನ್‌ನಲ್ಲಿ ನಿಧನರಾದರು. ಆಕೆಯ ತನಿಖಾ ವರದಿಯು ನಂತರ ಬಂದಿದ್ದು, ಅವಳು ಕರೋನಾ ವೈರಸ್‌ನಿಂದ ಬಳಲುತ್ತಿದ್ದಾಳೆಂದು ತೋರಿಸಿದೆ.

Corona Crisisi: ಪಾಕ್ ಪ್ರಧಾನಿ ಮುಂದಿದೆ ಎರಡು ದೊಡ್ಡ ಸವಾಲುಗಳು

ಏತನ್ಮಧ್ಯೆ, ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು  ಭಾನುವಾರ ಮಧ್ಯರಾತ್ರಿಯಿಂದ ಪ್ರಾಂತ್ಯವನ್ನು ಲಾಕ್ ಡೌನ್ ಮಾಡುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದಲ್ಲಿ ಕರೋನಾ ವೈರಸ್‌ನಿಂದ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ.

'ಡಾನ್' ವರದಿಯಲ್ಲಿ, ಉಲೆಮಾ, ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಸಮಾಲೋಚಿಸಿದ್ದೇನೆ ಎಂದು ಷಾ ಹೇಳಿದ್ದಾರೆ ಎಂದು ಹೇಳಲಾಗಿದೆ. ಇದರ ನಂತರ, ಅವರು ಮಧ್ಯರಾತ್ರಿಯಿಂದ ಪ್ರಾಂತ್ಯದಲ್ಲಿ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದಾರೆ.

ಲಾಕ್‌ಡೌನ್ ಹೊರತಾಗಿಯೂ ಎಲ್ಲಾ ಕಛೇರಿಗಳು ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದೆ. ಅಲ್ಲದೆ ಪ್ರದೇಶದಲ್ಲಿ ಜನರು ಗುಂಪು ಗುಂಪಾಗಿರುವುದನ್ನು ನಿಷೇಧಿಸಲಾಗಿದೆ. ಅನಿವಾರ್ಯ ಪರಿಸ್ಥಿತಿಗಳನ್ನೂ ಹೊರತು ಪಡಿಸಿ ಯಾರೂ ಕೂಡ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.  

Coronavirus: 'ವುಹಾನ್' ಹಾದಿಯಲ್ಲಿದೆಯೇ ಪಾಕಿಸ್ತಾನ?

ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ಹೋಗಲು ಅವಕಾಶ ನೀಡಲಾಗುವುದು. ಅದಾಗ್ಯೂ, ಚಾಲಕ ಮತ್ತು ಒಬ್ಬ ವ್ಯಕ್ತಿ ಮಾತ್ರ ಕಾರಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಆಸ್ಪತ್ರೆಗೆ ಹೋದರೆ, ಕಾರಿನಲ್ಲಿ ಕೇವಲ ಮೂವರನ್ನು ಮಾತ್ರ ಅನುಮತಿಸಲಾಗುತ್ತದೆ. ಆಹಾರ ಮತ್ತು ಪಾನೀಯದಂತಹ ಅಗತ್ಯ ವಸ್ತುಗಳ ಪೂರೈಕೆ ಮುಂದುವರಿಯುತ್ತದೆ.

ದೇಶೀಯ ವಿಮಾನ ನಿಷೇಧ ಗುರುವಾರದಿಂದ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ವಕ್ತಾರ ಅಬ್ದುಲ್ ಸತ್ತಾರ್ ಖೋಖರ್ ಬುಧವಾರ ತಿಳಿಸಿದ್ದಾರೆ. ಇಸ್ಲಾಮಾಬಾದ್ ಈ ಹಿಂದೆ ರೈಲು ಸೇವೆ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಕಡಿತಗೊಳಿಸಿತ್ತು.

ಆರಂಭದಲ್ಲಿ, ಸೋಂಕಿತರಲ್ಲಿ ಹೆಚ್ಚಿನವರು ಪಾಕಿಸ್ತಾನದ ಯಾತ್ರಾರ್ಥಿಗಳು ನೆರೆಯ ಕಠಿಣ ಪೀಡಿತ ಇರಾನ್‌(Iran)ನಿಂದ ಹಿಂತಿರುಗುತ್ತಿದ್ದರು. ಈಗ, ಪ್ರಯಾಣದ ಇತಿಹಾಸವಿಲ್ಲದ ಜನರಲ್ಲಿ ಈ ವೈರಸ್ ವರದಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸೋಂಕಿತರಲ್ಲಿ 400 ಕ್ಕೂ ಹೆಚ್ಚು ಜನರು ದಕ್ಷಿಣ ಪ್ರಾಂತ್ಯದ ಸಿಂಧ್‌ನಲ್ಲಿದ್ದಾರೆ. ಪೂರ್ವ ಪ್ರಾಂತ್ಯದ ಪಂಜಾಬ್‌ನಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣಗಳಿವೆ (296), ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುನ್ಖ್ವಾ 78 ಪ್ರಕರಣಗಳು, ಬಲೂಚಿಸ್ತಾನದಲ್ಲಿ 110, ರಾಜಧಾನಿ ಇಸ್ಲಾಮಾಬಾದ್‌ನಲ್ಲಿ 15 ಪ್ರಕರಣಗಳಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವೈರಸ್ ಹರಡುವುದನ್ನು ನಿಯಂತ್ರಿಸಲು ಸಿಂಧ್ ಪ್ರಾಂತೀಯ ಸರ್ಕಾರವು ಲಾಕ್‌ಡೌನ್ ವಿಧಿಸಿದೆ, ಆದರೆ ಪಾಕಿಸ್ತಾನ(Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ದೇಶಾದ್ಯಂತದ ಲಾಕ್‌ಡೌನ್ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.