ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ! ಈ ತಿಂಗಳಿನಿಂದಲೇ ವೇತನ ಹೆಚ್ಚಳ

ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಸರ್ಕಾರ ಪರಿಷ್ಕರಿಸಿದೆ. ಹೊಸ ದರಗಳು 1 ಜುಲೈ 2023 ರಿಂದ ಅನ್ವಯವಗಾಲಿದೆ. 

Written by - Ranjitha R K | Last Updated : Jul 13, 2023, 03:38 PM IST
  • ಸರ್ಕಾರಿ ನೌಕರರ ಡಿಎ ಹೆಚ್ಚಳ
  • ಹೊಸ ದರಗಳು 1 ಜುಲೈ 2023 ರಿಂದ ಅನ್ವಯ
  • DA ಯ ಪರಿಷ್ಕೃತ ದರಗಳು
ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ! ಈ ತಿಂಗಳಿನಿಂದಲೇ ವೇತನ ಹೆಚ್ಚಳ title=

Dearness Allowance Hike : ನೀವು ಕೇಂದ್ರ  ಸರ್ಕಾರಿ ನೌಕಾರರಾಗಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಕೇಂದ್ರ ಸರ್ಕಾರಿ ನೌಕರರಿದ್ದರೆ, ಈ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ಉದ್ಯಮಗಳ ಇಲಾಖೆ (DPE), 1992 ರ ವೇತನ ಶ್ರೇಣಿಗಳ IDA ಮಾದರಿಯನ್ನು ಅನುಸರಿಸಿ ಬೋರ್ಡ್ ಮಟ್ಟದ ಅಥವಾ ಅದಕ್ಕಿಂತ ಕೆಳಗಿನ ಹುದ್ದೆಗಳನ್ನು ಹೊಂದಿರುವ ಮತ್ತು ಸಂಘಟಿತವಲ್ಲದ ಮೇಲ್ವಿಚಾರಕರನ್ನು ಹೊಂದಿರುವ CPSE ಅಧಿಕಾರಿಗಳ DA ಅನ್ನು ಪರಿಷ್ಕರಿಸಿದೆ. ಕಚೇರಿಯ ಜ್ಞಾಪಕ ಪತ್ರದಲ್ಲಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ಅಂತಹ ಉದ್ಯೋಗಿಗಳ ಡಿಎಯಲ್ಲಿ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದೆ.

ಹೊಸ ದರಗಳು 1 ಜುಲೈ 2023 ರಿಂದ ಅನ್ವಯ :
DA ಯ ಪರಿಷ್ಕೃತ ದರಗಳು ಜುಲೈ 1, 2023 ರಿಂದ ಅನ್ವಯವಾಗುತ್ತವೆ. ತಿಂಗಳಿಗೆ  3,500 ರೂ ವರೆಗಿನ ಮೂಲ ವೇತನಕ್ಕಾಗಿ, ಜುಲೈ 1, 2023 ರಿಂದ ಜಾರಿಗೆ ಬರುವಂತೆ ವೇತನದ ಶೇಕಡಾ 701.9 ರಷ್ಟು ಡಿಎ ಆಗಿರುತ್ತದೆ. ಅಂದರೆ ಇದು ಕನಿಷ್ಠ 15,428 ರೂಪಾಯಿ ಆಗಿರಲಿದೆ. ತಿಂಗಳಿಗೆ  3,501 ರಿಂದ  6,500 ರೂಪಾಯಿ  ರ ನಡುವಿನ ಮೂಲ ವೇತನ ಹೊಂದಿರುವ ಉದ್ಯೋಗಿಗಳಿಗೆ ಜುಲೈ 1, 2023 ರಿಂದ ಕನಿಷ್ಠ 24,567 ರೂಪಾಯಿ ಅಥವಾ ವೇತನದ  526.4 ಶೇಕಡಾ ಪಡೆಯುತ್ತಾರೆ. 6,500 ರಿಂದ 9,500 ರವರೆಗೆ ಮೂಲ ವೇತನ ಹೊಂದಿರುವ ನೌಕರರು ಕನಿಷ್ಠ 34,216 ರೂ. ಮತ್ತು 421.1 ಶೇಕಡಾ ಡಿಎ   ಪಡೆಯುತ್ತಾರೆ. 

ಇದನ್ನೂ ಓದಿ : ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲು ಟಿಕೆಟ್ ಬಗ್ಗೆ ಜಾರಿಯಾಗಿದೆ ಹೊಸ ನಿಯಮ!

ಪ್ರತಿ ಮೂರು ತಿಂಗಳಿಗೊಮ್ಮೆ ಡಿಎ ಪರಿಷ್ಕರಣೆ : 
ತ್ರೈಮಾಸಿಕ ಸೂಚ್ಯಂಕ ಸರಾಸರಿ 1099 (1960 = 100) ಗಿಂತ ಹೆಚ್ಚಿನ ಬೆಲೆ ಹೆಚ್ಚಳದ ಆಧಾರದ ಮೇಲೆ ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್‌ನಿಂದ ಡಿಎ ಕಂತುಗಳನ್ನು ಪಾವತಿಸಲಾಗುವುದು ಎಂದು ಡಿಎ ಇಲಾಖೆ ಹೇಳಿದೆ. 

DA ಯ ಪರಿಷ್ಕೃತ ದರಗಳು : 
ಕಛೇರಿ ಜ್ಞಾಪಕ ಪತ್ರದಲ್ಲಿ DPE ದಿನಾಂಕ 25.06.1999 ರ ಅನುಬಂಧ-III ರಲ್ಲಿ ಹೊಸ DA ಯೋಜನೆಯನ್ನು ಉಲ್ಲೇಖಿಸಲಾಗಿದೆ. ಇದು ಮಂಡಳಿಯ ಮಟ್ಟ ಮತ್ತು CPSE ಗಳ ಮಂಡಳಿ ಮಟ್ಟದ ಅಧಿಕಾರಿಗಳು ಮತ್ತು ಸಂಘಟಿತವಲ್ಲದ ಮೇಲ್ವಿಚಾರಕರಿಗೆ ಪಾವತಿಸಬೇಕಾದ DA ದರಗಳ ಮಾಹಿತಿ ನೀಡುತ್ತದೆ. CPSE ಅಧಿಕಾರಿಗಳು ಮತ್ತು ಸಂಘಟಿತವಲ್ಲದ ಮೇಲ್ವಿಚಾರಕರಿಗೆ, 1 ಜುಲೈ 2023 ರಿಂದ ಪಾವತಿಸಬೇಕಾದ DA ದರವು ಶೇಕಡಾ 416 ಆಗಿದೆ.

ಇದನ್ನೂ ಓದಿ : ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲು ಟಿಕೆಟ್ ಬಗ್ಗೆ ಜಾರಿಯಾಗಿದೆ ಹೊಸ ನಿಯಮ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News