EPFO Update: ಕೇವಲ ಒಂದೇ ಗಂಟೆಯಲ್ಲಿ ನೀವು ನಿಮ್ಮ PF ಖಾತೆಯಿಂದ ಹಣ ಪಡೆಯಬಹುದು? ಹೇಗೆ ಅಂತೀರಾ..

EPFO Latest News - ಇನ್ಮುಂದೆ ನೀವು ಕೂಡ ನಿಮ್ಮ ಭವಿಷ್ಯ ನಿಧಿ ಖಾತೆಯಿಂದ (EPF) 1 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಹಿಂಪಡೆಯಬಹುದು. ಯಾವುದೇ ರೀತಿಯ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೀವು ಈ ಹಣವನ್ನು ಹಿಂಪಡೆಯಬಹುದು.

Written by - Nitin Tabib | Last Updated : Jan 7, 2022, 10:13 PM IST
  • ಇನ್ಮುಂದೆ ಕೇವಲ ಒಂದೇ ಗಂಟೆಯಲ್ಲಿ ಪಿಎಫ್ ಖಾತೆಯಿಂದ ಹಣ ಪಡೆಯಿರಿ.
  • ಹೇಗೆ ಅಂತೀರಾ? ತಿಳಿದುಕೊಳ್ಳಲು ವರದಿ ಓದಿ.
EPFO Update: ಕೇವಲ ಒಂದೇ ಗಂಟೆಯಲ್ಲಿ ನೀವು ನಿಮ್ಮ PF ಖಾತೆಯಿಂದ ಹಣ ಪಡೆಯಬಹುದು? ಹೇಗೆ ಅಂತೀರಾ.. title=
PF Advance Claim (File Photo)

ನವದೆಹಲಿ: PF Advance Claim - ಜೀವನದಲ್ಲಿ ಹಠಾತ್ ಹಣದ ಅವಶ್ಯಕತೆ ಬಂದ ಸಂದರ್ಭಗಳು ಹಲವಾರು ಬಂದಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಭವಿಷ್ಯ ನಿಧಿಯ (Provident Fund) ಅಂದರೆ ಪಿಎಫ್‌ನ ಹೊಸ ನಿಯಮಗಳಿಂದ, ನೀವು ಯಾರ ಮುಂದೆಯೂ ಕೈ ಚಾಚಬೇಕಾಗಿಲ್ಲ. ಹೊಸ ನಿಯಮದ ನಂತರ, ಪಿಎಫ್ ಖಾತೆದಾರರು ಹಣವನ್ನು ಹಿಂಪಡೆಯಲು 3 ದಿನಗಳವರೆಗೆ ಕಾಯಬೇಕಾಗಿಲ್ಲ. ಹೌದು,  ನೀವು ನಿಮ್ಮ ಪಿಎಫ್ ಖಾತೆಯಿಂದ ಕೇವಲ ಒಂದೇ ಒಂದು ಗಂಟೆಯಲ್ಲಿ ಹಣವನ್ನು ಪಡೆಯಬಹುದು.

ವೈದ್ಯಕೀಯ ತುರ್ತು ಸಂದರ್ಭದಲ್ಲಿ 1 ಗಂಟೆಯಲ್ಲಿ ಹಣವನ್ನು ಹಿಂಪಡೆಯಬಹುದು
ಇನ್ಮುಂದೆ ನೀವು ಕೂಡ ನಿಮ್ಮ ಭವಿಷ್ಯ ನಿಧಿ ಖಾತೆಯಿಂದ (EPF) 1 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಹಿಂಪಡೆಯಬಹುದು. ಯಾವುದೇ ರೀತಿಯ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೀವು ಈ ಹಣವನ್ನು ಹಿಂಪಡೆಯಬಹುದು. ಈ ಸೇವೆಯ ಪ್ರಯೋಜನವನ್ನು ಪಡೆಯಲು, ನೀವು ತುರ್ತು ಪರಿಸ್ಥಿತಿಯ ಕಾರಣವನ್ನು ಹೇಳಿ ವೆಚ್ಚವನ್ನು ತೋರಿಸಬೇಕು.

ಇದನ್ನೂ ಓದಿ-PM Awas ಯೋಜನೆ ಅಡಿ ಮನೆ ಪಡೆಯುವಲ್ಲಿ ಸಮಸ್ಯೆನಾ? ಈ ಕೆಲಸ ಮಾಡಿ; ಬೇಗ ಮನೆ ಸಿಗುತ್ತೆ!

ಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ?
>> ಇದಕ್ಕಾಗಿ ನೀವು ಮೊದಲು epfindia.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
>> ವೆಬ್‌ಸೈಟ್‌ನ ಮುಖಪುಟದಲ್ಲಿ, ಮೇಲಿನ ಬಲ ಮೂಲೆಯಲ್ಲಿರುವ ಆನ್‌ಲೈನ್ ಅಡ್ವಾನ್ಸ್ ಕ್ಲೈಮ್ ಅನ್ನು ಕ್ಲಿಕ್ ಮಾಡಿ.
>> ಇದರ ನಂತರ unifiedportalmem.epfindia.gov.in/memberinterface ಗೆ ಹೋಗಿ.
>> ಆನ್‌ಲೈನ್ ಸೇವೆಗಳಿಗೆ ಹೋಗಿ. ಇದರ ನಂತರ ಕ್ಲೈಮ್ ಫಾರ್ಮ್-31,19,10C ಮತ್ತು 10D ಅನ್ನು ಭರ್ತಿ ಮಾಡಿ.

ಇದನ್ನೂ ಓದಿ-Good News: ಪ್ರಸಕ್ತ ಹಣಕಾಸು ವರ್ಷದಲ್ಲಿ GDP ಬೆಳವಣಿಗೆ ದರ ಶೇ.9.2ರಷ್ಟು, ಮತ್ತೆ ಹಳಿಗೆ ಮರಳಿದ ಆರ್ಥಿಕತೆ

>> ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ಅಂಕೆಗಳನ್ನು ನಮೂದಿಸಿ ಮತ್ತು ಪರಿಶೀಲಿಸಿ.
>> Proceed for Online Claim ಎಂಬುದರ ಮೇಲೆ ಕ್ಲಿಕ್ ಮಾಡಿ.
>> ಡ್ರಾಪ್ ಡೌನ್‌ನಿಂದ PF ಅಡ್ವಾನ್ಸ್ ಆಯ್ಕೆಮಾಡಿ.
>> ಹಣವನ್ನು ಹಿಂಪಡೆಯಲು ಕಾರಣವನ್ನು ಆಯ್ಕೆಮಾಡಿ. ಮೊತ್ತವನ್ನು ನಮೂದಿಸಿ ಮತ್ತು ಚೆಕ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ. ನಂತರ ನಿಮ್ಮ ವಿಳಾಸವನ್ನು ನಮೂದಿಸಿ.
>> Get Aadhaar OTP ಮಾಡಿ ಮತ್ತು ಆಧಾರ್ ಲಿಂಕ್ ಮಾಡಿದ ಮೊಬೈಲ್‌ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ.
>> ಇದರೊಂದಿಗೆ ನಿಮ್ಮ ಹಕ್ಕನ್ನು ಸಲ್ಲಿಸಲಾಗುತ್ತದೆ. ಒಂದು ಗಂಟೆಯಲ್ಲಿ ನಿಮ್ಮ ಖಾತೆಗೆ ಪಿಎಫ್ ಕ್ಲೈಮ್ ಹಣ ಬರುತ್ತದೆ.

ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಜ. 26 ರಂದು ನಿಮ್ಮ ಸಂಬಳದಲ್ಲಿ ಭಾರೀ ಹೆಚ್ಚಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News