ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 'ಸಲಾಂ ರಾಕಿ ಭಾಯ್' ವೀಡಿಯೋ ಸಾಂಗ್!

ಸಲಾಂ ರಾಕಿ ಭಾಯ್‌ ಅನ್ನೋ ಸಾಹಿತ್ಯವಿರುವ, ರಾಕಿಂಗ್ ಸ್ಟಾರ್‌ ಯಶ್‌ ಅವರ ಇಂಟ್ರುಡಕ್ಷನ್‌ ಸಾಂಗ್ ಇದಾಗಿದೆ.

Last Updated : Dec 7, 2018, 03:18 PM IST
ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 'ಸಲಾಂ ರಾಕಿ ಭಾಯ್' ವೀಡಿಯೋ ಸಾಂಗ್! title=

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯ 2ನೇ ಟ್ರೇಲರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ 'ಸಲಾಂ ರಾಕಿ ಭಾಯ್' ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ. 

ಬಾಲಿವುಡ್'ನಲ್ಲಿ ಚಿತ್ರದ ಟ್ರೇಲರ್ ಹವಾ ಎಬ್ಬಿಸಿದ ಬೆನ್ನಲ್ಲೇ ಬಿಡುಗಡೆಯಾಗಿರುವ ಯಶ್ ಅಭಿನಯದ ಕೆಜಿಎಫ್‌ ಸಿನಿಮಾದ ವೀಡಿಯೋ ಸಾಂಗ್ ಸಿಕ್ಕಾಪಟ್ಟೆ ಸೆನ್ಸ್ಸೇಶನ್ ಕ್ರಿಯೇಟ್ ಮಾಡಿದೆ. ಸಲಾಂ ರಾಕಿ ಭಾಯ್‌ ಅನ್ನೋ ಸಾಹಿತ್ಯವಿರುವ, ರಾಕಿಂಗ್ ಸ್ಟಾರ್‌ ಯಶ್‌ ಅವರ ಇಂಟ್ರುಡಕ್ಷನ್‌ ಸಾಂಗ್ ಇದಾಗಿದ್ದು, ಸಖತ್‌ ಅಟ್ರ್ಯಾಕ್ಟೀವ್‌ ಆಗಿದೆ. ಮುಂಬೈ ಡಾನ್ ಗಳು ಹೇಗಿರುತ್ತಾರೆ, ಅವರ ಫೈಟಿಂಗ್, ಟಾಕಿಂಗ್ ಸ್ಟೈಲ್ ಗಳನ್ನು ತೋರಿಸುವ  ಒಂದು ಝಲಕ್ ಈ ಹಾಡಿನಲ್ಲಿದೆ. ಈ ಹಾಡು ನೋಡಿದವರೆಲ್ಲಾ ಈಗ 'ಸಲಾಂ ರಾಕಿ ಭಾಯ್' ಅಂತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಸಿನಿಮಾ ಇದೇ ಡಿಸೆಂಬರ್ 21 ರಂದು ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಗಾಯಕ ವಿಜಯ್ ಪ್ರಕಾಶ್, ಸಂತೋಷ್ ವೆಂಕಿ, ಸಚಿನ್ ಬಸ್ರೂರು, ಪುನೀತ್ ರುದ್ರಂಗ, ಮೋಹನ್, ಎಚ್ ಶ್ರೀನಿವಾಸ್ ಮೂರ್ತಿ, ವಿಜಯ್ ಅರಸ್ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ.

Trending News