Oxygen Rich Fruits: ಶರೀರದಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸಲು ಈ ಹಣ್ಣುಗಳನ್ನು ಸೇವಿಸಿ

Oxygen Rich Fruits: ಕೊರೋನಾದ ಈ ಕಾಲದಲ್ಲಿ ನಾವೆಲ್ಲರೂ ನಮ್ಮ ದೇಹದ ಆಮ್ಲಜನಕದ ಮಟ್ಟದ ಕುರಿತು ವಿಶೇಷ ಗಮನ ಹರಿಸಬೇಕು. ಇದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ. ಹೀಗಿರುವಾಗ ದೇಹದ ಆಮ್ಲಜನಕ ಮಟ್ಟವನ್ನು ಸರಿಯಾಗಿಡಲು ನೀವು ಕೆಲ ಹಣ್ಣುಗಳನ್ನು ಸೇವಿಸಿದರೆ ಉತ್ತಮ.  

Written by - Nitin Tabib | Last Updated : Jun 21, 2022, 04:44 PM IST
  • ಇಂದಿನ ಬದಲಾಗುತ್ತಿರುವ ಜೀವನಶೈಲಿಯಲ್ಲಿ,
  • ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ತುಂಬಾ ಮುಖ್ಯ.
  • ಇದು ನಿಮ್ಮ ದೇಹವನ್ನು ಬಲಪಡಿಸುವುದಲ್ಲದೆ, ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
Oxygen Rich Fruits: ಶರೀರದಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸಲು ಈ ಹಣ್ಣುಗಳನ್ನು ಸೇವಿಸಿ title=
Oxygen Rich Fruits

Oxygen Rich Fruits: ಇಂದಿನ ಬದಲಾಗುತ್ತಿರುವ ಜೀವನಶೈಲಿಯಲ್ಲಿ, ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ತುಂಬಾ ಮುಖ್ಯ. ಇದು ನಿಮ್ಮ ದೇಹವನ್ನು ಬಲಪಡಿಸುವುದಲ್ಲದೆ, ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ ನಾವು ನಮ್ಮ ದೇಹದ ಆಮ್ಲಜನಕದ ಮಟ್ಟದ ಬಗ್ಗೆಯೂ ಕೂಡ ವಿಶೇಷ ಗಮನಹರಿಸಬೇಕು. ಇದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ.ಹೀಗಿರುವಾಗ ನಾವು ನಮ್ಮ ಆಹಾರದ ಬಗ್ಗೆಯೂ ಕೂಡ ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ನಾವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಬದಲಿಗೆ, ನಮ್ಮ ಆಹಾರದಲ್ಲಿ ನಾವು ಕೆಲವು ಹಣ್ಣುಗಳನ್ನು ಸೇರಿಸಿಕೊಳ್ಳಬೇಕು ಅಷ್ಟೇ. ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಸರಿಪಡಿಸಲು ಯಾವು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಈ ಹಣ್ಣುಗಳನ್ನು ಸೇವಿಸಿ
ಪಿಯರ್ ಹಣ್ಣು -
ನಾವು ನಮ್ಮ ಆಹಾರದಲ್ಲಿ ಪಿಯರ್ ಹಣ್ಣನ್ನು ಸೇರಿಸುವುದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಅದು ಸಹಾಯ ಮಾಡುತ್ತದೆ, ಪಿಯರ್ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಪ್ರೋಟೀನ್, ಫೈಬರ್ ಮತ್ತು ತಾಮ್ರದಂತಹ ಪೋಷಕಾಂಶಗಳಿವೆ. ಇವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇದನ್ನು ಸೇವಿಸುವುದರಿಂದ ನಮ್ಮ ದೇಹದ ಆಮ್ಲಜನಕದ ಮಟ್ಟವು ಉತ್ತಮವಾಗಿರುತ್ತದೆ.

ಪಪ್ಪಾಯಿ ಹಣ್ಣು - ಹೊಟ್ಟೆ ಮತ್ತು ಆರೋಗ್ಯ ಎರಡಕ್ಕೂ ಹಲವು ರೀತಿಯಲ್ಲಿ ಇದು ಉಪಯುಕ್ತವಾಗಿದೆ. ಮತ್ತೊಂದೆಡೆ, ಇದನ್ನು ಬೆಳಗ್ಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದರಲ್ಲಿ ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್ ಎ, ಬಿ, ಸಿ ಮುಂತಾದ ಪೋಷಕಾಂಶಗಳಿವೆ. ಇದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಆದ್ದರಿಂದ, ನಮ್ಮ ದೇಹದ ಆಮ್ಲಜನಕವೂ ಕಡಿಮೆಯಾಗುತ್ತಿದ್ದರೆ, ನಾವು ಪಪ್ಪಾಯಿಯನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ-ಮಧುಮೇಹದ ಆರಂಭಿಕ ಲಕ್ಷಣಗಳು ಇವು .! ಈ ಯೋಗಾಸನಗಳಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು

ಕಿವಿ ಹಣ್ಣು- ಕಿವಿಯ ರುಚಿ ಹುಳಿ ಮತ್ತು ಸಿಹಿಯಾಗಿರುತ್ತದೆ, ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದೇ ವೇಳೆ, ದೇಹದಲ್ಲಿ ರಕ್ತ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುವ ಹಲವು ಪೋಷಕಾಂಶಗಳು ಕೀವಿ ಹಣ್ಣಿನಲ್ಲಿವೆ. ಇದನ್ನು ಸೇವಿಸುವುದರಿಂದ ನಮ್ಮ ಮುಖದಲ್ಲಿ ಹೊಳಪು ಕೂಡ ಬರುತ್ತದೆ.

ಇದನ್ನೂ ಓದಿ-Sugarcane Juice Side Effects: ಈ ಜನರು ಅಪ್ಪಿ-ತಪ್ಪಿಯೂ ಕೂಡ ಕಬ್ಬಿನ ರಸ ಸೇವಿಸಬಾರದು, ಕಾರಣ ಇಲ್ಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News