ಲೇಹ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ಮಂಗಳವಾರ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಬೆಳಗ್ಗೆ 10.47ಕ್ಕೆ ಕಂಪನದ ಅನುಭವವಾಗಿದೆ.
ಇಲ್ಲಿಯವರೆಗೆ ಯಾವುದೇ ಹಾನಿಯ ವರದಿಯಾಗಿಲ್ಲ. ಭೂಕಂಪನದ ಕೇಂದ್ರವು ಲೇಹ್ ಪಟ್ಟಣದ ಉತ್ತರಕ್ಕೆ 166 ಕಿಲೋಮೀಟರ್ಗಳಾಗಿದ್ದರೆ, ಆಳವು 105 ಕಿಲೋಮೀಟರ್ಗಳಷ್ಟಿತ್ತು.ಮಂಗಳವಾರದಿಂದ ಭಾರತದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ.
ಇದಕ್ಕೂ ಮೊದಲು ಮಂಗಳವಾರ ಮುಂಜಾನೆ, ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿದವು.ರಾತ್ರಿ 10.20ರ ಸುಮಾರಿಗೆ ಭೂಕಂಪ ಸಂಭವಿಸಿದ್ದರಿಂದ ಗಾಬರಿಗೊಂಡ ನಿವಾಸಿಗಳು ಕಟ್ಟಡಗಳಿಂದ ಹೊರಬಂದರು.
Earthquake of Magnitude: 4.3, Occurred on 28-03-2023, 10:47:02 IST, Lat: 35.64 & Long: 77.80, Depth: 105 Km ,Location: 166km N of Leh, Laddakh, India for more information Download the BhooKamp App https://t.co/ceMTNIn6gd@Dr_Mishra1966 @Ravi_MoES @ndmaindia @Indiametdept pic.twitter.com/p4ByGzigaD
— National Center for Seismology (@NCS_Earthquake) March 28, 2023
ಇದನ್ನೂ ಓದಿ: Bollywood Actress: ಮದುವೆ ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನೇ ತ್ಯಜಿಸಿದ ನಟಿಯರು; ಈಗ ವಿದೇಶದಲ್ಲಿ ಸೆಟಲ್!
ಪ್ರಬಲವಾದ ಕಂಪನಗಳು ದೆಹಲಿ, ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ್, ಚಂಡೀಗಢ, ಜೈಪುರ ಮತ್ತು ಇತರ ನಗರಗಳಲ್ಲಿ ನೂರಾರು ಜನರು ತಮ್ಮ ಮನೆಗಳಿಂದ ಬೀದಿಗಳಿಗೆ ಧಾವಿಸುವಂತೆ ಮಾಡಿತು.ಪಾಕಿಸ್ತಾನದಲ್ಲಿ ಭೂಕಂಪದ ತೀವ್ರತೆ ಅಧಿಕವಾಗಿತ್ತು ಇದರಿಂದಾಗಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ : ಈ ಅರಮನೆಯಲ್ಲಿದ್ದ ರಾಣಿಯರಿಗೆಂದೇ ಕಾಯುತ್ತಿದ್ದರು ಬ್ರಿಟಿಷರು; ಇವರನ್ನು ಆ ರೀತಿ ತೃಪ್ತಿಪಡಿಸಲು 20 ನಿಮಿಷ ಬೇಕಿತ್ತಂತೆ…!
2005 ರಲ್ಲಿ 7.5 ತೀವ್ರತೆಯ ಭೂಕಂಪವು ಪಾಕಿಸ್ತಾನದಲ್ಲಿ 74,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.ಈ ವರ್ಷದ ಫೆಬ್ರುವರಿ 6 ರಂದು, 7.8 ತೀವ್ರತೆಯ ಭೂಕಂಪವು ಟರ್ಕಿಯನ್ನು ಅಪ್ಪಳಿಸಿತು ಮತ್ತು ಭಾರೀ ನಾಶವನ್ನು ಉಂಟುಮಾಡಿತು. ದುರಂತದಲ್ಲಿ 3,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.