ಬೆಂಗಳೂರು: ಜಗತ್ತಿಗೆ ವಿದಾಯ ಹೇಳಿದ ಮುನಿರಾಜು ಕುಟುಂಬ ಇಂದು ಮೋಸ ಹೋಗಿದೆ. ಮುನಿರಾಜು (67) ಅವರು 2020ರ ಜುಲೈ 2ರಂದು ಕೊರೊನಾ ಸೋಂಕಿನಿಂದ(Covid-19) ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆದರೆ ರಾಜಾಜಿನಗರದಲ್ಲಿರುವ ಇಎಸ್ಐ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿಬಿಟ್ಟಿದ್ದಾರೆ.
ಮೃತ ಮುನಿರಾಜುರವರ ಅಂತ್ಯಸಂಸ್ಕಾರ ಮಾಡಬೇಕೆಂದು ಅವರ ಕುಟುಂಬದವರು ಆಸ್ಪತ್ರೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆಗೆ ಒಪ್ಪಿಗೆ ನೀಡಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ(COVID-19 Positive Patients) ಮಾಡದೆ ಬೇಜವಾಬ್ದಾರಿತನ ತೋರಿದ್ದಾರೆ. ಇದೀಗ ಆಸ್ಪತ್ರೆಯ ಫ್ರೀಜರ್‌ನಲ್ಲಿಯೇ ಇದ್ದ ಶವಗಳನ್ನು ಬರೋಬ್ಬರಿ 16 ತಿಂಗಳ ಬಳಿಕ ಹೊರಕ್ಕೆ ತೆಗೆದಿದ್ದಾರೆ.
ಇದನ್ನೂ ಓದಿ: Lockdown in Karnataka : ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಇಲ್ಲ : ಸಚಿವ ಸುಧಾಕರ್ ಸ್ಪಷ್ಟನೆ
ಆಸ್ಪತ್ರೆಯ ಫ್ರೀಜರ್‌ನಲ್ಲಿಯೇ ಬಿದ್ದಿದ್ದ ಮೃತ ದೇಹಗಳು
ಚಾಮರಾಜಪೇಟೆಯ ನಿವಾಸಿ ದುರ್ಗಾ(40) ಮತ್ತು ಕೆ.ಪಿ.ಅಗ್ರಹಾರದ ನಿವಾಸಿ ಮುನಿರಾಜು 2020ರ ಜುಲೈ ತಿಂಗಳಿನಲ್ಲಿಯೇ ಕೊರೊನಾದಿಂದ ಸಾವನ್ನಪ್ಪಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಈ ಶವಗಳ ಅಂತ್ಯಸಂಸ್ಕಾರ ನೆರವೇರಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಬರೋಬ್ಬರಿ 16 ತಿಂಗಳುಗಳ ಕಾಲ ಶವಗಳು ರಾಜಾಜಿನಗರ ಇಎಸ್‌ಐ ಆಸ್ಪತ್ರೆ(ESI Hospital) ಶವಾಗಾರದಲ್ಲಿ ಬಿದ್ದಿದ್ದರೂ ಯಾರೂ ಅವುಗಳ ಬಗ್ಗೆ ಗಮನಹರಿಸಿಲ್ಲ. ಆಸ್ಪತ್ರೆಯ ಫ್ರೀಜರ್‌ನಲ್ಲಿಯೇ ಅನಾಥವಾಗಿ ಬಿದ್ದಿದ್ದ ಶವಗಳನ್ನು ಸಿಬ್ಬಂದಿ ಈಗ ಹೊರತೆಗೆದಿದ್ದಾರೆ.
ಆಸ್ಪತ್ರೆಯಲ್ಲಿಯೇ ಹಲವಾರು ದಿನಗಳಿಂದ ಬಿದ್ದಿದ್ದ ಈ ಮೃತ ದೇಹಗಳ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ. ಮೃತಪಟ್ಟವರ ಅಂತ್ಯಸಂಸ್ಕಾರ(Cremation) ನೆರವೇರಿಸಲಾಗಿದೆ ಎಂದೇ ಅವರ ಕುಟುಂಬಸ್ಥರು ನಂಬಿಕೊಂಡಿದ್ದರು. ಧಾರ್ಮಿಕ ಪದ್ಧತಿಗಳ ಪ್ರಕಾರ ಶ್ರಾದ್ಧ ವಿಧಿವಿಧಾನಗಳನ್ನು ಕೂಡ ನೆರವೇರಿಸಿದ್ದರು. ಆದರೆ ಇಬ್ಬರ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲಿಯೇ ಕೊಳೆಯುತ್ತಿದ್ದವು. ಇದು ಕಳೆದ ಶನಿವಾರ ಬಹಿರಂಗವಾಗಿದ್ದು, ಬಳಿಕ ಆಸ್ಪತ್ರೆಯ ಇಡೀ ಆಡಳಿತ ವಿಭಾಗದಲ್ಲಿ ಸಂಚಲನ ಉಂಟಾಗಿತ್ತು. ಮೃತದೇಹಗಳು ಯಾವ ಸಂದರ್ಭಗಳಲ್ಲಿ ಪತ್ತೆಯಾಗಿವೆ ಅಥವಾ ಅವುಗಳನ್ನು ಹೆಗೆ ಪತ್ತೆ ಮಾಡಲಾಯಿತು ಎಂಬುದರ ಕುರಿತು ಆಸ್ಪತ್ರೆಯಿಂದ ಯಾವುದೇ ಸ್ಪಷ್ಟೀಕರಣವಿಲ್ಲ. ಯಾವುದೇ ಆಸ್ಪತ್ರೆಯ ಅಧಿಕಾರಿಗಳು ಈ ವಿಷಯದ ಬಗ್ಗೆ ಮಾತನಾಡಲು ಸಿದ್ಧವಾಗಿಲ್ಲ.
ಇದನ್ನೂ ಓದಿ: 'Omicron' ಗಂಭೀರ ರೂಪಾಂತರಿಯಲ್ಲ, ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ
ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ
ಆಸ್ಪತ್ರೆಯ ಮೂಲಗಳ ಪ್ರಕಾರ ಈ ಎರಡೂ ಶವಗಳನ್ನು ಆಸ್ಪತ್ರೆಯ ಹಳೆಯ ಶವಾಗಾರ(Mortuary)ದ ಫ್ರೀಜರ್‌ನಲ್ಲಿ ಇರಿಸಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಬೆಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಾಗಿ ಕಾಯುತ್ತಿದ್ದರು. ಈ ವೇಳೆ ಆಸ್ಪತ್ರೆಯ ನೂತನ ಶವಾಗಾರಕ್ಕೆ ಚಾಲನೆ ನೀಡಲಾಗಿದ್ದು, ಬಳಿಕ ಎಲ್ಲಾ ಮೃತದೇಹಗಳನ್ನು ಹೊಸ ಶವಾಗಾರದಲ್ಲಿ ಇರಿಸಲಾಗಿದೆ. ಈ ಎರಡೂ ಶವಗಳು ಹಳೆಯ ಶವಾಗಾರದಲ್ಲಿಯೇ ಇದ್ದು, ಸುಮಾರು 16 ತಿಂಗಳ ನಂತರ ಶನಿವಾರ ಎರಡೂ ಶವಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ಎರಡು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.