ಅತ್ಯಂತ ಸ್ನೇಹಪರರಾಗಿರುತ್ತಾರೆ ಈ 4 ರಾಶಿಯವರು, ಮೊದಲ ಭೇಟಿಯಲ್ಲೇ ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, 12 ರಲ್ಲಿ 4 ರಾಶಿಯವರು ತುಂಬಾ ಸ್ನೇಹಪರರಾಗಿರುತ್ತಾರೆ. ಈ ರಾಶಿಯ ಜನರು ಮೊದಲ ಭೇಟಿಯಲ್ಲೇ ಜನರ, ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ.

Written by - Zee Kannada News Desk | Last Updated : Feb 9, 2022, 05:32 PM IST
  • ಈ ರಾಶಿಯವರು ಬಹಳ ಸ್ನೇಹಪರರಾಗಿರುತ್ತಾರೆ
  • ಮೊದಲ ಭೇಟಿಯಲ್ಲಿಯೇ ಮನಸ್ಸು ಗೆದ್ದು ಬಿಡುತ್ತಾರೆ
  • ಜೀವನವನ್ನು ಮುಕ್ತವಾಗಿ ಬದುಕುತ್ತಾರೆ
ಅತ್ಯಂತ ಸ್ನೇಹಪರರಾಗಿರುತ್ತಾರೆ  ಈ 4 ರಾಶಿಯವರು, ಮೊದಲ ಭೇಟಿಯಲ್ಲೇ ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ  title=
ಈ ರಾಶಿಯವರು ಬಹಳ ಸ್ನೇಹಪರರಾಗಿರುತ್ತಾರೆ (file photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) 12 ರಾಶಿಚಕ್ರಗಳನ್ನು ಉಲ್ಲೇಖಿಸಲಾಗಿದೆ. ಪ್ರತಿಯೊಂದು ರಾಶಿಚಕ್ರದ ಚಿಹ್ನೆಗೆ (Zodiac sign) ಸಂಬಂಧಿಸಿದ ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವವು ವಿಭಿನ್ನವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 12 ರಲ್ಲಿ 4 ರಾಶಿಯವರು ತುಂಬಾ ಸ್ನೇಹಪರರಾಗಿರುತ್ತಾರೆ. ಈ ರಾಶಿಯ ಜನರು ಮೊದಲ ಭೇಟಿಯಲ್ಲೇ ಜನರ, ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ. ಇವರು ಜನರ ಮನಸ್ಸಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಬಿಡುತ್ತಾರೆ. 

ವೃಷಭ ರಾಶಿ :
ಈ ರಾಶಿಚಕ್ರದ (Taurus) ಜನರು ತಮಾಷೆಯ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಭಾಗವಹಿಸುವ ಕೂಟದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾರೆ. ಈ ರಾಶಿಯ ಜನರು ತಮ್ಮ ಜೀವನವನ್ನು ಮುಕ್ತವಾಗಿ ಮತ್ತು ಸಂತೋಷದಿಂದ ಬದುಕುತ್ತಾರೆ. ಶುಕ್ರ ಗ್ರಹದ (Venus) ಪ್ರಭಾವದಿಂದಾಗಿ ಈ ರಾಶಿಯ ಜನರು ಕಲಾಭಿಮಾನಿಗಳಾಗಿರುತ್ತಾರೆ. 

ಇದನ್ನೂ ಓದಿ : Maha Shivratri 2022: ಮಹಾಶಿವರಾತ್ರಿಯ ದಿನದಂದು ತಪ್ಪಿಯೂ ಶಿವಲಿಂಗಕ್ಕೆ ಈ ವಸ್ತುವನ್ನು ಅರ್ಪಿಸಬೇಡಿ

ಮಿಥುನ ರಾಶಿ :
ಮಿಥುನ ರಾಶಿಯ (Gemini) ಜನರು ತುಂಬಾ ಸ್ನೇಹಪರರು. ಈ ರಾಶಿಯ ಜನರು ಮೊದಲ ಭೇಟಿಯಲ್ಲಿಯೇ ಎದುರಿಗಿರುವವರ ಮನಸ್ಸು ಗೆಲ್ಲುತ್ತಾರೆ.  ತಮ್ಮೊಂದಿಗೆ ಇರುವವರ ಮುಖದಲ್ಲಿ ಸದಾ ನಗು ಉಳಿಯುವಂತೆ ನೋಡಿಕೊಳ್ಳುತ್ತಾರೆ. ಈ ರಾಶಿಚಕ್ರದ ಜನರ ಹಾಸ್ಯ ಪ್ರಜ್ಞೆಯು ತುಂಬಾ ಅದ್ಭುತವಾಗಿರುತ್ತದೆ. ಈ ರಾಶಿಯ ಜನರು ಕೋಪದ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಮಿಥುನ ರಾಶಿಯವರ ಮೇಲೆ ಬುಧ ಗ್ರಹದ (Mercury) ವಿಶೇಷ ಕೃಪೆ ಇರುತ್ತದೆ. 

ಧನು ರಾಶಿ :
ಧನು ರಾಶಿಯವರು (Sagittarius) ವಿನಮ್ರ ಸ್ವಭಾವದವರಾಗಿರುತ್ತಾರೆ. ಈ ರಾಶಿಯ ಜನರು ಯಾವುದೇ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತಾರೆ.  ಜೀವನದಲ್ಲಿ ಬಹಳಷ್ಟು ವಿನೋದವನ್ನು ಹೊಂದಿರುತ್ತಾರೆ. ಇದಲ್ಲದೆ, ಈ ರಾಶಿಯ ಜನರು ಜೀವನದ ಪ್ರತಿ ಕ್ಷಣವನ್ನು ಆನಂದಿಸುತ್ತಾರೆ. 

ಇದನ್ನೂ ಓದಿ : ಈ ದಿನದಂದು ತಪ್ಪಿಯೂ ಸಾಲ ಪಡೆಯುವುದು ಅಥವಾ ನೀಡುವುದು ಬೇಡವೇ ಬೇಡ

ಮೀನ ರಾಶಿ :
ಮೀನ ರಾಶಿಯ  (Pisces) ಜನರು ಹರ್ಷಚಿತ್ತದಿಂದ ಕೂಡಿರುತ್ತಾರೆ. ಅವರು ಯಾವುದೇ ಪರಿಸ್ಥಿತಿಯನ್ನು ಗಂಭೀರವಾಗಿ ಮತ್ತು ಶಾಂತವಾಗಿ ನಿಭಾಯಿಸುತ್ತಾರೆ. ಇವರು ಸ್ನೇಹಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಈ ರಾಶಿಯವರ ಮೇಲೆ ಗುರುವಿನ (Jupiter) ವಿಶೇಷ ಆಶೀರ್ವಾದವಿರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News