Bride Bridegroom Fighting Video : ಮದುವೆ ಎನ್ನುವುದು ಪ್ರತಿಯೊಬ್ಬನ ಜೀನವದ ಪ್ರಮುಖ ಘಟ್ಟ. ಇದೇ ಕಾರಣಕ್ಕೆ ಮದುವೆಗೆ ವರ ಅಥವಾ ವಧುವನ್ನು ಹುಡುಕುವಾಗ ಬಹಳ ಎಚ್ಚರಿಕೆ ವಹಿಸುತ್ತಾರೆ. ಇನ್ನು, ಎಲ್ಲವೂ ಸರಿ ಹೋಗಿ ಮದುವೆ ನಿಶ್ಚಯವಾಗುತ್ತಿದ್ದಂತೆಯೇ ಹುಡುಗ ಆಗಲಿ ಹುಡುಗಿಯಾಗಲಿ ತನ್ನ ಮುಂದಿನ ಜೀವನದ ಬಗ್ಗೆ ನಾನಾ ಕನಸುಗಳನ್ನು ಕಾಣುತ್ತಾರೆ. ತನ್ನ ಸಂಗಾತಿಯ ಜೊತೆಗೆ ತಾನಿಡುವ ಪ್ರತಿ ಹೆಜ್ಜೆಯೂ ಸಂತೋಷದಿಂದ ತುಂಬಿರಲಿ ಎನ್ನುವುದೇ ಪ್ರತಿಯೊಬ್ಬನ ಕನಸಾಗಿರುತ್ತದೆ. ಮುಂದಿನ ಜೀವನದ ಬಗ್ಗೆ ನಾನಾ ಕನಸುಗಳನ್ನು ಹೊತ್ತುಕೊಂಡು ಮದುವೆಗೆ ಸಿದ್ದರಾಗುತ್ತಾರೆ ವಧು-ವರ.
ಹೀಗೆ ಮದುವೆ ಮಂಟಪಕ್ಕೆ ಬಂದ ಮೇಲೆ ಶಾಸ್ತ್ರ ಸಂಪ್ರದಾಯಗಳನ್ನು ಅನುಸರಿಸಲೇ ಬೇಕು. ಸಾಮಾನ್ಯವಾಗಿ ವಧು ಅಂದ ಕೂಡಲೇ ಮನಸ್ಸಿಗೆ ಬರುವ ಚಿತ್ರ ನಯ ನಾಜೂಕಿನಿಂದ ಕುಳಿತಿರುವ ಹೆಣ್ಣು. ವರ ಕೂಡಾ ಅಷ್ಟೇ ವಿನಯವಾಗಿ ಕಂಡು ಬರುತ್ತಾನೆ. ಇದರ ಮಧ್ಯೆ, ಮದುವೆಯ ಫೋಟೋ ವಿಡಿಯೋಗಳ ಅಂದವೇ ಬೇರೆ. ಈಗ ಮದುವೆ ಮನೆಯಲ್ಲಿ ಫೋಟೋ ಗ್ರಾಫಾರ್ ಗಿಂತ ಮೊಬೈಲ್ ಗಳಲ್ಲಿ ಫೋಟೋ ವಿಡಿಯೋ ತೆಗೆಯುವವರೇ ಹೆಚ್ಚಾಗಿರುತ್ತಾರೆ. ಹೀಗೆ ತೆಗೆದ ಫೋಟೋ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟು ತಮಾಷೆ ನೋಡುತ್ತಾರೆ.
ಇದನ್ನೂ ಓದಿ : Viral Video: ಬೀದಿ ವ್ಯಾಪಾರಿ ತಯಾರಿಸಿದ ಜಗತ್ತಿನ ಅತಿ ದೊಡ್ಡ ಜಿಲೇಬಿ ನೋಡಿದ್ದಿರಾ?
ಇಲ್ಲೊಂದು ಮದುವೆ ಮನೆಯಲ್ಲಿ ನಡೆದದ್ದು ಅದೇ. ಈ ಮದುವೆಯಲ್ಲಿ ಮಂಟಪದಲ್ಲಿಯೇ ವಧು ವರ ಕಾಳಗಕ್ಕೆ ನಿಂತಿದ್ದಾರೆ. ಮದುವೆಯ ಶಾಸ್ತ್ರದ ಭಾಗವಾಗಿ ಇಲ್ಲಿ ವರ ವಧುವಿಗೆ ಸಿಹಿ ತಿನ್ನಿಸಬೇಕು. ಆದರೆ ಅದ್ಯಾಕೋ ವಧು ಸಿಹಿ ತಿನ್ನುವುದಕ್ಕೆ ನಿರಾಕರಿಸುತ್ತಾಳೆ. ಸುಮ್ಮನಾಗದ ವರ ವಧುವಿಗೆ ಒತ್ತಾಯವಾಗಿ ಸಿಹಿ ತಿನ್ನಿಸಲು ಮುಂದಾಗುತ್ತಾನೆ. ಇದನ್ನು ಸಹಿಸದ ವಧು ವರನ ಕಪಾಳಕ್ಕೆ ಬಾರಿಸುತ್ತಾಳೆ. ಎಲ್ಲರ ಮುಂದೆ ಕಪಾಳ ಮೋಕ್ಷವಾದರೆ ವರ ಸುಮ್ಮನಿರುತ್ತಾನೆಯೇ ತಿರುಗಿ ಬಾರಿಸುತ್ತಾನೆ. ಇನ್ನೇನು ವಧು ವರರಿಬ್ಬರೂ ಮಂಟಪದಲ್ಲಿಯೇ ಕುಸ್ತಿಗಿಳಿದು ಬಿಡುತ್ತಾರೆ. ಒಂದು ಹಂತದಲ್ಲಿ ಜುಟ್ಟು ಹಿಡಿದು ಎಳೆದಾಡುವ ಹಂತಕ್ಕೂ ತಲುಪುತ್ತಾರೆ. ತಾವಿಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ ಎನ್ನುವುದನ್ನೇ ಮರೆತ ವಧು ವರರು ಸ್ಪರ್ಧೆಗೆ ಬಿದ್ದಂತೆ
ಹೊಡೆದಾಡಿಕೊಳ್ಳುತ್ತಾರೆ.
Kalesh B/w Husband and Wife in marriage ceremony pic.twitter.com/bjypxtJzjt
— Ghar Ke Kalesh (@gharkekalesh) December 13, 2022
ಇದನ್ನೂ ಓದಿ : Viral video : ಮಂಟಪದಲ್ಲಿ ನಡೆಯುತ್ತಿತ್ತು ಮದುವೆ ಶಾಸ್ತ್ರ, ಇದರ ಮಧ್ಯೆಯೇ ಹೊಡೆದಾಡಿಕೊಂಡ ಮನೆ ಮಂದಿ
ಮನೆ ಮಂದಿ ಮಧ್ಯೆ ಬಂದು ತಡೆಯುವುದಕ್ಕೆ ನೋಡಿದರೂ ಪ್ರಯೋಜನವಾಗುವುದಿಲ್ಲ. ಇವರಿಬ್ಬರೂ ಮಿತಿ ಮೀರಿ ವರ್ತಿಸಿ ಬಿಡುತ್ತಾರೆ. ಈ ವಿಡಿಯೋವನ್ನು @gharkekalesh ಹೆಸರಿನ ಟ್ವಿಟರ್ ಹ್ಯಾಂಡಲ್ನೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಅಂದ ಹಗೆ ಮದುವೆ ದಿನವೇ ಈ ರೀತಿ ಕಾದಾಡಿಕೊಂಡ ಈ ಜೋಡಿ ಮುಂದೆ ಅದ್ಹೇಗೆ ಜೀವನ ಪೂರ್ತಿ ಜೊತೆಯಾಗಿ ಬಾಳುತ್ತಾರೋ ಆ ದೇವನೇ ಬಲ್ಲ.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...