ನಿಮಗೂ ಕೂಡ ಮೊಸರಿನೊಂದಿಗೆ ಈ ಪದಾರ್ಥ ಬೆರೆಸಿ ಸೇವಿಸುವ ಅಭ್ಯಾಸವಿದೆಯೇ? ತೂಕ ಹೆಚ್ಚಾಗಬಹುದು ಎಚ್ಚರ!

ಮೊಸರು ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಹುತೇಕ ಜನರಿಗೆ ತುಂಬಾ ಇಷ್ಟ. ಕೆಲವರಿಗೆ ಯಾವುದೇ ತಿಂಡಿ, ಊಟದಲ್ಲಿ ಮೊಸರು ಬೇಕೇ ಬೇಕು. ಇನ್ನೂ ಕೆಲವರಿಗೆ ಊಟದ ನಂತರ ಮೊಸರು ಸೇವಿಸುವ ಅಭ್ಯಾಸವಿರುತ್ತದೆ. ಅದರಲ್ಲೂ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸುವುದೆಂದರೆ ತುಂಬಾ ಪ್ರೀತಿ. ಆದರೆ, ಇದು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಮಾತ್ರವಲ್ಲ, ಇತರ ರೀತಿಯಲ್ಲೂ ಕೆಲವು ಅಡ್ಡಪರಿಣಾಮಗಳನ್ನು ಕೂಡ ಉಂಟು ಮಾಡಬಹುದು.

Written by - Yashaswini V | Last Updated : Feb 23, 2023, 08:04 AM IST
  • ಸಕ್ಕರೆಯೊಳಗೆ ಕ್ಯಾಲೊರಿಗಳ ಪ್ರಮಾಣವು ಹೆಚ್ಚು ಕಂಡುಬರುತ್ತದೆ.
  • ಅಂತಹ ಪರಿಸ್ಥಿತಿಯಲ್ಲಿ, ಸಕ್ಕರೆಯೊಂದಿಗೆ ಮೊಸರು ತಿನ್ನುವ ವ್ಯಕ್ತಿಯು ಹೆಚ್ಚು ಹಸಿವನ್ನು ಅನುಭವಿಸುತ್ತಾನೆ
  • ಇದರಿಂದಾಗಿ ಅವನು ಹೆಚ್ಚು ಆಹಾರವನ್ನು ಸೇವಿಸುತ್ತಾನೆ.
ನಿಮಗೂ ಕೂಡ ಮೊಸರಿನೊಂದಿಗೆ ಈ ಪದಾರ್ಥ ಬೆರೆಸಿ ಸೇವಿಸುವ ಅಭ್ಯಾಸವಿದೆಯೇ? ತೂಕ ಹೆಚ್ಚಾಗಬಹುದು ಎಚ್ಚರ! title=
Curd sugar side effect

ಬೆಂಗಳೂರು: ನಿಮಗೂ ಕೂಡ ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನುವ ಅಭ್ಯಾಸವಿದೆಯೇ? ಹಾಗಿದ್ದರೆ, ಎಚ್ಚರ. ನಿಮ್ಮ ಈ ಅಭ್ಯಾಸದಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೌದು, ನಮ್ಮಲ್ಲಿ ಕೆಲವರಿಗೆ ಯಾವುದೇ ತಿಂಡಿ, ಊಟದಲ್ಲಿ ಮೊಸರು ಬೇಕೇ ಬೇಕು. ಇನ್ನೂ ಕೆಲವರಿಗೆ ಊಟದ ನಂತರ ಮೊಸರು ಸೇವಿಸುವ ಅಭ್ಯಾಸವಿರುತ್ತದೆ. ಅದರಲ್ಲೂ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸುವುದೆಂದರೆ ತುಂಬಾ ಇಷ್ಟ. ಆದರೆ, ಈ ಅಭ್ಯಾಸದಿಂದ ಆಗುವ ಅನಾನುಕೂಲಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ...

ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನುವುದರ ಅನಾನುಕೂಲಗಳಿವು:
* ತೂಕ ಹೆಚ್ಚಳ:

ಸಕ್ಕರೆಯೊಳಗೆ ಕ್ಯಾಲೊರಿಗಳ ಪ್ರಮಾಣವು ಹೆಚ್ಚು ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಕ್ಕರೆಯೊಂದಿಗೆ ಮೊಸರು ತಿನ್ನುವ ವ್ಯಕ್ತಿಯು ಹೆಚ್ಚು ಹಸಿವನ್ನು ಅನುಭವಿಸುತ್ತಾನೆ, ಇದರಿಂದಾಗಿ ಅವನು ಹೆಚ್ಚು ಆಹಾರವನ್ನು ಸೇವಿಸುತ್ತಾನೆ. ಇದರಿಂದಾಗಿ ತೂಕ ಹೆಚ್ಚಳ ಸಾಧ್ಯತೆಯೂ ಹೆಚ್ಚು. ಹಾಗಾಗಿ, ನೀವು ಫಿಟ್ ಆಗಿರಲು ಬಯಸಿದರೆ ಅಥವಾ ಸ್ಥೂಲಕಾಯಕ್ಕೆ ಬಲಿಯಾಗಿದ್ದರೆ ಅಪ್ಪಿತಪ್ಪಿಯೂ ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನಬೇಡಿ.

ಇದನ್ನೂ ಓದಿ- ಈ ಆರೋಗ್ಯ ಸಮಸ್ಯೆಗಳಿರುವವರಿಗೆ ಮೊಟ್ಟೆ ಸೇವನೆ ತುಂಬಾ ಡೇಂಜರ್

* ಮಧುಮೇಹ:
ನಿಯಮಿತವಾಗಿ ಮೊಸರಿನಲ್ಲಿ ಸಕ್ಕರೆ ಬೆರೆಸಿ ತಿನ್ನುವವರಲ್ಲಿ ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ. 

* ಹಲ್ಲಿನ ಸಮಸ್ಯೆಗಳು:
ಮೊಸರು ಮತ್ತು ಸಕ್ಕರೆ ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಹಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತವೆ. 

* ಹೃದಯ ಸಂಬಂಧಿ ಕಾಯಿಲೆ:
ಮೊಸರಿನೊಂದಿಗೆ ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಹೃದಯದ ತೊಂದರೆಗಳು ಉಂಟಾಗಬಹುದು. ಇದರೊಂದಿಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಉಂಟಾಗುತ್ತದೆ.

ಇದನ್ನೂ ಓದಿ- ಈ ವಸ್ತುಗಳನ್ನು ಫ್ರಿಜ್‌ನಲ್ಲಿಟ್ಟು ತಿಂದರೆ ತಪ್ಪಿದ್ದಲ್ಲ ಅನಾಹುತ

* ಭೇದಿ ಸಮಸ್ಯೆ:
ಕೆಲವರಿಗೆ ಮೊಸರಿನಲ್ಲಿ ಸಕ್ಕರೆ ಬೆರೆಸಿ ತಿನ್ನುವುದರಿಂದ ಭೇದಿ ಸಮಸ್ಯೆಯೂ ಉಂಟಾಗಬಹುದು. ಇದಲ್ಲದೆ, ಹೊಟ್ಟೆ ಉರಿ ಕೂಡ ಬಾಧಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News