Priyanka Chopra : ಪ್ರಿಯಾಂಕಾ ಬಾಲಿವುಡ್ ತೊರೆಯಲು ಕಾರಣ ಕರಣ್‌ ಜೋಹರ್‌!? ಹೊರಬಿತ್ತು ಅಸಲಿ ಸತ್ಯ

Kangana Ranaut On Priyanka Chopra: ಬಾಲಿವುಡ್‌ನಲ್ಲಿ ಸೈಡ್‌ಲೈನ್ ಆಗಿದ್ದ ದಿನಗಳನ್ನು ನೆನೆದಿದ್ದಾರೆ. ಯಾರೂ ತನಗೆ ಕೆಲಸ ನೀಡುತ್ತಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಪ್ರಿಯಾಂಕಾ ಹೇಳಿಕೆ ವೈರಲ್‌ ಆಗುತ್ತಿದ್ದಂತೆ, ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.   

Written by - Chetana Devarmani | Last Updated : Mar 28, 2023, 03:27 PM IST
  • ಬಾಲಿವುಡ್‌ನಲ್ಲಿ ಸೈಡ್‌ಲೈನ್ ಆಗಿದ್ರಂತೆ ಪಿಂಕಿ
  • ಪ್ರಿಯಾಂಕಾ ಬಾಲಿವುಡ್ ತೊರೆಯಲು ಇದೇ ಕಾರಣ!
  • ಪ್ರಿಯಾಂಕಾ ಹೇಳಿಕೆಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ
Priyanka Chopra : ಪ್ರಿಯಾಂಕಾ ಬಾಲಿವುಡ್ ತೊರೆಯಲು ಕಾರಣ ಕರಣ್‌ ಜೋಹರ್‌!? ಹೊರಬಿತ್ತು ಅಸಲಿ ಸತ್ಯ  title=
Kangana Ranaut On Priyanka Chopra

Kangana Ranaut On Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ತನ್ನ ಇತ್ತೀಚಿನ ಸಂದರ್ಶನದಲ್ಲಿ ಮೊದಲ ಬಾರಿಗೆ ಬಾಲಿವುಡ್ ತೊರೆದು ಹಾಲಿವುಡ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದ ಕಾರಣವನ್ನು ತಿಳಿಸಿದ್ದಾರೆ. ಬಾಲಿವುಡ್‌ನಲ್ಲಿ ಸೈಡ್‌ಲೈನ್ ಆಗಿದ್ದ ದಿನಗಳನ್ನು ನೆನೆದಿದ್ದಾರೆ. ಯಾರೂ ತನಗೆ ಕೆಲಸ ನೀಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಅವರ ಈ ಹೇಳಿಕೆಗೆ ಕಂಗನಾ ರಣಾವತ್ ಪ್ರತಿಕ್ರಿಯೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಟ್ವಿಟರ್‌ನಲ್ಲಿ ಪ್ರಿಯಾಂಕಾ ಹೇಳಿಕೆ ವೈರಲ್‌ ಆಗುತ್ತಿದ್ದಂತೆ, ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಕರಣ್ ಜೋಹರ್ ಅವರನ್ನು ನೇರವಾಗಿ ದೂಷಿಸಿದ್ದಾರೆ. ಶಾರುಖ್ ಜೊತೆಗಿನ ಸ್ನೇಹದಿಂದಾಗಿ ಕರಣ್ ಜೋಹರ್ ಪ್ರಿಯಾಂಕಾ ಅವರೊಂದಿಗೆ ಜಗಳವಾಡಿದ್ದರು ಎಂದು ಕಂಗನಾ ಆರೋಪಿಸಿದ್ದಾರೆ. 

 

 

ಇದನ್ನೂ ಓದಿ: ಪಚ್ಚ ಹಸಿರು ಬಣ್ಣದ ಉಡುಗೆತೊಟ್ಟು ಹಾಟ್‌ ಲುಕ್‌ ಕೊಟ್ಟ ಬಾಲಿವುಡ್‌ ತಾರೆಯರು!

ಟ್ವಿಟ್ಟರ್‌ನಲ್ಲಿ ಸುದ್ದಿ ಲೇಖನವನ್ನು ಹಂಚಿಕೊಂಡ ಅವರು, "ಇವು ಬಾಲಿವುಡ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದ ಮಾತುಗಳು, ಜನರು ಅವಳ ವಿರುದ್ಧ ಗುಂಪುಗೂಡಿದರು, ಕಿರುಕುಳ ನೀಡಿ ಚಿತ್ರರಂಗದಿಂದ ಹೊರಹಾಕಲಾಯಿತು" ಎಂದು ಬರೆದಿದ್ದಾರೆ. ಅವರನ್ನು ಭಾರತವನ್ನು ತೊರೆಯುವಂತೆ ಒತ್ತಾಯಿಸಲಾಯಿತು. ಪ್ರಿಯಾಂಕಾರನ್ನು ಕರಣ್ ಜೋಹರ್ ಬ್ಯಾನ್ ಮಾಡಿದ್ದು ಎಲ್ಲರಿಗೂ ಗೊತ್ತು ಎಂದಿದ್ದಾರೆ.

ನಾನು ಇಂಡಸ್ಟ್ರಿಯಲ್ಲಿ ಸೈಡ್‌ಲೈನ್ ಆಗಿದ್ದೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಜನರು ನನಗೆ ಕೆಲಸ ನೀಡ್ತಿಲ್ಲ. ನನಗೆ ಆಟ ಆಡುವುದು ಹೇಗೆಂದು ತಿಳಿದಿಲ್ಲ, ಹಾಗಾಗಿ ನಾನು ಉದ್ಯಮದಲ್ಲಿನ ರಾಜಕೀಯದಿಂದ ಬೇಸತ್ತಿದ್ದೇನೆ  ಮತ್ತು ನನಗೆ ಈಗ ವಿಶ್ರಾಂತಿ ಬೇಕಿತ್ತು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ:  ತಾನೆಂದರೇನಂತ ತೋರಿಸೋಕೆ ಅಂತ ʻಭೂಮಿಗೆ ಬಂದ ಭಗವಂತʼ.!

ಕಂಗನಾ ರಣಾವತ್ ಮತ್ತೊಂದು ಟ್ವೀಟ್‌ನಲ್ಲಿ ಚಿತ್ರೋದ್ಯಮದ ಸಂಸ್ಕೃತಿ ಮತ್ತು ವಾತಾವರಣವನ್ನು ಹಾಳುಮಾಡಲು ಅಸೂಯೆ, ಅಸಂಬದ್ಧ ಮತ್ತು ವಿಷಕಾರಿ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಬರೆದಿದ್ದಾರೆ. ಅಮಿತಾಬ್ ಬಚ್ಚನ್ ಅಥವಾ ಶಾರುಖ್ ಖಾನ್ ಅವರ ಯುಗದಲ್ಲಿ ಚಿತ್ರರಂಗವು ಹೊರಗಿನವರಿಗೆ ಎಂದಿಗೂ ಶತ್ರುವಾಗಿರಲಿಲ್ಲ ಎಂದು ಕಂಗನಾ ಹೇಳಿದ್ದಾರೆ. ಫ್ಯಾಶನ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಣಾವತ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಮಧುರ್ ಭಂಡಾರ್ಕರ್ ನಿರ್ದೇಶಿಸಿದ ಈ ಚಿತ್ರವು ವಿಮರ್ಶಕರಿಂದ ಹೆಚ್ಚು ಮೆಚ್ಚುಗೆ ಪಡೆಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News