ಹೆಬ್ಬಾವನ್ನೇ ನುಂಗುತ್ತಿರುವ ವಿಷಕಾರಿ ಸರ್ಪ ! ಇಲ್ಲಿದೆ ನೋಡಿ ವಿಸ್ಮಯಕಾರಿ ವಿಡಿಯೋ

Snake viral Video : ಈಸ್ಟರ್ನ್ ಬ್ರೌನ್ ಸ್ನೇಕ್ ಅನ್ನು ಸಾಮಾನ್ಯವಾಗಿ ಕಂದು ಹಾವು ಎಂದು ಕರೆಯಲಾಗುತ್ತದೆ. ಇದು ಹೆಚ್ಚು ವಿಷಕಾರಿ ಹಾವು. ಈ ಪ್ರಭೇದದ ಹಾವುಗಳು  ಪೂರ್ವ ಆಸ್ಟ್ರೇಲಿಯಾದಾದ್ಯಂತ ವ್ಯಾಪಕವಾಗಿ ಕಂಡು ಬರುತ್ತವೆ. 

Written by - Ranjitha R K | Last Updated : Apr 13, 2023, 04:00 PM IST
  • ಹಾವಿನಲ್ಲಿ ಅನೇಕ ವಿಧಗಳಿವೆ.
  • ಕೆಲವು ವಿಪರೀತ ವಿಷವನ್ನು ಹೊಂದಿರುತ್ತವೆ.
  • ಇನ್ನು ಕೆಲವು ನಿರುಪದ್ರವಗಳು.
ಹೆಬ್ಬಾವನ್ನೇ ನುಂಗುತ್ತಿರುವ ವಿಷಕಾರಿ ಸರ್ಪ !  ಇಲ್ಲಿದೆ ನೋಡಿ ವಿಸ್ಮಯಕಾರಿ ವಿಡಿಯೋ  title=

Snake viral Video : ಹಾವಿನಲ್ಲಿ ಅನೇಕ ವಿಧಗಳಿವೆ. ಕೆಲವು ವಿಪರೀತ ವಿಷವನ್ನು ಹೊಂದಿರುತ್ತವೆ. ಇನ್ನು ಕೆಲವು ವಿಷಕಾರಿಯಾಗಿಲ್ಲದಿದ್ದರೂ ಬಲು ಅಪಾಯಕಾರಿಯಾಗಿರುತ್ತದೆ. ಹೆಬ್ಬಾವು ಮನುಷ್ಯರನ್ನು ಕೂಡಾ ನುಂಗಿ ಬಿಡುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನು ಕೆಲವು ಹಾವುಗಳು ಯಾವ ರೀತಿಯಲ್ಲಿಯೂ ಅಪಾಯಕಾರಿಯಾಗಿರುವುದಿಲ್ಲ. ಅವು ನಿರುಪದ್ರವಗಳು. ಆದರೂ ಹಾವುಗಳನ್ನು ನೋಡುವಾಗಲೇ ಮೈ ಜುಮ್ಮೆನ್ನುತ್ತದೆ.  

ಈಸ್ಟರ್ನ್ ಬ್ರೌನ್ ಸ್ನೇಕ್ ಅನ್ನು ಸಾಮಾನ್ಯವಾಗಿ ಕಂದು ಹಾವು ಎಂದು ಕರೆಯಲಾಗುತ್ತದೆ. ಇದು ಹೆಚ್ಚು ವಿಷಕಾರಿ ಹಾವು. ಈ ಪ್ರಭೇದದ ಹಾವುಗಳು  ಪೂರ್ವ ಆಸ್ಟ್ರೇಲಿಯಾದಾದ್ಯಂತ ವ್ಯಾಪಕವಾಗಿ ಕಂಡು ಬರುತ್ತವೆ. ಈ ಕಾರಣದಿಂದಾಗಿ ಈ ಪ್ರದೇಶದಲ್ಲಿ ದೇಶದಲ್ಲಿ ಹಾವು ಕಡಿತದಿಂದಲೇ ಹೆಚ್ಚಿನವರು ಪ್ರಾಣ ಕಳೆದುಕೊಳ್ಳುತ್ತಾರೆ.  

ಇದನ್ನೂ ಓದಿ : White Crow Video: ನೀವು ಎಂದಾದ್ರೂ ಬಿಳಿ ಕಾಗೆ ನೋಡಿದ್ದೀರಾ? ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿತು ಈ ಅಪರೂಪದ ಪಕ್ಷಿ

 ಇದೀಗ ಈ ಹಾವಿಗೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಎರಡು ಹಾವುಗಳಿರುವುದನ್ನು ನೋಡಬಹುದು. ಒಂದು ಈಸ್ಟರ್ನ್ ಬ್ರೌನ್ ಸ್ನೇಕ್ ಮತ್ತು ಇನ್ನೊಂದು ಹೆಬ್ಬಾವು. ಇಲ್ಲಿ ಈ ಈಸ್ಟರ್ನ್ ಬ್ರೌನ್ ಸ್ನೇಕ್   ಹೆಬ್ಬಾವನ್ನೇ ನುಂಗುತ್ತಿರುವ ದೃಶ್ಯವನ್ನು ಕಾಣಬಹುದು. 

 

ಇದನ್ನೂ ಓದಿ : Video: ಸ್ವಚ್ಛ ಭಾರತ್ ಅಭಿಯಾನಕ್ಕೆ ಮಾದರಿ ಈ ನಾರಿ! ಹಾಡಿ ಹೊಗಳಿದ ಆನಂದ್ ಮಹೀಂದ್ರ

ಈ ವೀಡಿಯೊವನ್ನು ನ್ಯಾಷನಲ್ ಜಿಯಾಗ್ರಫಿಕ್‌ನ ಯೂಟ್ಯೂಬ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.    ವಿವಿಧ ಕಾಮೆಂಟ್‌ಗಳನ್ನು ಕೂಡಾ ಮಾಡುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News