ಬೆಂಗಳೂರು: 2019-2023 ರ ಅವಧಿಯ 04 ವರ್ಷಗಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಜೊತೆಗೆ 2013-2018 ರ 05 ವರ್ಷಗಳ ಅವಧಿಯಲ್ಲಿ ನಡೆದಿರುವ ಹಗರಣಗಳನ್ನೂ ಸಹ CID ತನಿಖೆಗೆ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಕೋರಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಪತ್ರ ಬರೆದಿದ್ದಾರೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ಮುಖ್ಯಮಂತ್ರಿಗಳಾದ ತಾವು ದಿನಾಂಕ 27/06/2023 ರಂದು 2019-2023 ರ 04 ವರ್ಷಗಳ ಅವಧಿಯಲ್ಲಿ ನಡೆದಿರುವ 1) ಬಿಟ್ ಕಾಯಿನ್ ಹಗರಣ, 2) ಪಿ.ಎಸ್.ಐ. ನೇಮಕಾತಿ ಅಕ್ರಮ, 3) ಸಹಾಯಕ ಪ್ರಧ್ಯಾಪಕರ ನೇಮಕಾತಿ ಹಗರಣ, 4) ಕೋವಿಡ್ ವೇಳೆ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಸಲಕರಣೆ, ಔಷಧಗಳ ಖರೀದಿ ಅಕ್ರಮ, 5) ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಹಗರಣಗಳು, 6) ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಬ್ಸಿಡಿ ಬಿಡುಗಡೆಯಲ್ಲಿ ಅಕ್ರಮ, 7) ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ, 8) ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತ ಮತ್ತು 9) ನೀರಾವರಿ ಯೋಜನೆಗಳ ಗುತ್ತಿಗೆಯಲ್ಲಿ ಕಮಿಷನ್ ದಂಧೆ ಮೊದಲಾದ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿವಿಧ ತನಿಖಾ ಸಂಸ್ಥೆಗಳ ತನಿಖೆಗೆ ವಹಿಸಿರುವುದನ್ನು ನಾವು ಸ್ವಾಗತಿಸುತ್ತೇವೆ.
ಇದನ್ನೂ ಓದಿ: Viral Video: ಗನ್ ಹಿಡಿದು ಜ್ಯುವೆಲರಿ ಶಾಪ್ಗೆ ನುಗ್ಗಿದ ದರೋಡೆಕೋರ; ಮುಂದೇನಾಯಿತು ನೀವೇ ನೋಡಿ..!
ಹಾಗೆಯೇ, ತಾವು ಪಾರದರ್ಶಕ ಆಡಳಿತ ಮತ್ತು ರಾಜಕೀಯ ಜೀವನವನ್ನು ನಡೆಸುತ್ತಿರುವುದು ನಿಜವೇ ಆಗಿದ್ದಲ್ಲಿ - ತಾವು ಈ ಹಿಂದೆ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ 2013-2018 ರ 05 ವರ್ಷಗಳ ಅವಧಿಯಲ್ಲಿ ನಡೆದಿರುವ ಈ ಕೆಳಕಂಡ ಯೋಜನೆಗಳನ್ನೂ ಸಹ CID ತನಿಖೆಗೆ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಅವುಗಳಲ್ಲಿ ಪ್ರಮುಖವಾದವು - 1) 800 ಕೋಟಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಕೃಷಿ ಭಾಗ್ಯ ಹಗರಣ, 2) 52 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿರುವ Underground Dust Bin ಹಗರಣ, 3) ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಇಂದಿರಾ ಕ್ಯಾಂಟೀನ್ ಗಳ ನಿರ್ಮಾಣದ ಹೆಸರಿನಲ್ಲಿ ನಡೆದಿರುವ 35 ಕೋಟಿ ಮೊತ್ತದ ಹಗರಣ, 4) ಇಂದಿರಾ ಕ್ಯಾಂಟೀನ್ ಗ್ರಾಹಕರ ಹೆಸರಿನಲ್ಲಿ ನಡೆದಿರುವ 560 ಕೋಟಿ ರೂಪಾಯಿ ಮೊತ್ತದ ಹಗರಣ, 5) 160 ಕೋಟಿ ರೂಪಾಯಿ ಮೊತ್ತದ LED ಬೀದಿ ದೀಪಗಳ ಹಗರಣ, 6) ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಹಗರಣ, 7) ಬನ್ನೇರುಘಟ್ಟ ರಸ್ತೆಯ ಬೇಗೂರು ಪ್ರದೇಶದಲ್ಲಿ 850 ಕೋಟಿ ಮೌಲ್ಯದ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಬೃಹತ್ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿರುವ DLF ಭೂ ಹಗರಣ, 8) 431 ಕೋಟಿ ರೂಪಾಯಿ ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿರುವ Karnataka State AIDS Prevention Society (KSAPS) ಹಗರಣ, 9) 158 ಕೋಟಿ ಮೊತ್ತದ ಭದ್ರ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಸಂಬಂಧಿಸಿದ ಅಕ್ರಮ ಟೆಂಡರ್ ಹಗರಣ ಸೇರಿದಂತೆ ಇನ್ನು ಹಲವು ಪ್ರಕರಣಗಳು..
ಇದನ್ನೂ ಓದಿ: ಜೋರು ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್ ಮಾಡಿದ ಕಪಲ್ಸ್; ವಿಡಿಯೋ ವೈರಲ್..!
10) ವಿಶ್ವೇಶ್ವರಯ್ಯ ಜಲ ನಿಗಮ ಮತ್ತು ಕಾವೇರಿ ಜಲ ನಿಗಮಗಳಲ್ಲಿ ನಡೆದಿರುವ ಹಗರಣ, 11) ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಹಾಸಿಗೆ ದಿಂಬುಗಳ ಹಗರಣ, 12) ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ನಡೆದಿರುವ 109 ಕೋಟಿ ಮೊತ್ತದ ಹಗರಣ, 13) ಕಾಮಗಾರಿಗಳನ್ನು ನಡೆಸದೆಯೇ ಪೂರ್ವ ನಿಗದಿತ ಗುತ್ತಿಗೆದಾರರಿಗೆ ಕಾನೂನು ಬಾಹಿರವಾಗಿ ಹಣ ಬಿಡುಗಡೆ ಮಾಡಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ 153 ಕೋಟಿ ರೂಪಾಯಿ ಮೊತ್ತದ ಹಗರಣ, 14) ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಹೆಸರಿನಲ್ಲಿ ನಡೆದಿರುವ 1,016 ಕೋಟಿ ಮೊತ್ತದ ಹಗರಣ, 15) ಬಿಬಿಎಂಪಿ ವ್ಯಾಪ್ತಿಯ 439 Bus Shelter ಗಳನ್ನು ತಮ್ಮ ಪಕ್ಷದ ಮತ್ತು ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಕ್ಕಾಗಿ ಬಳಸಿಕೊಂಡು 35 ಕೋಟಿ ರೂಪಾಯಿ ಜಾಹೀರಾತು ಶುಲ್ಕ ವಂಚಿಸಿರುವ ಹಗರಣ, 16) ಭಕ್ತಾಧಿಗಳ ಅನ್ನ ದಾಸೋಹ ಕಾರ್ಯಕ್ರಮ ಮತ್ತು ಮಹದೇಶ್ವರ ದೇವಸ್ಥಾನದ ಬಸ್ ಗಳ ನಿರ್ವಹಣೆಯ ಹೆಸರಿನಲ್ಲಿ ನಡೆದಿರುವ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ 40 ಕೋಟಿ ಮೊತ್ತದ ಹಗರಣ, 17) KRIDL ಸಂಸ್ಥೆಯ ಮೂಲಕ ನಡೆದಿರುವ 12,934 ಕೋಟಿ ಮೊತ್ತದ ಹಗರಣ, 18) ರಾಜಕಾಲುವೆಗಳಲ್ಲಿ ಹೂಳೆತ್ತುವ ಹೆಸರಿನಲ್ಲಿ ನಡೆದಿರುವ ನೂರಾರು ಕೋಟಿ ಮೊತ್ತದ ಹಗರಣ, 19) 1,463 ಕೋಟಿ ರೂಪಾಯಿ ಮೊತ್ತದ NUHM ಹಗರಣ ಮತ್ತು 20) 400 ಕೋಟಿಗೂ ಹೆಚ್ಚು ಹಣ ದುರ್ಬಳಕೆ ಮಾಡಿಕೊಂಡಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಗರಣಗಳು
ಈ ಮೇಲೆ ತಿಳಿಸಿರುವ ಎಲ್ಲಾ ಹಗರಣಗಳನ್ನೂ ಸಹ ತಾವು CID ತನಿಖೆಗೆ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸುವ ಸಂಬಂಧ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಮೂಲಕ ತಾವು ನಿಷ್ಪಕ್ಷಪಾತ / ಪ್ರಾಮಾಣಿಕ ರಾಜಕಾರಣಿ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ವಿ. ಸೂ:- ಮೇಲೆ ತಿಳಿಸಿರುವ 20 ಪ್ರಮುಖ ಹಗರಣಗಳಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ತಮ್ಮ ಅಧಿಕೃತ ಕಛೇರಿಗೆ ಈಗಾಗಲೇ ನೀಡಲಾಗಿದೆ.