How to Neutralize Salt in Food : ಅಡುಗೆ ಮಾಡುವುದು ದೈನಂದಿನ ಪ್ರಕ್ರಿಯೆ. ಅಡುಗೆ ಎನ್ನುವುದು ಒಂದು ಕಲೆ. ಆ ಕಲೆ ಎಲ್ಲರಿಗೂ ಬರುವುದಿಲ್ಲ. ಎಷ್ಟೋ ಸಲ ಮುಂಜಾನೆಯ ಗಡಿಬಿಡಿಯಲ್ಲಿ ಅಡುಗೆಗೆ ಕೆಲವು ಮಸಾಲೆ ಜಾಸ್ತಿಯಾಗಬಹುದು. ಅಡುಗೆಗೆ ಉಪು ಹೆಚ್ಚಾಗುವುದು ಸಾಮಾನ್ಯ. ಹೀಗೆ ಉಪ್ಪು ಹೆಚ್ಚಾಯಿತು ಎಂದ ಕೂಡಲೇ ಹೆಚ್ಚಿನವರು ತೆಗೆದುಕೊಳ್ಳುವ ಕ್ರಮ ಎಂದರೆ ನೀರು ಸೇರಿಸಿ ಬಿಡುವುದು. ಆದರೆ ಇದು ರುಚಿಯನ್ನು ಕೆಡಿಸಿ ಬಿಡುತ್ತದೆ. ಈ ಸಂದರ್ಭದಲ್ಲಿ ಪ್ರಯತ್ನಿಸಬಹುದಾದ ಅತ್ಯುತ್ತಮ ಕಿಚನ್ ಹ್ಯಾಕ್ಗಳಿವೆ. ಇದನ್ನು ಅಳವಡಿಸಿದರೆ ರುಚಿ ಹಾಳಾಗದಂತೆ ಅಡುಗೆಯ ಹದವನ್ನು ಉಳಿಸಬಹುದು.
ಅಡುಗೆಗೆ ಉಪ್ಪು ಹೆಚ್ಚಾದರೆ ಏನು ಮಾಡಬೇಕು? :
1. ನಿಂಬೆ ರಸ:
ಅಡುಗೆಗೆ ಉಪ್ಪು ಹೆಚ್ಚಾದರೆ ಅದನ್ನು ಸರಿದೂಗಿಸಲು ನಿಂಬೆ ರಸ ಅಥವಾ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಬಹುದು. ಇವೆರಡೂ ಅತ್ಯುತ್ತಮವಾದ ಆಯ್ಕೆಗಳಾಗಿವೆ.
ಇದನ್ನೂ ಓದಿ : ಈ ಬೀಜಗಳನ್ನು ಒಂದು ವಾರ ಸೇವಿಸಿ ! ಉದುರುವ ಕೂದಲಿಗೆ ಶಾಶ್ವತ ಪರಿಹಾರ ಗ್ಯಾರಂಟಿ
2. ಟೊಮೇಟೊ :
ಟೊಮೇಟೊ ಅಡುಗೆಯ ರುಚಿಯನ್ನು ಹಾಳು ಮಾಡುವುದಿಲ್ಲ, ಬದಲಿಗೆ ಅದು ಇನ್ನಷ್ಟು ಉತ್ತಮವಾಗಿಸುತ್ತದೆ. ಟೊಮೇಟೊ ಹೆಚ್ಚಿನ ಉಪ್ಪಿನ ಪರಿಣಾಮವು ತಟಸ್ಥಗೊಳಿಸುತ್ತದೆ. ಮನೆಯಲ್ಲಿ ಟೊಮೆಟೊ ಇಲ್ಲದಿದ್ದರೆ, ಟೊಮೆಟೊ ಸಾಸ್ ಅನ್ನು ಸಹ ಬಳಸಬಹುದು.
3. ಸಾಂಬಾರ ಪದಾರ್ಥಗಳು:
ಸಾಂಬಾರ ಪದಾರ್ಥಗಳನ್ನು ಬಹುತೇಕ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ. ಒಂದು ವೇಳೆ ಅಡುಗೆಗೆ ಉಪ್ಪು ಹೆಚ್ಚಾಗಿದ್ದರೆ ಅದನ್ನು ಸರಿದೂಗಿಸಲು ಸ್ವಲ್ಪ ಮಸಾಲೆಯನ್ನು ಸೇರಿಸಬಹುದು. ಈ ಮೂಲಕ ಉಪ್ಪನ್ನು ಮತ್ತೆ ಸರಿ ಮಾಡಬಹುದು.
ಇದನ್ನೂ ಓದಿ : ರವೆ ಅಕ್ಕಿ ಹಿಟ್ಟಿನಲ್ಲಿ ಈರುಳ್ಳಿ ದೋಸೆ ಮಾಡಿ, ರೆಸಿಪಿ ಕೂಡ ತುಂಬಾನೇ ಸುಲಭ
4. ಹಾಲಿನ ಉತ್ಪನ್ನ:
ಇನ್ನು ಹಾಲಿನ ಉತ್ಪನ್ನಗಳನ್ನು ಮಿಶ್ರಣ ಮಾಡುವುದರಿಂದ ಕೂಡಾ ಉಪ್ಪಿನ ಹದವನ್ನು ಸರಿ ಮಾಡಬಹುದು. ಕೆನೆ, ಪನೀರ್, ಹುಳಿ ಕ್ರೀಮ್ ಮುಂತಾದವುಗಳನ್ನು ಬಳಸಿ ಅಡುಗೆಯಲ್ಲಿ ಹೆಚ್ಚಾಗಿರುವ ಉಪ್ಪನ್ನು ಸರಿ ಮಾಡಬಹುದು. ಇದಲ್ಲದೆ, ತೆಂಗಿನ ಹಾಲು ಕೂಡಾ ಅತ್ಯುತ್ತಮ ಆಯ್ಕೆಯಾಗಿದೆ.
6. ಹಸಿ ಆಲೂಗೆಡ್ಡೆ:
ಆಲೂಗಡ್ಡೆಯನ್ನು ಹೇಗೆ ಬಳಸಿದರೂ ಅದು ಅಡುಗೆಯ ರುಚಿ ಹೆಚ್ಚಿಸುತ್ತದೆ. ಇನ್ನು ಅಡುಗೆಗೆ ಉಪ್ಪು ಹೆಚ್ಚಾಗಿದ್ದರೆ ತಕ್ಷಣ ಹಸಿ ಆಲೂಗಡ್ಡೆಯನ್ನು ಸೇರಿಸಿ ಸ್ವಲ್ಪ ಸಮಯದವರೆಗೆ ಗ್ಯಾಸ್ ಆನ್ ಮಾಡಿ. ಹೀಗೆ ಮಾಡುವುದರಿಂದ ಆಲೂಗಡ್ಡೆಯು ಅಡುಗೆಯಲ್ಲಿರುವ ಹೆಚ್ಕ್ಬುಇವರಿ ಉಪ್ಪನ್ನು ಹೀರಿಕೊಳ್ಳುತ್ತದೆ.
ಇದನ್ನೂ ಓದಿ : ಕೂದಲು ಉದುರುವಿಕೆಗೆ ರಾಮಬಾಣ ಈ ಕಪ್ಪು ಹಣ್ಣು
7. ಅನ್ನ:
ದಾಲ್ ಅಥವಾ ಗ್ರೇವಿ ರೆಸಿಪಿಗಳಲ್ಲಿ ಉಪ್ಪು ಹೆಚ್ಚಾಗಿದ್ದರೆ ಅನ್ನವನ್ನು ಉಂಡೆಯಾಗಿ ಮಾಡಿ ಅದನ್ನು ಸ್ವಲ್ಪ ಸಮಯದವರೆಗೆ ಆ ಆಹಾರದಲ್ಲಿ ಹಾಕಿ. ಈ ಅನ್ನದ ಉಂಡೆಗಳು ಅದುಗೆಯಲ್ಲಿರುವ ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತವೆ.
( ಸೂಚನೆ : ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ಕೇವಲ ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ನಾವು ಇದನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.