ಬೆಂಗಳೂರು : ಬೊಜ್ಜು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ತಪ್ಪು ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಒತ್ತಡ ಇತ್ಯಾದಿಗಳಿಂದ ಹೆಚ್ಚಿನ ಜನರ ದೇಹದ ತೂಕ ಹೆಚ್ಚುತ್ತಲೇ ಇದೆ. ದೇಹದ ತೂಕ ಹೆಚ್ಚಾಗುವುದರಿಂದ, ಇತರ ಅನೇಕ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ, ಸರಿಯಾದ ದೇಹ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಜನರು ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುತ್ತಾರೆ ಮತ್ತು ಕಠಿಣ ವ್ಯಾಯಾಮ ಮಾಡುತ್ತಾರೆ. ಕೆಲವರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಆದರೆ, ಇದು ಎಲ್ಲರಿಗೂ ಸಾಧ್ಯವಿಲ್ಲ. ಅಂಥವರು ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು.
ತೂಕ ನಷ್ಟಕ್ಕೆ ಪಪ್ಪಾಯ :
ಪಪ್ಪಾಯ ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣು. ಇದರಲ್ಲಿ ನೀರು ಮತ್ತು ನಾರಿನಂಶ ಅಧಿಕವಾಗಿದೆ. ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪಪ್ಪಾಯವನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಪಪ್ಪಾಯದಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳಿವೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಬಯಸುವುದಾದರೆ ಪಪ್ಪಾಯವನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಇದನ್ನೂ ಓದಿ : ಈ 2 ಮನೆಮದ್ದುಗಳಿಂದ 15 ದಿನಗಳಲ್ಲಿ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ!
ನಿತ್ಯ ಪಪ್ಪಾಯ ಸೇವಿಸುತ್ತಾ ಬಂದರೆ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವುದಲ್ಲದೆ ಬೊಜ್ಜನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಹೌದು, ಪಪ್ಪಾಯವನ್ನು ತೂಕ ನಷ್ಟಕ್ಕೆ ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ಹಾಗಾದರೆ ಪಪ್ಪಾಯದ ಸಹಾಯದಿಂದ ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.
ಪಪ್ಪಾಯ ಅತ್ಯಂತ ಕಡಿಮೆ ಕ್ಯಾಲೋರಿ ಹಣ್ಣು ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬಹಳ ಸಮಯದ ನಂತರವೂ ಹೊಟ್ಟೆ ತುಂಬಿದ ಹಾಗೆಯೇ ಇರುತ್ತದೆ. ಹಾಗಾಗಿ ಇಡೀ ದಿನ ಬಾಯಿ ಆಡಿಸುತ್ತಿರುವ ಅಗತ್ಯ ಇರುವುದಿಲ್ಲ. ಪಪ್ಪಾಯ ಹಣ್ಣಿನಲ್ಲಿ ಕ್ಯಾಲೋರಿ ಕಡಿಮೆ ಇರುವುದರ ಹೊರತಾಗಿ ಅನೇಕ ವಿಟಮಿನ್ ಗಳೂ ಇವೆ. ಪಪ್ಪಾಯದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ :ಚರ್ಮದ ಎಲ್ಲಾ ಸಮಸ್ಯೆಗಳಿಗೆ ಪರ್ಫೆಕ್ಟ್ ಮನೆಮದ್ದು ಈ ನೀರು..ಟ್ರೈ ಮಾಡಿ ನೋಡಿ!!
ಪಪ್ಪಾಯ ನೀರು ಭರಿತ ಹಣ್ಣು. 100 ಗ್ರಾಂ ಪಪ್ಪಾಯದಲ್ಲಿ ಶೇಕಡಾ 88 ರಷ್ಟು ನೀರು ಇರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುವುದು ಮಾತ್ರವಲ್ಲದೆ ದೇಹದಿಂದ ವಿಷವನ್ನು ಹೊರಹಾಕುತ್ತದೆ.
ಇದಲ್ಲದೆ, ಪಪ್ಪಾಯ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. ಪಪ್ಪಾಯ ಹಣ್ಣಿನಲ್ಲಿ ಪಪೈನ್ ಎಂಬ ಕಿಣ್ವವಿರುತ್ತದೆ. ಇದು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮತ್ತು ಕೊಬ್ಬು ಸಂಗ್ರಹವಾಗಲು ಬಿಡುವುದಿಲ್ಲ.
ಪಪ್ಪಾಯ ಹಣ್ಣಿನ ಜ್ಯೂಸ್ :
ನೀವು ತೂಕ ಇಳಿಸಿಕೊಳ್ಳಬೇಕಾದರೆ ಪಪ್ಪಾಯ ರಸವನ್ನು ಕುಡಿಯಬಹುದು. ಇದರಲ್ಲಿರುವ ಪೋಷಕಾಂಶಗಳು ದೇಹದ ಕೊಬ್ಬನ್ನು ಕಡಿಮೆ ಮಾಡಿ ಫಿಟ್ ನೆಸ್ ಸುಧಾರಿಸುತ್ತದೆ. ಪಪ್ಪಾಯ ಜ್ಯೂಸ್ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ :ದೇಹದಲ್ಲಿ ಹಿಮೋಗ್ಲೋಬಿನ್ ಅಥವಾ ರಕ್ತದ ಕೊರೆತೆ ಇದ್ದರೆ, ಈ ಸುಲಭ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ!
ನಿತ್ಯ ಉಪಹಾರದಲ್ಲಿ ಪಪ್ಪಾಯಕ್ಕಿರಲಿ ಜಾಗ :
ತೂಕ ಇಳಿಸಿಕೊಳ್ಳಲು ಬೆಳಗಿನ ಉಪಾಹಾರದಲ್ಲಿ ಪಪ್ಪಾಯವನ್ನು ಸೇರಿಸಬೇಕು. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಪಪ್ಪಾಯವನ್ನು ತುಂಡುಗಳಾಗಿ ಕತ್ತರಿಸಿ ಅದಕ್ಕೆ ಬ್ಲಾಕ್ ಸಾಲ್ಟ್ ಮತ್ತು ಕರಿಮೆಣಸು ಸೇರಿಸಿ ಬೆಳಗಿನ ಉಪಾಹಾರದಲ್ಲಿ ಸೇವಿಸಿ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.