ಬೆಂಗಳೂರು : ತೂಕ ಹೆಚ್ಚಾಗುವುದು ನಮ್ಮಲ್ಲಿ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವುದು ಹೇಗೆ? ಆಹಾರದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬೇಕು ಎನ್ನುವ ಬಗ್ಗೆ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಆರೋಗ್ಯಕರ ಆಹಾರವು ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಅನೇಕ ಜನರಿಗೆ ಆರೋಗ್ಯಕರ ಆಹಾರವನ್ನು ಅನುಸರಿಸುವುದು ತುಂಬಾ ಕಷ್ಟ. ಯಾಕೆಂದರೆ ಬಹುತೇಕ ಮಂದಿಗೆ ಆಹಾರದ ಮೇಲೆ ನಿಯಂತ್ರಣ ಹೊಂದುವುದು ಸಾಧ್ಯವಾಗುವುದಿಲ್ಲ. ಅಂತಹವರಿಗೆ ತೂಕ ಇಳಿಸಿಕೊಳ್ಳುವುದು ಒಂದು ಸವಾಲಾಗಿ ತೋರುತ್ತದೆ. ಆದರೆ, ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.
ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವ ಮತ್ತು ತೂಕವನ್ನು ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ, ನಮ್ಮ ಅಡುಗೆ ಮನೆಯು ಸಂಪತ್ತಿನ ಖಜಾನೆಯಾಗಿದೆ. ನಮ್ಮ ಅಡುಗೆಯಲ್ಲಿ ಬಳಸುವ ಅನೇಕ ಆಹಾರ ಪದಾರ್ಥಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇವು ನಮ್ಮ ದೇಹದಲ್ಲಿನ ಕೊಬ್ಬನ್ನು ಬರ್ನ್ ಮಾಡುವಲ್ಲಿ ಸಹಾಯ ಮಾಡುತ್ತದೆ. ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಅನೇಕ ಪದಾರ್ಥಗಳು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಕೊಲೆಸ್ಟ್ರಾಲ್ ಕಂಟ್ರೋಲ್, ಹೃದಯದ ಆರೋಗ್ಯಕ್ಕಾಗಿ ಈ ಡಯಟ್ ಚಾರ್ಟ್ ಅಳವಡಿಸಿಕೊಳ್ಳಿ
ತೂಕ ನಷ್ಟಕ್ಕೆ ಮನೆಮದ್ದು :
ಮೆಂತ್ಯೆ :
ಮೆಂತ್ಯೆ ಬೀಜಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹಿಡಿದು ತೂಕ ನಷ್ಟದವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿವೆ. ಈ ಕಾಳುಗಳು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಬಹುದು. ಅದರಲ್ಲೂ ಮೆಂತ್ಯೆ ಬೀಜಗಳನ್ನು ಎರಡು ರೀತಿಯಲ್ಲಿ ಸೇವಿಸುವುದು ತೂಕ ನಷ್ಟಕ್ಕೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಿಗ್ಗೆ ಆ ನೀರನ್ನು ಕುಡಿಯುವುದು. ಅಥವಾ ನೆನೆಸಿದ ಕಾಳುಗಳನ್ನು ನೀರಿನಲ್ಲಿ ಕುದಿಸಿ ಚಹಾ ರೀತಿಯಲ್ಲಿ ಕುಡಿಯಬಹುದು. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.
ಬೆಳ್ಳುಳ್ಳಿ:
ತೂಕ ಇಳಿಸಿಕೊಳ್ಳಲು ಬೆಳ್ಳುಳ್ಳಿಯನ್ನೂ ತಿನ್ನಬಹುದು. ಬೆಳ್ಳುಳ್ಳಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಪ್ರತಿದಿನ ಒಂದು ಎಸಳು ಹಸಿ ಬೆಳ್ಳುಳ್ಳಿಯನ್ನು ಸೇವಿಸಬೇಕು. ಇದಲ್ಲದೆ, ಇದನ್ನು ತರಕಾರಿಗಳು, ಸಲಾಡ್ ಮತ್ತು ಸೂಪ್ ಗಳಿಗೆ ಸೇರಿಸಿ ಕೂಡಾ ಸೇವಿಸಬಹುದು.
ಇದನ್ನೂ ಓದಿ : ಹಲ್ಲುಗಳ ಮೇಲೆ ಅಂಟಿ ಕುಳಿತಿರುವ ಹಳದಿ ಕಲೆಗಳನ್ನು ಹೋಗಲಾಡಿಸಬೇಕೇ ? ಈ ಹಣ್ಣುಗಳನ್ನು ಪ್ರಯತ್ನಿಸಿ
ಚಕ್ಕೆ :
ಅರ್ಧದಿಂದ ಒಂದು ಚಮಚದಷ್ಟಾಗುವಷ್ಟು ಚಕ್ಕೆ ಪುಡಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಪ್ರತಿದಿನ ಈ ನೀರನ್ನು ಸೇವಿಸುವುದರಿಂದ ಬೊಜ್ಜು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಚಕ್ಕೆ ಚಯಾಪಚಯ ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕೂಡಾ ಕಂಟ್ರೋಲ್ ಮಾಡುತ್ತದೆ.
ಶುಂಠಿ :
ನಿಮ್ಮ ದೇಹದಲ್ಲಿ ನೋವು ಇದ್ದರೆ, ಅಜೀರ್ಣ ಸಮಸ್ಯೆ ಇದ್ದರೆ ಅಥವಾ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಶುಂಠಿಯನ್ನು ಸೇವಿಸಬಹುದು. ಶುಂಠಿಯಲ್ಲಿರುವ ಕೊಬ್ಬನ್ನು ಸುಡುವ ಗುಣಲಕ್ಷಣಗಳು ಅವುಗಳ ಪರಿಣಾಮವನ್ನು ತ್ವರಿತವಾಗಿ ತೋರಿಸುತ್ತವೆ. ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಕಪ್ ನೀರಿನಲ್ಲಿ ಕುದಿಸಿ. ಈ ನೀರನ್ನು ಚಹಾದಂತೆ ಕುಡಿಯಿರಿ.
ಜೀರಿಗೆ :
ತೂಕ ನಷ್ಟಕ್ಕೆ ಜೀರಿಗೆ ನೀರು ಉಪಯುಕ್ತವಾಗಿದೆ. ಈ ನೀರನ್ನು ತಯಾರಿಸಲು ಅರ್ಧ ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ. ಈ ನೀರನ್ನು ಬೆಚ್ಚಗಿರುವಾಗಲೇ ಕುಡಿಯಿರಿ. ಜೀರಿಗೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಆ ನೀರನ್ನು ಕುಡಿಯವುದು ಕೂಡಾ ಪ್ರಯೋಜನಕಾರಿ.
ಇದನ್ನೂ ಓದಿ : ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ- ಯೋಗಕ್ಷೇಮ ಕಾಪಾಡುವಲ್ಲಿ ಶಾಲೆಗಳ ಪಾತ್ರ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.