T20 World Cup 2024: ಪ್ರಸಕ್ತ ಸಾಲಿನ ಟಿ-20 ವಿಶ್ವಕಪ್ ಟೂರ್ನಿ ಹಲವಾರು ರೋಚಕತೆಗಳಿಗೆ ಸಾಕ್ಷಿಯಾಗಿದೆ. ಈ ಟೂರ್ನಿ ಹಲವಾರು ಅಚ್ಚರಿಯ ಫಲಿತಾಂಶಗಳನ್ನು ನೀಡಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದೆ. ಕ್ರಿಕೆಟ್ ಶಿಶುಗಳ ಎದುರೇ ಬಲಿಷ್ಠ ತಂಡಗಳು ಮಣ್ಣುಮುಕ್ಕಿವೆ. ಇನ್ನೇನು ಗುಂಪು ಹಂತದ ಪಂದ್ಯಗಳು ಮುಗಿಯುತ್ತಿದ್ದು, ಸೂಪರ್-8ಕ್ಕೆ ಆರ್ಹತೆ ಪಡೆಯಲು ಕೆಲವು ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಈಗಾಗ 3ಕ್ಕೆ 3 ಪಂದ್ಯಗಳಲ್ಲಿ ಸೋಲು ಕಂಡಿರುವ ʼBʼ ಗುಂಪಿನಲ್ಲಿರುವ ಒಮನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಇದೀಗ ಮತ್ತೊಂದು ವಿಶ್ವ ಚಾಂಪಿಯನ್ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಕ್ರಿಕೆಟ್ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್ ಆಗಲಿದೆ. ʼDʼ ಗುಂಪಿನಲ್ಲಿರುವ ಈ ತಂಡವು ಸೂಪರ್-8 ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.
ಇದನ್ನೂ ಓದಿ: T20 World Cup 2024: ನ್ಯೂಜಿಲಾಂಡ್ ವಿರುದ್ಧ ಅಬ್ಬರಿಸಿದ ವೆಸ್ಟ್ ಇಂಡೀಸ್: ನ್ಯೂಜಿಲಾಂಡ್ಗೆ ಶುರುವಾಯ್ತು ಢವ ಢವ.
ಲಂಕಾಗೆ ವಿಲನ್ ಆದ ಮಳೆ!
3 ಪಂದ್ಯಗಳನ್ನು ಆಡಿರುವ ಮಾಜಿ ಚಾಂಪಿಯನ್ ಶ್ರೀಲಂಕಾ 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, 1 ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಕೇವಲ 1 ಅಂಕ ಹೊಂದಿರುವ ಲಂಕಾ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ ಸಹ ಸೂಪರ್-8 ತಲುಪುವುದು ಕಷ್ಟವಾಗಲಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಮತ್ತು ನೇಪಾಳ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಪರಿಣಾಮ ಲಂಕಾ ಸೂಪರ್-8 ತಲುಪುವ ಆಸೆ ಬಹುತೇಕ ಅಂತ್ಯಗೊಂಡಿದೆ. ಈ ಗ್ರೂಪ್ನಲ್ಲಿ ನೆದರ್ಲೆಂಡ್ಸ್-ಬಾಂಗ್ಲಾದೇಶ ತಲಾ 2 ಅಂಕಗಳನ್ನು ಹೊಂದಿವೆ. ಉಭಯ ತಂಡಗಳ ನಡುವೆ ಪಂದ್ಯ ನಡೆಯಬೇಕಿದ್ದು, ಇದರಲ್ಲಿ ಯಾರೇ ಗೆದ್ದರೂ ಶ್ರೀಲಂಕಾವನ್ನು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಪಾಕಿಸ್ತಾನ, ಇಂಗ್ಲೆಂಡ್ & ನ್ಯೂಜಿಲ್ಯಾಂಡ್ಗೂ ಸಂಕಷ್ಟ!
ಈ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ತಂಡಗಳಿಗೆ ಬಹುದೊಡ್ಡ ಸಂಕಷ್ಟ ಎದುರಾಗಲಿವೆ. ಗ್ರೂಪ್ ʼAʼನಲ್ಲಿ 3ಕ್ಕೆ 3 ಪಂದ್ಯ ಗೆದ್ದಿರುವ ಟೀ ಇಂಡಿಯಾ ಸೂಪರ್ ೮ಕ್ಕೆ ಅರ್ಹತೆ ಪಡೆದುಕೊಂಡಿದೆ. ನಾಳೆ ಐರ್ಲೆಂಡ್ ವಿರುದ್ಧ ಅಮೆರಿಕ ಗೆಲುವು ಸಾಧಿಸಿದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗ್ರೂಪ್ ʼBʼನಲ್ಲಿ 3ಕ್ಕೆ 3 ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡವು ಸೂಪರ್ 8ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ 2 ಪಂದ್ಯಗಳಲ್ಲಿ 1 ಸೋಲು ಅನುಭವಿಸಿರುವ ಇಂಗ್ಲೆಂಡ್ ಮುಂದಿನ 2 ಪಂದ್ಯಗಳಲ್ಲಿ ಹೆಚ್ಚಿನ ರನ್ರೇಟ್ ಮೂಲಕ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. 1 ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಆಂಗ್ಲರಿಗೆ ಸಂಕಷ್ಟವುಂಟಾಗಿದೆ. ಹೀಗಾಗಿ ಮುಂದಿನ 2 ಪಂದ್ಯಗಳಲ್ಲಿ ಹೆಚ್ಚಿನ ರನ್ರೇಟ್ ಮೂಲಕ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಇದನ್ನೂ ಓದಿ: ಮಿಂಚಿದ ಅರ್ಶ್ದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ಯುಎಸ್ ವಿರುದ್ಧ ಟೀಮ್ ಇಂಡಿಯಾ ಗೆ 7 ವಿಕೆಟ್ ಗಳ ಜಯ
ಇನ್ನು ಗ್ರೂಪ್ ʼCʼನಲ್ಲಿ 3ಕ್ಕೆ 3 ಗೆಲುವು ಸಾಧಿಸಿರುವ ವೆಸ್ಟ್ ಇಂಡೀಸ್ ಸೂಪರ್ 8ಕ್ಕೆ ಅರ್ಹತೆ ಗಳಿಸಿದೆ. ಆದರೆ 2ಕ್ಕೆ 2 ಸೋಲು ಕಂಡಿರುವ ನ್ಯೂಜಿಲ್ಯಾಂಡ್ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಆಡಿರುವ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ ಬಾಕಿ ಇರುವ 2 ಪಂದ್ಯಗಳ ಪೈಕಿ 1ರಲ್ಲಿ ಗೆಲುವು ಸಾಧಿಸಿದರೆ ಸೂಪರ್ 8ಕ್ಕೆ ಅರ್ಹತೆ ಪಡೆಯಲಿದ್ದು, ಕಿವೀಸ್ ಅಧಿಕೃತವಾಗಿ ಔಟ್ ಆಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.