ನವದೆಹಲಿ: ನಟ ಅಭಿಷೇಕ್ ಬಚ್ಚನ್ ಮತ್ತು ಅವರ ಸಹೋದರಿ ಶ್ವೇತಾ ಬಚ್ಚನ್ ನಂದಾ ಅವರು ತಮ್ಮ ತಾಯಿ ಮತ್ತು ಹಿರಿಯ ನಟ ಜಯ ಬಚ್ಚನ್ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ಈಗ ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ತಾಯಿ ಜಯಾ ಬಚ್ಚನ್ ಅವರು ದೆಹಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.ಈ ವಿಷಯವನ್ನು ಮಗ ಅಭಿಷೇಕ್ ಬಚ್ಚನ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.ಅವರು ಗುರುವಾರ ಮುಂಜಾನೆ ತಾಯಿ ಜಯ ಅವರ 72 ನೇ ಹುಟ್ಟುಹಬ್ಬದ ನಿಮಿತ್ತ ಪೋಟೋವನ್ನು ಹಂಚಿಕೊಂಡಿದ್ದಾರೆ, ಲಾಕ್‌ಡೌನ್‌ನಿಂದಾಗಿ ಅವರು ಬೇರೆ ನಗರದಲ್ಲಿದದ್ದರಿಂದಾಗಿ ಅವರನ್ನು ಮಿಸ್ ಮಾಡಿಕೊಂಡಿರುವುದಾಗಿ ಅಭಿಷೇಕ್ ಬಚ್ಚನ್ ಬರೆದುಕೊಂಡಿದ್ದಾರೆ.
ಪ್ರತಿ ಮಗು ನಿಮಗೆ ಹೇಳುವಂತೆ, ಅವರ ನೆಚ್ಚಿನ ಪದವೆಂದರೆ...ಮಾ ! ಜನ್ಮದಿನದ ಶುಭಾಶಯಗಳು, ಮಾ, ಲಾಕ್ ಡೌನ್ ನಿಂದಾಗಿ ನೀವು ದೆಹಲಿಯಲ್ಲಿದ್ದರೂ ಮತ್ತು ನಾವೆಲ್ಲರೂ ಮುಂಬೈನಲ್ಲಿದ್ದರೂ, ನಾವು ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆಂದು ತಿಳಿದುಕೊಳ್ಳಿ ಮತ್ತು ನಿಮ್ಮನ್ನು ನಮ್ಮ ಹೃದಯದಲ್ಲಿ ಸಾಗಿಸುತ್ತೇವೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಎಂದು ಅವರು ಬರೆದಿದ್ದಾರೆ. ಅಭಿಮಾನಿಯೊಬ್ಬರು, ಎಂತಹ ಸುಂದರ ಚಿತ್ರ !!! ಜನ್ಮದಿನದ ಶುಭಾಶಯಗಳು." ಇನ್ನೊಬ್ಬರು "ಜನ್ಮದಿನದ ಶುಭಾಶಯಗಳು ಜಯಾ ಆಂಟಿ" ಎಂದು ಬರೆದಿದ್ದಾರೆ.
ಸಹೋದರಿ ಶ್ವೇತಾ ಅವರು, ಜಯಾ ಮತ್ತು ಅಭಿಷೇಕ್ ಅವರ ಬಾಲ್ಯದ ಚಿತ್ರವನ್ನು ಹಂಚಿಕೊಂಡು ತಾಯಿ ಜಯಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.