ನವದೆಹಲಿ: iPhone 12 ಅನ್ನು ಬಿಡುಗಡೆ ಮಾಡಿ ಇನ್ನೂ 6 ತಿಂಗಳು ಪೂರ್ಣಗೊಂಡಿಲ್ಲ, ಆದರೆ ಹೊಸ ಹ್ಯಾಂಡ್ಸೆಟ್ಗಳ ಬಿಡುಗಡೆ ಬಗ್ಗೆ ಮಾತುಕತೆ ಪ್ರಾರಂಭವಾಗಿದೆ. ಟೆಕ್ ದೈತ್ಯ ಆಪಲ್ ಈ ವರ್ಷ ಐಫೋನ್ 13 (iPhone 13) ಅನ್ನು ಬಿಡುಗಡೆ ಮಾಡಬಹುದು. ಐಫೋನ್ 13 ಇದುವರೆಗಿನ ತೆಳ್ಳನೆಯ ಸ್ಮಾರ್ಟ್ಫೋನ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಹೊಸ ಐಫೋನ್ 13 ರ ವಿಶೇಷತೆ ಏನೆಂದು ತಿಳಿಯಿರಿ.
ತೆಳುವಾದ ಐಫೋನ್ :
ಟೆಕ್ ಸೈಟ್ ಮ್ಯಾಕ್ ಒಟಕಾರಾ ಪ್ರಕಾರ ಐಫೋನ್ (iPhone) 13 ರ ವಿನ್ಯಾಸವು ಎಲ್ಲಾ ಹಳೆಯ ಹ್ಯಾಂಡ್ಸೆಟ್ಗಳಿಗಿಂತ ಉತ್ತಮವಾಗಿರುತ್ತದೆ. ಆಪಲ್ ತನ್ನ ಹೊಸ ಸ್ಮಾರ್ಟ್ಫೋನ್ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಹೊಸ ಐಫೋನ್ 13 ಅತ್ಯಂತ ಸ್ಲಿಮ್ ಆಗಿರಲಿದೆ. ಅದರ edge ಬಗ್ಗೆ ಅದು 0.26 ಮಿಮೀ ಆಗಿರಬಹುದು ಎಂದು ಹೇಳಲಾಗುತ್ತಿದೆ. ಐಫೋನ್ 13 ಐಫೋನ್ 12 ಗಿಂತ ಬಲವಾದ ಬ್ಯಾಟರಿ ಹೊಂದಿರುತ್ತದೆ ಎಂದು ಸಹ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : Flipkart Big Saving Days: ಕಡಿಮೆ ದರದಲ್ಲಿ iPhone ಖರೀದಿಸಿ, ಸಿಗಲಿದೆ 26 ಸಾವಿರ ಡಿಸ್ಕೌಂಟ್
ಫ್ರಂಟ್ ಸ್ಪೀಕರ್ ಅನ್ನು ತೆಗೆದುಹಾಕಲಾಗುತ್ತದೆ :
ಲಭ್ಯವಿರುವ ಮಾಹಿತಿಯ ಪ್ರಕಾರ, ಹೊಸ ಐಫೋನ್ 13 ರಲ್ಲಿ ಫ್ರಂಟ್ ಸ್ಪೀಕರ್ ಅನ್ನು ತೆಗೆದುಹಾಕಬಹುದು. ಇಲ್ಲಿಯವರೆಗೆ ಆಪಲ್ ತನ್ನ ಎಲ್ಲಾ ಹ್ಯಾಂಡ್ಸೆಟ್ಗಳಲ್ಲಿ ಫ್ರಂಟ್ ಸ್ಪೀಕರ್ ಅನ್ನು ಒದಗಿಸುತ್ತಿದೆ. ಆಪಲ್ (Apple) ತನ್ನ ಹೊಸ ಐಫೋನ್ 13ರಲ್ಲಿ ಹಿಂದಿನ ಕ್ಯಾಮೆರಾವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ಎಲ್ಲ ವಿಷಯಗಳ ಬಗ್ಗೆ ಆಪಲ್ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ : ನಿಮ್ಮ ಫೋನ್ನಲ್ಲಿ ಕೂಡ ಗ್ರೀನ್ ಬ್ಲಿಂಕರ್ ಕಾಣಿಸುತ್ತಿದೆಯೇ? ಇದರ ಹಿಂದಿನ ರಹಸ್ಯವೇನು?
ಕ್ಯಾಮೆರಾ ಲೆನ್ಸ್ ಅನ್ನು ನವೀಕರಿಸಲಾಗುತ್ತದೆ :
ಮಾಧ್ಯಮ ವರದಿಗಳ ಪ್ರಕಾರ ಆಪಲ್ ತನ್ನ ಹೊಸ ಐಫೋನ್ 13 ಹ್ಯಾಂಡ್ಸೆಟ್ಗಾಗಿ ಕ್ಯಾಮೆರಾ ಲೆನ್ಸ್ ಅನ್ನು ಸಹ ಬದಲಾಯಿಸಲಿದೆ. ಕಂಪನಿಯು ಪ್ರಸ್ತುತ ಸನ್ನಿ ಆಪ್ಟಿಕಲ್ ( Sunny Optical), ಲಾರ್ಗಾನ್ (Largan) ಮತ್ತು ಜೀನಿಯಸ್ ಎಲೆಕ್ಟ್ರಾನಿಕ್ ಆಪ್ಟಿಕಲ್ (Genius Electronic Optical) ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.