ಬೆಂಗಳೂರು : ಕರೋನದಿಂದ (Coronavirus) ತತ್ತರಿಸಿದ್ದ ಭಾರತ ಇದೀಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಕರೋನಾ ಅವಧಿಯಲ್ಲಿ ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಳಿಸಲಾಗಿದ್ದ Golden Chariot ಮತ್ತೆ ಹಳಿಗೆ ಮರಳುತ್ತಿದೆ. ಈ ರೈಲಿನ ಸವಾರಿ ರಾಯಲ್ ಶೈಲಿಯ ಭಾವನೆಯನ್ನು ನೀಡುತ್ತದೆ. ವಿಶೇಷ ಪ್ಯಾಕೇಜ್ ಮೂಲಕ ಈ ರೈಲಿನಲ್ಲಿ ಬುಕಿಂಗ್ (Booking) ಮಾಡುವ ಮೂಲಕ ದಕ್ಷಿಣ ಭಾರತ ಮತ್ತು ಗೋವಾದ ಸೌಂದರ್ಯವನ್ನು ಸವಿಯಬಹುದು.
ಕರೋನಾ (Coronavirus) ಕಾರಣದಿಂದ ಸ್ಥಗಿತಗೊಂಡಿದ್ದ Golden Chariot,ಮತ್ತೆ ತನ್ನ ಸಂಚಾರ ಆರಂಭಿಸಿದೆ. ಮಾರ್ಚ್ 14ರಿಂದ ಮತ್ತೆ ಈ ರೈಲು ಹಳಿಗೆ ಮರಳಿದೆ. ಬೆಂಗಳೂರಿನಿಂದ ಸಂಚಾರ ಆರಂಭಿಸುವ ಈ ರೈಲು ತಮಿಳುನಾಡು(Tamilnadu) , ಕರ್ನಾಟಕ, ಕೇರಳ, ಗೋವಾದಲ್ಲಿ ಸಂಚರಿಸಿ ಮತ್ತೆ ಬೆಂಗಳೂರಿಗೆ ಮರಳುತ್ತದೆ. ಈ ರೈಲಿಗೆ ಗೋಲ್ಡನ್ ರಥ ಎಂದು ಕೂಡ ಕರೆಯಲಾಗುತದೆ. ಹೆಸರಿಗೆ ತಕ್ಕಂತೆ ಈ ರೈಲಿನಲ್ಲಿ ಆರಾಮದಾಯಕ ಫರ್ನಿಚರ್, ರೂಮ್ಗಳು , ಬಾತ್ ರೂಂ, ಅತ್ಯದ್ಭುತವಾದ interior desighnಗಳ್ಳನ್ನು ಒಳಗೊಂಡಿದೆ.
ಇದನ್ನೂ ಓದಿ : ಇನ್ಮುಂದೆ ದೊಡ್ಡ ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ದುಬಾರಿಯಾಗಲಿದೆ
ರೈಲಿನ ಪ್ಯಾಕೇಜ್ ಎಷ್ಟಿರಲಿದೆ ?
ಈ Golden Chariotನ ಪ್ಯಾಕೇಜ್ 6 ರಾತ್ರಿ 7 ದಿನಗಳ ಪ್ರಯಾಣವನ್ನ ಒಳಗೊಂಡಿದೆ. ಬೆಂಗಳೂರಿನಿಂದ (Bengaluru) ಪ್ರಯಾಣ ಆರಂಭಿಸುವ ರೈಲು ಬಂಡೀಪುರ ನ್ಯಾಷನಲ್ ಪಾರ್ಕ್, ಮೈಸೂರ್, ಚಿಕ್ಕಮಗಳೂರು, ಹಂಪಿ, ಹಂಪಿ, ಐಹೋಳೆ, ಪಟ್ಟದಕಲ್, ಗೋವಾ ಮೂಲಕ ಬೆಂಗಳೂರಿಗೆ ಮರಳಲಿದೆ. ಎರಡನೇ ಪ್ಯಾಕೇಜ್ 3 ರಾತ್ರಿ -4 ದಿನಗಳ ಪ್ರಯಾಣವನ್ನು ಒಳಗೊಂಡಿದೆ. ಇದ್ರಲ್ಲಿ ಬೆಂಗಳೂರು ಮೈಸೂರು, ಹಂಪಿ, ಮಹಾಬಲಿಪುರಂ ಮೂಲಕ ರೈಲು (Train) ಮತ್ತೆ ಬೆಂಗಳೂರಿಗೆ ಮರಳಲಿದೆ. ಇಬ್ಬರಿಗಾಗಿ ಇರುವ ಕ್ಯಾಬಿನ್ ನ ದರ 2,08,090 ಆಗಿದೆ. ಇನ್ನು Single Supplementನ ಬೆಲೆ 1,56,070 ರೂ. ಆಗಿದೆ. ಇದರಲ್ಲಿ ಶೇ ೩೫ ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಲ್ಲದೆ Golden Chariot ಬುಕ್ಕಿಂಗ್ ಮಾಡಿದರೆ, ರಿಟರ್ನ್ ಏರ್ ಟಿಕೆಟ್ ಕೂಡ ಉಚಿತವಾಗಿ ಸಿಗಲಿದೆ.
ಈ ಲುಕ್ಷುರಿ ರೈಲ್ ಅನ್ನು 2008ರಲ್ಲಿ, ಕರ್ನಾಟಕ ರಾಜ್ಯ ಪರ್ಯಟನ ವಿಕಾಸ ನಿಗಮ (KSTDC) ಆರಂಭಿಸಿತು. ಇದಾದ ನಂತರ IRCTC ಇದನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿತು. ಈ ರೈಲಿನ ಬುಕ್ಕಿಂಗ್ ಅಧಿಕೃತ ವೆಬ್ಸೈಟ್ www.goldenchariot.org ಮೂಲಕ ಮಾಡಿಕೊಳ್ಳಬಹುದು.
ಇದನ್ನೂ ಓದಿ : ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಪ್ರಮುಖ ಬದಲಾವಣೆ, ಈ ಟೆಕ್ನಿಕ್ ಬಳಸಿ ಕನ್ಫರ್ಮ್ ಟಿಕೆಟ್ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.