Viral Video: 6 ಸಾವಿರ ಅಡಿ ಎತ್ತರದಲ್ಲಿ ಉಯ್ಯಾಲೆ ತೂಗುತ್ತಿದ್ದ ಮಹಿಳೆಯರು, ಮುಂದೇನಾಯ್ತು? ವಿಡಿಯೋ ನೋಡಿ

Viral Video - ಬೆಚ್ಚಿಬೀಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಬೆಟ್ಟದ ಒಂದು ತುದಿಯಲ್ಲಿ ಉಯ್ಯಾಲೆ ತೂಗುತ್ತಿದ್ದಾರೆ. ಹೀಗಿರುವಾಗ ಆಕಸ್ಮಿಕವಾಗಿ ಉಯ್ಯಾಲೆಯ ಬ್ಯಾಲೆನ್ಸ್ ಬಿಗಡಾಯಿಸುತ್ತದೆ.

Written by - Nitin Tabib | Last Updated : Jul 15, 2021, 04:20 PM IST
  • 6300 ಅಡಿ ಎತ್ತರದ ಬೆಟ್ಟದ ಮೇಲೆ ಮಹಿಳೆಯರ ಉಯ್ಯಾಲೆ ಮಜಾ.
  • ಮಜಾ ಸವಿಯುವಾಗಲೆ ನಡೆದುಹೋಗಿದೆ ಊಹಿಸಲಾರದ ಈ ಘಟನೆ.
  • ಮುಂದೇನಾಯ್ತು ತಿಳಿಯಲು ವಿಡಿಯೋ ವಿಕ್ಷೀಸಿ.
Viral Video: 6 ಸಾವಿರ ಅಡಿ ಎತ್ತರದಲ್ಲಿ ಉಯ್ಯಾಲೆ ತೂಗುತ್ತಿದ್ದ ಮಹಿಳೆಯರು, ಮುಂದೇನಾಯ್ತು? ವಿಡಿಯೋ ನೋಡಿ  title=
Viral Video (Video Grab)

Viral Video - ಬೆಚ್ಚಿಬೀಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಬೆಟ್ಟದ ಒಂದು ತುದಿಯಲ್ಲಿ ಉಯ್ಯಾಲೆ ತೂಗುತ್ತಿದ್ದಾರೆ. ಹೀಗಿರುವಾಗ ಆಕಸ್ಮಿಕವಾಗಿ ಉಯ್ಯಾಲೆಯ ಬ್ಯಾಲೆನ್ಸ್ ಬಿಗಡಾಯಿಸುತ್ತದೆ. ಈ ಬೆಟ್ಟ 6300 ಅಡಿ ಎತ್ತರದಲ್ಲಿದೆ. ಆಕಸ್ಮಿಕ ವಾಗಿ ಉಯ್ಯಾಲೆಯ ಸರಪಳಿ ಹರಿಯುವ ಕಾರಣ ಇದೆಲ್ಲಾ ಸಂಭವಿಸಿದೆ.

ವಾಸ್ತವದಲ್ಲಿ ಈ ಘಟನೆ ರಷ್ಯಾದ (Russia) ದಗಿಸ್ಥಾನ್ (Dagestan) ನಿಂದ ವರದಿಯಾಗಿದೆ. ಟ್ವಿಟ್ಟರ್ ಮೇಲೆ 'ರಾಂಡಂ ಅಂಕಲ್' ಹೆಸರಿನ ಬಳಕೆದಾರರೋಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದಗಿಸ್ಥಾನನಲ್ಲಿರುವ ಸುಲಾಕ್ ಕೈನ್ಯನ್ ಹೆಸರಿನ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಒಂದು ತೂಗುಯ್ಯಾಲೆ ಹತ್ತಿರ ಸಾಕಷ್ಟು ಜನ ನೆರೆದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಉಯ್ಯಾಲೆ ಆಡುವ ಮಜದಲ್ಲಿದ್ದಾರೆ. ಇಬ್ಬರು ತುಂಬಾ ಸಲೀಸಾಗಿ ಉಯ್ಯಾಲೆಯಲ್ಲೂ ತೂಗುತ್ತಿದ್ದಾರೆ.

ಇನ್ನೊಂದೆಡೆ ವ್ಯಕ್ತಿಯೊಬ್ಬರು ಹಿಂದಿನಿಂದ ಅವರ ಉಯ್ಯಾಲೆಯನ್ನು (Swing Ride) ದೂಕುತ್ತಿದ್ದಾರೆ. ಹೀಗಿರುವಾಗ ಆಕಸ್ಮಿಕವಾಗಿ ಉಯ್ಯಾಲೆಯ ಒಂದು ಬದಿಯ ಸರಪಳಿ ಮುರಿಯುತ್ತದೆ ಹಾಗೂ ಇಬ್ಬರು ಮಹಿಳೆಯರು ಬೆಟ್ಟದ ಮತ್ತೊಂದು ತುದಿಯಲ್ಲಿರುವ ಪ್ರಪಾತಕ್ಕೆ ಬೀಳುತ್ತಾರೆ. ವಿಡಿಯೋದಲ್ಲಿ ಈ ದೃಶ್ಯವನ್ನು ಮಾತ್ರ ಚಿತ್ರಿಸಲಾಗಿದೆ. ಆದ್ರೆ, ಇಬ್ಬರು ಮಹಿಳೆಯರನ್ನು (Women) ರಕ್ಷಿಸಲಾಗಿದ್ದು, ಇಬ್ಬರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. 

ಇದನ್ನೂ ಓದಿ-COVID-19 Effect: ಕೊರೊನಾದಿಂದ ವಾಡಿಕೆ ಲಸಿಕೆ ತಪ್ಪಿಸಿಕೊಂಡ 23 ಮಿಲಿಯನ್ ಮಕ್ಕಳು..!

ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇಬ್ಬರು ಮಹಿಳೆಯರು ಕೆಳಗೆ ಬೀಳುತ್ತಿದ್ದಂತೆ ಜನರು ಅವರನ್ನು ಹಿಡಿದಿದ್ದಾರೆ ಮತ್ತು ಅವರನ್ನು ರಕ್ಷಿಸಿದ್ದಾರೆ. ಎನ್ನಲಾಗಿದೆ. ಮಹಿಳೆಯರು ತುಂಬಾ ಹೆದರಿಕೊಂಡಿದ್ದರು ಮತ್ತು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಇದನ್ನೂ ಓದಿ-ಬ್ರಿಟನ್ ನಲ್ಲಿ ವರ್ಣಭೇದ ನೀತಿಯು ಒಂದು ಬಿಕ್ಕಟ್ಟಾಗಿದೆ- ಬೋರಿಸ್ ಜಾನ್ಸನ್

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸ್ಥಳೀಯ ಆಡಳಿತ ಈ ಉಯ್ಯಾಲೆ ಸುರಕ್ಷಿತ ಸಾಮಗ್ರಿಗಳಿಂದ ನಿರ್ಮಿಸಲಾಗಿರಲಿಲ್ಲ  ಇದೆ ಕಾರಣದಿಂದ ಈ ಘಟನೆ ಸಂಭವಿಸಿದೆ ಹಾಗೂ ಇದೀಗ ಉಯ್ಯಾಲೆಯ ಸುರಕ್ಷತೆತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಂಬುದನ್ನು ಕೂಡ ಸುನಿಶ್ಚಿತಗೊಳಿಸಲಾಗುತ್ತಿದೆ.

ಇದನ್ನೂ ಓದಿ-MasterChef Australia: ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಗೆದ್ದ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News