ನವದೆಹಲಿ: ಚಿನ್ನದ ಬೆಲೆಯಲ್ಲಿ ಇಂದು 100 ಗ್ರಾಂಗೆ 600 ರೂ. ಇಳಿಕೆ ಕಂಡಿದ್ದು, ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಮಂಗಳವಾರ 46,010 ರೂ. ತಲುಪಿದೆ. ಡಾಲರ್ ಬೆಲೆಯಲ್ಲಿ ಸ್ಥಿರವಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ದರದಲ್ಲಿ ಸತತ ಕುಸಿತ ಕಾಣುತ್ತಿದ್ದು, ಇದು ಚಿನ್ನ ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಏತನ್ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನ ತಾಜಾ ಬೇಡಿಕೆಯನ್ನು ಸೃಷ್ಟಿಸಿದ್ದರಿಂದ ಲಾಭ ಗಳಿಸಿದೆ. ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ 9,915 ಲಾಟ್ಗಳ ವ್ಯಾಪಾರ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ ಚಿನ್ನವು ಶೇ.0.22 ರಷ್ಟು ವಹಿವಾಟು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: KYC Update ಹೆಸರಿನಲ್ಲಿ ವಂಚನೆ ಬಗ್ಗೆ ಆರ್ಬಿಐ ಎಚ್ಚರಿಕೆ, ಕೇವಲ 1 ತಪ್ಪಿನಿಂದ ಖಾಲಿಯಾಗುತ್ತೆ ಖಾತೆ
ಈ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಶೇ.02ರಷ್ಟು ಇಳಿಕೆಯಾಗಿದ್ದು, ಪ್ರತಿ ಔನ್ಸ್ ಗೆ 1,790.74 ಡಾಲರ್ ತಲುಪಿದೆ. ಅಮೆರಿಕನ್ ಡಾಲರ್ ಸ್ಥಿರವಾಗಿದ್ದರೂ ಯುಎಸ್ ಚಿನ್ನದ ಫ್ಯೂಚರ್ಸ್ ಶೇ. 0.1 ರಷ್ಟು ಇಳಿಕೆಯಾಗಿ 1,792.10 ಕ್ಕೆ ತಲುಪಿದೆ.
ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ(Bengaluru) ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 43,990 ರೂ.
ಮುಂಬೈನಲ್ಲಿ ಚಿನ್ನದ ದರ 22 ಕ್ಯಾರೆಟ್ನ ಪ್ರತಿ 10 ಗ್ರಾಂಗೆ 46,010 ರೂ.
ಚೆನ್ನೈನಲ್ಲಿ ಚಿನ್ನದ ಬೆಲೆ(Gold Price) 22 ಕ್ಯಾರೆಟ್ನ 10 ಗ್ರಾಂಗೆ 44,390 ರೂ.
ದೆಹಲಿಯಲ್ಲಿ ಚಿನ್ನದ ದರ 22 ಕ್ಯಾರೆಟ್ನ ಪ್ರತಿ 10 ಗ್ರಾಂಗೆ 46,140 ರೂ.
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 46,550 ರೂ.
ಹೈದರಾಬಾದ್ನಲ್ಲಿ ಚಿನ್ನದ ಬೆಲೆ 10 ಕ್ಯಾರೆಟ್ಗೆ 10 ಗ್ರಾಂಗೆ 43,990 ರೂ.
ಕೇರಳದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್(22 Carat Gold Rate) ಗೆ 43,990 ರೂ.
ಪುಣೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 45,220 ರೂ.
ಅಹಮದಾಬಾದ್ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 45,180 ರೂ.
ಲಕ್ನೋದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 46,140 ರೂ.
ಜೈಪುರದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 46,000 ರೂ.
ಪಾಟ್ನಾದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 45,220 ರೂ.
ನಾಗಪುರದಲ್ಲಿ ಚಿನ್ನದ ದರವು 10 ಕ್ಯಾರೆಟ್ನ ಪ್ರತಿ 10 ಗ್ರಾಂಗೆ 46,010 ರೂ.
ಇದನ್ನೂ ಓದಿ: SBI Latest News: SBI ಈ ವಿಶೇಷ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಇಂದೇ ಕೊನೆ ದಿನ
ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಆಭರಣ ಅಂಗಡಿಯಲ್ಲಿನ ದರಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ಗ್ರಾಹಕರು ದಯವಿಟ್ಟು ಗಮನಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.