Viral Video : ಮದುವೆ ಮಂಟಪದಲ್ಲೇ ವರನೆದುರೇ ಬೇರೊಬ್ಬನಿಗೆ ಹಾರ ಹಾಕಿದ ವಧು..!

ವೈರಲ್ ಆಗುತ್ತಿರುವ ಕೆಲವು ಸೆಕೆಂಡುಗಳ ವಿಡಿಯೋ ಮದುವೆ ಮಂಟಪದಲ್ಲಿ ನಡೆದಿರುವ ಘಟನೆಯಾಗಿದೆ. ಇದನ್ನು ನೋಡಿದಾಗ, ಮದುವೆಗೆ ಸಂಬಂಧಿಸಿದ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿರುವಂತೆ ಕಾಣುತ್ತದೆ.

Written by - Ranjitha R K | Last Updated : Sep 22, 2021, 08:35 PM IST
  • ಮದುವೆ ಮಂಟಪದಲ್ಲಿ ವಧು ಮಾಡಿದ ಯಡವಟ್ಟು
  • ಫುಲ್ ವೈರಲ್ ಆಯಿತು ವಿಡಿಯೋ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗೆ ಭಾರೀ ಪ್ರತಿಕ್ರಿಯೆ
Viral Video : ಮದುವೆ ಮಂಟಪದಲ್ಲೇ ವರನೆದುರೇ ಬೇರೊಬ್ಬನಿಗೆ  ಹಾರ ಹಾಕಿದ ವಧು..!  title=
ಮದುವೆ ಮಂಟಪದಲ್ಲಿ ವಧು ಮಾಡಿದ ಯಡವಟ್ಟು (photo instagram)

ನವದೆಹಲಿ : ಮದುವೆ, ನೃತ್ಯ ಮತ್ತು ಹಾಸ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ಹೆಚ್ಚು ಕಾಣ ಸಿಗುತ್ತವೆ. ಈ ಕೆಲವು ವೀಡಿಯೊಗಳನ್ನು ನೋಡಿದರೆ ನಗು ತಡೆಯುವುದೇ ಇಲ್ಲ. ಇನ್ನು ಕೆಲವು ವೀಡಿಯೊಗಳನ್ನು ನೋಡುವಾಗ ಭಾವುಕಾರಾಗಿ ಬಿಡುತ್ತೇವೆ. ಭಾವುಕರಾಗುತ್ತೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿರುವ  ವಿಡಿಯೋ ಸ್ವಲ್ಪ ಭಿನ್ನವಾಗಿದೆ. ವಿಡಿಯೋ ಮದುವೆ (Marriage video) ಸಮಾರಂಭಕ್ಕೆ ಸಂಬಂಧಿಸಿದ್ದರೂ, ಅದರಲ್ಲಿರುವ ದೃಶ್ಯ ಕಂಡು  ನೆಟ್ಟಿಗರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಮದುವೆಯ ಈ ವಿಡಿಯೋವನ್ನು ಕಡಿಮೆ ಸಮಯದಲ್ಲಿ ನೂರಾರು ಬಾರಿ ವೀಕ್ಷಿಸಲಾಗಿದೆ. ಮತ್ತು ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.  

ವೈರಲ್ (Viral video) ಆಗುತ್ತಿರುವ ಕೆಲವು ಸೆಕೆಂಡುಗಳ ವಿಡಿಯೋ ಮದುವೆ ಮಂಟಪದಲ್ಲಿ ನಡೆದಿರುವ ಘಟನೆಯಾಗಿದೆ. ಇದನ್ನು ನೋಡಿದಾಗ, ಮದುವೆಗೆ ಸಂಬಂಧಿಸಿದ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿರುವಂತೆ ಕಾಣುತ್ತದೆ. ಆದರೂ ವಧು ಒಂದು ಆವಾಂತರ ಮಾಡಿಯೇ ಬಿಡುತ್ತಾಳೆ. ವಧುವಿನ  ಕೆಲಸ ನೋಡಿ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವೇ ಆಶ್ಚರ್ಯ. ಲ್ಲಿ ನಡೆದಿರುವುದು ಇಷ್ಟೇ. 

 
 
 
 

 
 
 
 
 
 
 
 
 
 
 

A post shared by Niranjan Mahapatra (@official_viralclips)

 

ಇದನ್ನೂ ಓದಿ : Viral Video: ಬೆಕ್ಕಿನೊಂದಿಗೆ ಈ ಪುಟ್ಟ ಬಾಲಕ ಏನು ಮಾಡಿದ್ದಾನೆ ನೋಡಿ...

ಮದುವೆ ಸಮಾರಂಭ (Marriage video) ಮುಗಿದ ನಂತರ, ವಧು ಹತ್ತಿರದಲ್ಲಿದ್ದ ವ್ಯಕ್ತಿಯ ಕುತ್ತಿಗೆಗೆ ಹಾರ ಹಾಕುತ್ತಾಳೆ. ವಧು ವರರ ಸಮೀಪದಲ್ಲಿದ್ದ ಪುರೋಹಿತರು, ಮದುವೆಗೆ ಸಂಬಂಧಿಸಿದ ವಸ್ತುಗಳನ್ನು ಎತ್ತಿಕೊಳ್ಳುತ್ತಿರುವುದು ಕಾಣಿಸುತ್ತದೆ.  ವಧುವರರು ವೇದಿಕೆಯ ಮೇಲೆಯೇ ನಿಂತಿದ್ದಾರೆ. ಎಲ್ಲವೂ ಸಾಮಾನ್ಯವಾಗಿರುವಂತೆಯೇ ಕಾಣುತ್ತದೆ. ಆದರೆ ಇದ್ದಕ್ಕಿದ್ದಂತೆ ವಧು ಸಮೀಪದಲ್ಲಿರುವ ವ್ಯಕ್ತಿಗೆ ಹಾರ ಹಾಕಿ ಬಿಡುತ್ತಾಳೆ.  

ವಿಡಿಯೋಗೆ ಸಾಮಾಜಿಕ ಮಾಧ್ಯಮ (Social media) ಬಳಕೆದಾರರು ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬರು ಏನಾಗುತ್ತಿದೆ ಇಲ್ಲಿ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ಒಬ್ಬರೊಂದಿಗೆ  ಇನ್ನೊಬ್ಬರು ಉಚಿತ ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ಹುಡುಗಿ ಒಂದೇ ದಿನ ಬ್ಬರನ್ನು ಮದುವೆಯಾಗುತ್ತಿದ್ದಾಳೆ ಎಂದು ಬರೆದಿದ್ದಾರೆ. ಇನ್ನೊಬ್ಬರು, ಇದೊಂದು ಮದುವೆಗೆ ಸಂಬಂಧಿಸಿದ ಶಾಸ್ತ್ರವಾಗಿದೆ. ಕೆಲವು ಕಡೆ ಸಪ್ತಪದಿಗೆ ಮುನ್ನ ವಧುವಿನ ಸಹೋದರನಿಗೆ ಹಾರ ಹಾಕುವ ಪದ್ದತಿಯಿದೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಜನ ಮಾತ್ರ ಎಲ್ಲದರಲ್ಲೂ ಹಾಸ್ಯವನ್ನು ಹುಡುಕುತ್ತಿರುತ್ತಾರೆ.

ಇದನ್ನೂ ಓದಿ : Viral Video: ಇಡೀ ಜಿಂಕೆಯನ್ನೇ ನುಂಗುತ್ತಿರುವ ದೈತ್ಯ ಹೆಬ್ಬಾವು, ಇಲ್ಲಿದೆ ಹೃದಯ ಮಿಡಿಯುವ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News