ನವದೆಹಲಿ: ಹಾವುಗಳಂದ್ರೆ ಯಾರಿಗೆ ತಾನೇ ಭಯ ಇರಲ್ಲ ಹೇಳಿ. ಎಲ್ಲಿಯಾದ್ರೂ ಹಾವು(Snakes) ಕಂಡರೆ ಹೌಹಾರಿ ಹೋಗುವವರೇ ಜಾಸ್ತಿ. ದಾರಿಯಲ್ಲಿ ಹಾವು ಪ್ರತ್ಯಕ್ಷವಾದರೆ ಸಾಕು ಹೆದರಿ ಮಾರುದ್ದ ಓಡುವ ಜನರಿದ್ದಾರೆ. ಮಹಿಳೆ(Women)ಯರಂತೂ ಹಾವು ನೋಡಿದರೆ ಜೀವವೇ ಹೋದಂತೆ ಜೋರಾಗಿ ಕಿರುಚಿಬಿಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಜನರಿಗೆ ಜೀವಭಯ ಹುಟ್ಟಿಸುವ ಹಾವುಗಳ ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿರುತ್ತವೆ.
ವಿವಿಧ ರೀತಿಯ ಹಾವುಗಳ ಅನೇಕ ವಿಡಿಯೋ(Viral Video)ಗಳನ್ನು ಇಂಟರ್ ನೆಟ್ ಲೋಕದಲ್ಲಿ ಕಂಡಿರುತ್ತೀರಿ. ಕೆಲವರು ಭಾರೀ ಗಾತ್ರದ ಹೆಬ್ಬಾವು ಸೇರಿದಂತೆ ವಿವಿಧ ಜಾತಿಯ ಹಾವುಗಳನ್ನು ಮನೆಯಲ್ಲಿಯೇ ಸಾಕುತ್ತಿರುತ್ತಾರೆ. ಹಾವುಗಳನ್ನು ಕಂಡು ಹೌಹಾರಿ ಹೋಗುವ ಜನರ ಮಧ್ಯೆ ಅನೇಕರು ಹಾವುಗಳನ್ನು ಸಾಕುವುದಲ್ಲದೆ ಅವುಗಳಿಗೆ ಮಾತೂ ಕೂಡ ಕಲಿಸಿರುತ್ತಾರೆ. ಅದೇ ರೀತಿಯ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರಿಗೆ ಅಚ್ಚರಿಯ ಜೊತೆಗೆ ಆಶ್ಚರ್ಯವೂ ಆಗಿದೆ.
ಇದನ್ನೂ ಓದಿ: ಚಿನ್ನಕ್ಕಿಂತಲೂ ದುಬಾರಿಯಂತೆ ಈ ಹಣ್ಣು..!
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ತಾನು ಸಾಕಿದ ಹಾವಿಗೆ (Pet Snake) ಸಿಹಿಮುತ್ತು ನೀಡಿದ್ದಾಳೆ. ರಾಯಲ್ ಪೈಥಾನ್ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಲೈಕ್ ಮಾಡಿರುವ ಈ ವಿಡಿಯೋ ಇನ್ನೂ ಶೇರ್ ಆಗುತ್ತಲೇ ಇದೆ.
ತನ್ನ ಮೈಮೇಲೆ ಹಾವು ಹಾಕಿಕೊಂಡಿರುವ ಮಹಿಳೆ ಅದಕ್ಕೆ ಕಿಸ್ ಮಾಡುತ್ತಾಳೆ. ಆಕೆ ಸಿಹಿಮುತ್ತು ನೀಡುತ್ತಲೇ ಹಾವಿ(Snake Kiss)ಗೆ ಸಖತ್ ಖುಷಿಯಾಗಿದೆ. ಆಹಾ..! ಸಿಹಿಮುತ್ತು..! ಎನ್ನುತ್ತಲೇ ಹಾವು ಖುಷಿಯಿಂದ ತನ್ನ ಬಾಯಿ ತೆರೆದು ನಗುತ್ತದೆ. ಇದನ್ನು ಗಮನಿಸಿದ ಮಹಿಳೆಗೆ ಆಶ್ಚರ್ಯದ ಜೊತೆಗೆ ಸಂತೋಷವಾಗಿದೆ. ಕಿಸ್ ಮಾಡಿದ್ದಕ್ಕೆ ಹಾವು ಖುಷಿಪಟ್ಟಿದ್ದನ್ನು ಕಂಡು ಆ ಮಹಿಳೆ ನಗುತ್ತಲೇ ಒಂದುಕ್ಷಣ ಭಾವುಕಳಾಗಿದ್ದಾಳೆ. ಹಾವಿಗೆ ಮಹಿಳೆ ‘ಐ ಲವ್ ಯೂ’, ‘ಐ ಲವ್ ಯೂ’ ಎಂದು ಹೇಳಿದ್ದಾಳೆ. ಮಹಿಳೆ ಕಿಸ್ ಮಾಡುತ್ತಿದ್ದಂತೆಯೇ ತನ್ನ ಬಾಯಿ ತೆಗೆದು ಪ್ರತಿಕ್ರಿಯೆ ನೀಡಿರುವ ಹಾವು ಕಂಡ ನೆಟಿಜನ್ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಹಾವು ಸಾಕಿರುವ ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Pakistan: ಪಾಕಿಸ್ತಾನಕ್ಕೆ ಕಹಿಯಾದ ‘ಸಿಹಿ’, ಪೆಟ್ರೋಲ್ ಗಿಂತಲೂ ಸಕ್ಕರೆ ದುಬಾರಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ